More

    ಇಂದು ಸಿಎಸ್‌ಕೆ-ಗುಜರಾತ್ ಟೈಟಾನ್ಸ್ ಹಣಾಹಣಿ ; ಪಾಂಡ್ಯ ವರ್ಸಸ್ ಜಡೇಜಾ

    ಪುಣೆ: ನಾಲ್ಕು ಜಯದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ಹಾಗೂ ಸತತ 4 ಸೋಲುಗಳ ಬಳಿಕ ಗೆಲುವಿನ ಹಳಿಗೇರಿರುವ ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ತಂಡಗಳು ಐಪಿಎಲ್-15ರಲ್ಲಿ ಭಾನುವಾರದ ಎರಡನೇ ಪಂದ್ಯದಲ್ಲಿ ಎದುರಾಗಲಿವೆ. ಉಭಯ ತಂಡಗಳಿಗೂ ಆಲ್ರೌಂಡರ್‌ಗಳೇ ಸಾರಥಿಗಳಾಗಿದ್ದು, ನಾಯಕತ್ವದ ಸವಾಲನ್ನು ಉತ್ತಮವಾಗಿ ನಿಭಾಯಿಸುತ್ತಿರುವ ಹಾರ್ದಿಕ್ ಪಾಂಡ್ಯ ಮತ್ತು ನಿಧಾನವಾಗಿ ನಾಯಕತ್ವದ ಸವಾಲಿಗೆ ಹೊಂದಿಕೊಳ್ಳುತ್ತಿರುವ ರವೀಂದ್ರ ಜಡೇಜಾ ಅವರಿಗೆ ಎಂಸಿಎ ಕ್ರೀಡಾಂಗಣದಲ್ಲಿ ಸತ್ವಪರೀಕ್ಷೆ ಎದುರಾಗಲಿದೆ.
    ನಾಯಕತ್ವಕ್ಕೆ ಬಡ್ತಿ ಪಡೆದ ಬಳಿಕ ಹಾರ್ದಿಕ್ ಪಾಂಡ್ಯ ವೈಯಕ್ತಿಕ ನಿರ್ವಹಣೆಯೂ ಸುಧಾರಿಸಿದ್ದರೆ, ರವೀಂದ್ರ ಜಡೇಜಾ ಆರಂಭಿಕ ಸೋಲುಗಳ ನಡುವೆ ವೈಯಕ್ತಿಕ ನಿರ್ವಹಣೆಯಲ್ಲೂ ವೈಲ್ಯ ಕಂಡು ಒತ್ತಡಕ್ಕೆ ಸಿಲುಕಿದ್ದರು. ಆದರೆ, ಅನುಭವಿ ಬ್ಯಾಟರ್ ರಾಬಿನ್ ಉತ್ತಪ್ಪ-ಶಿವಂ ದುಬೆ ಜೋಡಿಯ ಅಬ್ಬರದ ಫಲವಾಗಿ ಕಳೆದ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು 23 ರನ್‌ಗಳಿಂದ ಮಣಿಸಿ ಸಿಎಸ್‌ಕೆ ಗೆಲುವಿನ ಲಯ ಕಂಡಿದೆ. ಇದು ಜಡೇಜಾ ಮೇಲಿನ ಒತ್ತಡವನ್ನೂ ತುಸು ತಗ್ಗಿಸಿದೆ. ಈ ನಡುವೆ, ಮೆಗಾ ಹರಾಜಿನಲ್ಲಿ 14 ಕೋಟಿ ರೂ. ಮೊತ್ತಕ್ಕೆ ಖರೀದಿಸಿದ್ದ ದೀಪಕ್ ಚಹರ್ ಗಾಯದಿಂದಾಗಿ ಟೂರ್ನಿಯಿಂದಲೇ ಹೊರಬಿದ್ದಿರುವುದು ಸಿಎಸ್‌ಕೆ ಪಾಲಿಗೆ ಕಹಿ ಸುದ್ದಿಯಾಗಿದೆ. ಮತ್ತೊಂದೆಡೆ, ನಾಯಕ ಹಾರ್ದಿಕ್ ಪಾಂಡ್ಯ ಭರ್ಜರಿ ಫಾರ್ಮ್​ನಲ್ಲಿರುವುದು ಗುಜರಾತ್ ತಂಡದ ಪ್ಲಸ್ ಪಾಯಿಂಟ್ ಆಗಿದೆ.

    ಟೀಮ್ ನ್ಯೂಸ್:
    ಗುಜರಾತ್: ಗೆಲುವಿನ ಲಯದಲ್ಲಿರುವ ಗುಜರಾತ್, ಯಾವುದೇ ಬದಲಾವಣೆ ಮಾಡಿಕೊಳ್ಳದೆ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚಿವೆ.
    ಸಿಎಸ್‌ಕೆ: ಆರ್‌ಸಿಬಿ ಎದುರು ದುಬಾರಿಯಾಗಿದ್ದ ಮುಕುಲ್ ಚೌಧರಿ ಬದಲಿಗೆ ತುಷಾರ್ ದೇಶಪಾಂಡೆ ಕಣಕ್ಕಿಳಿಯಬಹುದು.

    ಪಂದ್ಯ ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts