More

    ಪುಟಿದೇಳುವ ವಿಶ್ವಾಸದಲ್ಲಿ ರಾಜಸ್ಥಾನ ; ಇಂದು ಗೆದ್ದರಷ್ಟೇ ಕೆಕೆಆರ್‌ಗೆ ಉಳಿಗಾಲ

    ಮುಂಬೈ: ಸತತ 5 ಸೋಲುಗಳಿಂದ ಕಂಗೆಟ್ಟಿರುವ 2 ಬಾರಿಯ ಚಾಂಪಿಯನ್ ಕೋಲ್ಕತ ನೈಟ್‌ರೈಡರ್ಸ್‌ ಐಪಿಎಲ್-15ರ ತನ್ನ ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಮವಾರ ಎದುರಿಸಲಿದೆ. ಸಮರ್ಥ ತಂಡದ ಸಂಯೋಜನೆಗೆ ಸಾಕಷ್ಟು ಪರದಾಡುತ್ತಿರುವ ಕೆಕೆಆರ್ ಗೆದ್ದರಷ್ಟೇ ಪ್ಲೇಆ್ ರೇಸ್‌ನಲ್ಲಿ ಉಳಿದಿರುವ ಅಲ್ಪ ಆಸೆಯನ್ನು ಜೀವಂತವಿಡಲಿದೆ. ಪ್ರಮುಖವಾಗಿ ಬ್ಯಾಟರ್‌ಗಳೇ ಕೈಕೊಡುತ್ತಿರುವುದು ಕೆಕೆಆರ್‌ಗೆ ದೊಡ್ಡ ಹಿನ್ನಡೆಯುಂಟು ಮಾಡಿದೆ. ಮತ್ತೊಂದೆಡೆ, ಮುಂಬೈ ಇಂಡಿಯನ್ಸ್ ಎದುರು ಹಿಂದಿನ ಪಂದ್ಯದಲ್ಲಿ ಶರಣಾಗಿರುವ ರಾಜಸ್ಥಾನ ರಾಯಲ್ಸ್ ತಂಡ ಗೆಲುವಿನ ಹಳಿಗೇರುವ ತವಕದಲ್ಲಿದೆ.

    * ಪುಟಿದೇಳುವ ವಿಶ್ವಾಸದಲ್ಲಿ ರಾಜಸ್ಥಾನ
    ಇದುವರೆಗೂ ಆಡಿರುವ 9 ಪಂದ್ಯಗಳಲ್ಲಿ 6 ಜಯ ದಾಖಲಿಸಿರುವ ರಾಜಸ್ಥಾನ ತಂಡ ಉತ್ತಮ ಸ್ಥಿತಿಯಲ್ಲಿದೆ. ಬ್ಯಾಟಿಂಗ್‌ನಲ್ಲಿ ಲಯದ ತಪ್ಪಿದ ಪರಿಣಾಮ ಮುಂಬೈ ಎದುರು ನಿರಾಸೆ ಅನುಭವಿಸಿತ್ತು. ಯಜುವೇಂದ್ರ ಚಾಹಲ್, ಆರ್.ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ ಕೃಷ್ಣ ಒಳಗೊಂಡ ಬೌಲಿಂಗ್ ಪಡೆಗೆ ಬ್ಯಾಟರ್‌ಗಳಿಂದ ಮತ್ತಷ್ಟು ಬೆಂಬಲ ಅಗತ್ಯವಿದೆ. ಆರಂಭಿಕ ಜೋಸ್ ಬಟ್ಲರ್ ಹೊರತುಪಡಿಸಿ ಇತರರಿಂದ ಸ್ಥಿರ ನಿರ್ವಹಣೆ ಬರುತ್ತಿಲ್ಲ.

    * ಕೆಕೆಆರ್‌ಗೆ ಗೆಲುವೊಂದೇ ಮಂತ್ರ
    ಉಮೇಶ್ ಯಾದವ್, ಸುನೀಲ್ ನಾರಾಯಣ್ ಜೋಡಿ ಬೌಲಿಂಗ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದರೆ, ಶ್ರೇಯಸ್ ಅಯ್ಯರ್ ಹೊರತುಪಡಿಸಿ ಇತರ ಬ್ಯಾಟರ್‌ಗಳು ತಂಡಕ್ಕೆ ಕೈಕೊಡುತ್ತಿದ್ದಾರೆ. ಐಪಿಎಲ್ ಮೂಲಕವೇ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದ ವೆಂಕಟೇಶ್ ಅಯ್ಯರ್ ಹಾಗೂ ಮಿಸ್ಟ್ರಿ ಸ್ಪಿನ್ನರ್ ಖ್ಯಾತಿ ವರುಣ್ ಚಕ್ರವರ್ತಿ ನಿರಾಸೆ ಮೂಡಿಸುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿತದ ಭೀತಿ ಎದುರಿಸುತ್ತಿರುವ ಕೆಕೆಆರ್ ತಂಡಕ್ಕೆ ಆಂಡ್ರೆ ರಸೆಲ್‌ರಿಂದ ಪರಿಣಾಮಕಾರಿ ನಿರ್ವಹಣೆ ಬರಬೇಕಿದೆ. ಇದುವರೆಗೂ ಆಡಿರುವ 9 ಪಂದ್ಯಗಳಲ್ಲಿ 6 ಸೋಲು ಕಂಡಿರುವ ಕೆಕೆಆರ್‌ಗೆ ಉಳಿದ 5 ಪಂದ್ಯಗಳಲ್ಲೂ ಗೆಲ್ಲಲೇಬೇಕಿದೆ.

    ಟೀಮ್ ನ್ಯೂಸ್:
    ರಾಜಸ್ಥಾನ: ಸೋಲಿನ ಹೊರತಾಗಿಯೂ ಬಹುತೇಕ ಹಿಂದಿನ ಪಂದ್ಯದಲ್ಲಿ ಆಡಿದ ತಂಡವೇ ಕಣಕ್ಕಿಳಿಯುವ ಸಾಧ್ಯತೆಗಳಿವೆ.
    ಕೆಕೆಆರ್: ಟಿಮ್ ಸೌಥಿ ಅಥವಾ ಪ್ಯಾಟ್ ಕಮ್ಮಿನ್ಸ್ ಇಬ್ಬರಲ್ಲಿ ಒಬ್ಬರು ಆಡಬಹುದು.

    ಪಂದ್ಯ ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಮುಖಾಮುಖಿ: 26, ಕೆಕೆಆರ್: 13, ರಾಜಸ್ಥಾನ: 12, ರದ್ದು: 1
    ಮೊದಲ ಮುಖಾಮುಖಿ: ರಾಜಸ್ಥಾನಕ್ಕೆ 7 ರನ್ ಜಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts