More

    ಸತತ 5 ಸೋಲುಗಳ ಬಳಿಕ ಗೆಲುವಿನ ಹಳಿಗೇರಿದ ಕೆಕೆಆರ್; ರಾಜಸ್ಥಾನ ಎದುರು 7 ವಿಕೆಟ್ ಜಯ

    ಮುಂಬೈ: ಬೌಲರ್‌ಗಳ ಶಿಸ್ತುಬದ್ಧ ದಾಳಿಯ ಜತೆಗೆ ಬ್ಯಾಟರ್‌ಗಳ ಸಂಘಟಿತ ಹೋರಾಟದ ಫಲವಾಗಿ ಕೋಲ್ಕತ ನೈಟ್‌ರೈಡರ್ಸ್‌ ತಂಡ ಐಪಿಎಲ್-15ರಲ್ಲಿ ಗೆಲುವಿನ ಹಳಿಗೇರಿತು. ಸತತ 5 ಸೋಲುಗಳಿಂದ ಕಂಗೆಟ್ಟಿದ್ದ ಕೆಕೆಆರ್ ತಂಡ ಈ ಗೆಲುವಿನೊಂದಿಗೆ ಪ್ಲೇಆಫ್ ಹಂತದ ಹೋರಾಟವನ್ನು ಜೀವಂತವಾಗಿರಿಸಿಕೊಂಡಿತು. ವಾಂಖೆಡೆ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಹಣಾಹಣಿಯಲ್ಲಿ ಶ್ರೇಯಸ್ ಅಯ್ಯರ್ ಪಡೆ 7 ವಿಕೆಟ್‌ಗಳಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿತು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡ, ಆರಂಭಿಕ ವೈಫಲ್ಯದ ನಡುವೆಯೂ ನಾಯಕ ಸಂಜು ಸ್ಯಾಮ್ಸನ್ (54 ರನ್, 49 ಎಸೆತ, 7 ಬೌಂಡರಿ, 1 ಸಿಕ್ಸರ್) ಅರ್ಧಶತಕದಾಟ ಹಾಗೂ ಶಿಮ್ರೋನ್ ಹೆಟ್ಮೆಯೆರ್ (27*ರನ್, 13 ಎಸೆತ, 1 ಬೌಂಡರಿ, 2 ಸಿಕ್ಸರ್) ಡೆತ್ ಓವರ್‌ಗಳಲ್ಲಿ ತೋರಿದ ಬಿರುಸಿನ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್‌ಗೆ 152 ರನ್ ಕಲೆಹಾಕಿತು. ಪ್ರತಿಯಾಗಿ ಅನುಭವಿ ನಿತೀಶ್ ರಾಣಾ (48*ರನ್, 37 ಎಸೆತ, 3 ಬೌಂಡರಿ, 2 ಸಿಕ್ಸರ್) ಹಾಗೂ ರಿಂಕು ಸಿಂಗ್ (42*ರನ್, 23 ಎಸೆತ, 6 ಬೌಂಡರಿ, 1 ಸಿಕ್ಸರ್) ಪ್ರತಿಹೋರಾಟದ ಫಲವಾಗಿ ಕೆಕೆಆರ್ 19.1 ಓವರ್‌ಗಳಲ್ಲಿ 3 ವಿಕೆಟ್‌ಗೆ 158 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

    ರಾಜಸ್ಥಾನ ರಾಯಲ್ಸ್: 5 ವಿಕೆಟ್‌ಗೆ 152 (ಸಂಜು ಸ್ಯಾಮ್ಸನ್ 54, ಶಿಮ್ರೋನ್ ಹೆಟ್ಮೆಯರ್ 27*, ರಿಯಾನ್ ಪರಾಗ್ 19, ಜೋಸ್ ಬಟ್ಲರ್ 22, ಟಿಮ್ ಸೌಥಿ 46ಕ್ಕೆ 2, ಉಮೇಶ್ ಯಾದವ್ 24ಕ್ಕೆ 1, ಅನುಕೂಲ್ ರಾಯ್ 28ಕ್ಕೆ 1), ಕೋಲ್ಕತ ನೈಟ್‌ರೈಡರ್ಸ್‌: 19.1 ಓವರ್‌ಗಳಲ್ಲಿ 3 ವಿಕೆಟ್‌ಗೆ 158 (ನಿತೀಶ್ ರಾಣಾ 48*, ರಿಂಕು ಸಿಂಗ್ 42*, ಶ್ರೇಯಸ್ ಅಯ್ಯರ್ 34, ಬಾಬಾ ಇಂದ್ರಜಿತ್ 15, ಟ್ರೆಂಟ್ ಬೌಲ್ಟ್ 25ಕ್ಕೆ 1, ಪ್ರಸಿದ್ಧ ಕೃಷ್ಣ 37ಕ್ಕೆ 1, ಕುಲದೀಪ್ ಸೆನ್ 28ಕ್ಕೆ 1)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts