More

    ಪಂಜಾಬ್ ಕಿಂಗ್ಸ್ ಎದುರು ಡೆಲ್ಲಿ ದರ್ಬಾರ್, ರಿಷಭ್ ಪಂತ್ ಪಡೆಗೆ 9 ವಿಕೆಟ್ ಜಯ

    ಮುಂಬೈ: ಬೌಲರ್‌ಗಳ ಸಂಘಟನಾತ್ಮಕ ದಾಳಿಯ ಜತೆಗೆ ಆರಂಭಿಕರಾದ ಡೇವಿಡ್ ವಾರ್ನರ್ (60*ರನ್, 30 ಎಸೆತ, 10 ಬೌಂಡರಿ, 1 ಸಿಕ್ಸರ್) ಹಾಗೂ ಪೃಥ್ವಿ ಷಾ (41ರನ್, 20 ಎಸೆತ, 7 ಬೌಂಡರಿ, 1 ಸಿಕ್ಸರ್) ಜೋಡಿಯ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್-15ರಲ್ಲಿ ಗೆಲುವಿನ ಲಯಕ್ಕೆ ಮರಳಿತು. ಬ್ರಬೋರ್ನ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ರಿಷಭ್ ಪಂತ್ ಪಡೆ 9 ವಿಕೆಟ್‌ಗಳಿಂದ ಕನ್ನಡಿಗ ಮಯಾಂಕ್ ಅಗರ್ವಾಲ್ ಸಾರಥ್ಯದ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿತು. ಪಂಜಾಬ್ ತಂಡಕ್ಕಿದು ಸತತ 2ನೇ ಸೋಲಾಗಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಪಂಜಾಬ್ ತಂಡ, ಡೆಲ್ಲಿ ಬೌಲರ್‌ಗಳ ಮಾರಕ ದಾಳಿ ಎದುರು ಸಂಪೂರ್ಣ ಮಂಕಾಯಿತು. ನಾಯಕ ಮಯಾಂಕ್ ಅಗರ್ವಾಲ್ (24 ರನ್, 15 ಎಸೆತ, 4 ಬೌಂಡರಿ) ಕೆಲಕಾಲ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ಉತ್ತಮ ಆರಂಭದ ಭರವಸೆ ಮೂಡಿಸಿದರೂ 20 ಓವರ್‌ಗಳಲ್ಲಿ 115 ರನ್‌ಗಳಿಗೆ ಸರ್ವಪತನ ಕಂಡಿತು. ಡೆಲ್ಲಿ ಪರ ಖಲೀಲ್ ಅಹ್ಮದ್, ಲಲಿತ್ ಯಾದವ್, ಅಕ್ಷರ್ ಪಟೇಲ್ ಹಾಗೂ ಕುಲದೀಪ್ ಯಾದವ್ ತಲಾ 2 ವಿಕೆಟ್ ಕಬಳಿಸಿದರು. ಪ್ರತಿಯಾಗಿ ಡೆಲ್ಲಿ ತಂಡ ಪೃಥ್ವಿ ಷಾ ಹಾಗೂ ಡೇವಿಡ್ ವಾರ್ನರ್ ಜೋಡಿ ಮೊದಲ ವಿಕೆಟ್‌ಗೆ 39 ಎಸೆತಗಳಲ್ಲಿ 83 ರನ್ ಪೇರಿಸಿದ ಫಲವಾಗಿ 10.3 ಓವರ್‌ಗಳಲ್ಲಿ 1 ವಿಕೆಟ್‌ಗೆ 119 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

    ಪಂಜಾಬ್ ಕಿಂಗ್ಸ್: 20 ಓವರ್‌ಗಳಲ್ಲಿ 115 (ಮಯಾಂಕ್ ಅಗರ್ವಾಲ್ 24, ಜಿತೇಶ್ ಶರ್ಮ 32, ಶಾರುಖ್ ಖಾನ್ 12, ಖಲೀಲ್ ಅಹಮದ್ 21ಕ್ಕೆ 2, ಲಲಿತ್ ಯಾದವ್ 11ಕ್ಕೆ 2, ಅಕ್ಷರ್ ಪಟೇಲ್ 10ಕ್ಕೆ 2, ಕುಲದೀಪ್ ಯಾದವ್ 24ಕ್ಕೆ 2), ಡೆಲ್ಲಿ ಕ್ಯಾಪಿಟಲ್ಸ್: 10.3 ಓವರ್‌ಗಳಲ್ಲಿ 1 ವಿಕೆಟ್‌ಗೆ 119 (ಡೇವಡ್ ವಾರ್ನರ್ 60, ಪೃಥ್ವಿ ಷಾ 41, ರಾಹುಲ್ ಚಹರ್ 21ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts