More

    ನಾಳೆ-ನಾಡಿದ್ದು ಐಪಿಎಲ್ ಆಟಗಾರರ ಹರಾಜು; ಯಾರು ದುಬಾರಿ? ಹೇಗಿದೆ ಲೆಕ್ಕಾಚಾರ?

    ಬೆಂಗಳೂರು: ಕ್ರಿಕೆಟಿಗರನ್ನು ಕೆಲವೇ ನಿಮಿಷಗಳಲ್ಲಿ ಕೋಟಿವೀರರನ್ನಾಗಿ ಮಾಡುವ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ಟೂರ್ನಿ ಆಟಗಾರರ ಹರಾಜು ಪ್ರಕ್ರಿಯೆಗೆ ವೇದಿಕೆ ಸಜ್ಜಾಗಿದೆ. 2022ರ 15ನೇ ಆವೃತ್ತಿಗೆ ಪೂರ್ವಭಾವಿ 2 ಹೊಸ ತಂಡಗಳೂ ಸೇರ್ಪಡೆಗೊಂಡಿದ್ದು, ಈ ಮೆಗಾ ಹರಾಜು ಪ್ರಕ್ರಿಯೆ ಸಾಕಷ್ಟು ಕುತೂಹಲ ಕೆರಳಿಸಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಮತ್ತು ಭಾನುವಾರ ಒಟ್ಟು 2 ದಿನಗಳ ಕಾಲ ಬರೋಬ್ಬರಿ 590 ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ದೇಶ-ವಿದೇಶಗಳ ಸ್ಟಾರ್ ಕ್ರಿಕೆಟಿಗರು, ದೇಶೀಯ ಕ್ರಿಕೆಟಿಗರಲ್ಲದೆ, ಇತ್ತೀಚೆಗೆ ಕಿರಿಯರ ವಿಶ್ವಕಪ್‌ನಲ್ಲಿ ಮಿಂಚಿದ ಆಟಗಾರರೂ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದು, ಯಾರೆಲ್ಲ ಕೋಟಿ ಕೋಟಿ ಮೊತ್ತ ಬಾಚಿಕೊಳ್ಳಲಿದ್ದಾರೆ, ಯಾವ ತಂಡದ ಪಾಲಾಗಲಿದ್ದಾರೆ ಎಂಬ ಕೌತುಕ ಹರಡಿದೆ.

    *ಆಟಗಾರರ ಹರಾಜು ಪ್ರಕ್ರಿಯೆ
    ಯಾವಾಗ: ಫೆಬ್ರವರಿ 12-13
    ಎಲ್ಲಿ: ಬೆಂಗಳೂರು
    ಆರಂಭ: ಬೆಳಗ್ಗೆ 11.00
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    *ತಂಡಗಳು: 10
    ಪ್ರತಿ ತಂಡದ ಒಟ್ಟು ಬಜೆಟ್: ₹90 ಕೋಟಿ
    ತಂಡಗಳ ಒಟ್ಟಾರೆ ಬಜೆಟ್: ₹900 ಕೋಟಿ
    ರಿಟೇನ್-ಡ್ರ್‌ಟಾ ವೆಚ್ಚ: ₹343.7 ಕೋಟಿ
    ಹರಾಜಿಗೆ ಉಳಿಕೆ ಬಜೆಟ್: ₹556.3 ಕೋಟಿ
    ತಂಡಗಳ ರಿಟೇನ್-ಡ್ರ್‌ಟಾ ಆಟಗಾರರು: 33
    ಪ್ರತಿ ತಂಡಕ್ಕೆ ಗರಿಷ್ಠ ಆಟಗಾರರು: 25 (8 ವಿದೇಶಿ).
    ಹರಾಜಿಗೆ ಒಟ್ಟು ಆಟಗಾರರು: 590 (220 ವಿದೇಶಿ).
    ತಂಡಗಳಿಗೆ ಬೇಕಾದ ಗರಿಷ್ಠ ಆಟಗಾರರು: 217 (70 ವಿದೇಶಿ).

    ದೊಡ್ಡ ಮೊತ್ತದ ಬಿಡ್
    ನಿರೀಕ್ಷೆಯಲ್ಲಿರುವವರು
    *ಶ್ರೇಯಸ್ ಅಯ್ಯರ್
    *ಡೇವಿಡ್ ವಾರ್ನರ್
    *ಇಶಾನ್ ಕಿಶನ್
    *ಕ್ವಿಂಟನ್ ಡಿಕಾಕ್
    *ಕಗಿಸೊ ರಬಾಡ
    *ಪ್ಯಾಟ್ ಕಮ್ಮಿನ್ಸ್
    *ಜೇಸನ್ ಹೋಲ್ಡರ್
    *ದೇವದತ್ ಪಡಿಕಲ್
    *ದೀಪಕ್ ಚಹರ್
    *ಶಾರ್ದೂಲ್ ಠಾಕೂರ್
    *ಶಾರುಖ್ ಖಾನ್
    *ಯಜುವೇಂದ್ರ ಚಾಹಲ್
    *ಪ್ರಸಿದ್ಧಕೃಷ್ಣ
    *ಮೊಹಮದ್ ಶಮಿ
    *ಆರ್. ಅಶ್ವಿನ್

    ಈ ಬಾರಿ ಆರ್‌ಟಿಎಂ ಇರಲ್ಲ
    ಈ ಹಿಂದಿನ ಮೆಗಾ ಹರಾಜು ಪ್ರಕ್ರಿಯೆಗಳಲ್ಲಿ ತಂಡಗಳಿಗೆ ಹಿಂದೆ ತಂಡದಲ್ಲಿದ್ದ ಆಟಗಾರರನ್ನು ಮರಳಿ ಸೆಳೆಯಲು ರೈಟ್ ಟು ಮ್ಯಾಚ್ (ಆರ್‌ಟಿಎಂ) ಪ್ರಮುಖ ಅಸವಾಗಿತ್ತು. ಈ ಮೂಲಕ ಆಟಗಾರನೊಬ್ಬ ಬೇರೆ ತಂಡಕ್ಕೆ ಗರಿಷ್ಠ ಮೊತ್ತಕ್ಕೆ ಮಾರಾಟವಾದರೂ, ಆತನ ಮೂಲತಂಡಕ್ಕೆ ಅದೇ ಮೊತ್ತಕ್ಕೆ ಆತನನ್ನು ಪಡೆದುಕೊಳ್ಳುವ ಅಧಿಕಾರವಿತ್ತು. ಆದರೆ ಈ ಬಾರಿ 2 ಹೊಸ ತಂಡಗಳ ಸೇರ್ಪಡೆಯಿಂದಾಗಿ ಆ ನಿಯಮವನ್ನು ಕೈಬಿಡಲಾಗಿದೆ. ಹೀಗಾಗಿ ಗರಿಷ್ಠ ಬಿಡ್ ಸಲ್ಲಿಸಿದರಷ್ಟೇ ತಂಡಗಳಿಗೆ ಆಟಗಾರರು ಒಲಿಯುತ್ತಾರೆ.

    *ಮುಂಬೈ ಇಂಡಿಯನ್ಸ್
    ರಿಟೇನ್ ಆಟಗಾರರು: ರೋಹಿತ್ ಶರ್ಮ(₹16 ಕೋಟಿ), ಜಸ್‌ಪ್ರೀತ್ ಬುಮ್ರಾ (₹12 ಕೋಟಿ), ಸೂರ್ಯಕುಮಾರ್ ಯಾದವ್(₹8 ಕೋಟಿ), ಕೈರಾನ್ ಪೊಲ್ಲಾರ್ಡ್(₹6 ಕೋಟಿ).
    ಉಳಿದ ಬಜೆಟ್: ₹48 ಕೋಟಿ
    ಬೇಕಾದ ಆಟಗಾರರು: 21 (7 ವಿದೇಶಿ)
    ಲೆಕ್ಕಾಚಾರ: ಇಶಾನ್ ಕಿಶನ್, ಕ್ವಿಂಟನ್ ಡಿಕಾಕ್, ಟ್ರೆಂಟ್ ಬೌಲ್ಟ್ ಮುಂತಾದ ಪ್ರಮುಖ ಆಟಗಾರರನ್ನು ಮರಳಿ ಸೇರಿಸುವ ಪ್ರಯತ್ನ. ಹಾರ್ದಿಕ್ ಪಾಂಡ್ಯ ಕೈತಪ್ಪಿದ್ದರಿಂದ ಬೇರೆ ಅನುಭವಿ ಆಲ್ರೌಂಡರ್ ಅಗತ್ಯ.

    *ಆರ್‌ಸಿಬಿ (ಬೆಂಗಳೂರು)
    ರಿಟೇನ್ ಆಟಗಾರರು: ವಿರಾಟ್ ಕೊಹ್ಲಿ(₹15 ಕೋಟಿ), ಗ್ಲೆನ್ ಮ್ಯಾಕ್ಸ್‌ವೆಲ್(₹11 ಕೋಟಿ), ಮೊಹಮದ್ ಸಿರಾಜ್(₹7 ಕೋಟಿ).
    ಉಳಿದ ಬಜೆಟ್: ₹57 ಕೋಟಿ
    ಬೇಕಾದ ಆಟಗಾರರು: 22 (7 ವಿದೇಶಿ)
    ಲೆಕ್ಕಾಚಾರ: ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಿದ್ದರಿಂದ ಹೊಸ ನಾಯಕನಿಗೆ ಹುಡುಕಾಟ. ಶ್ರೇಯಸ್ ಅಯ್ಯರ್, ಡೇವಿಡ್ ವಾರ್ನರ್, ಜೇಸನ್ ಹೋಲ್ಡರ್ ಈ ಸ್ಥಾನಕ್ಕೆ ಪ್ರಮುಖ ಸಂಭಾವ್ಯ ಅಭ್ಯರ್ಥಿಗಳು. ದೇವದತ್ ಪಡಿಕಲ್, ಹರ್ಷಲ್ ಪಟೇಲ್, ಚಾಹಲ್ ಸಹಿತ ಕೆಲ ಆಟಗಾರರನ್ನು ಮರಳಿ ಸೆಳೆಯುವ ಗುರಿ.

    *ಕೋಲ್ಕತ ನೈಟ್‌ರೈಡರ್ಸ್‌
    ರಿಟೇನ್ ಆಟಗಾರರು: ಆಂಡ್ರೆ ರಸೆಲ್(₹12 ಕೋಟಿ), ವರುಣ್ ಚಕ್ರವರ್ತಿ(₹8 ಕೋಟಿ), ವೆಂಕಟೇಶ್ ಅಯ್ಯರ್(₹8 ಕೋಟಿ), ಸುನೀಲ್ ನಾರಾಯಣ್(₹6 ಕೋಟಿ).
    ಉಳಿದ ಬಜೆಟ್: ₹48 ಕೋಟಿ
    ಬೇಕಾದ ಆಟಗಾರರು: 21 (6 ವಿದೇಶಿ)
    ಲೆಕ್ಕಾಚಾರ: ಇವೊಯಿನ್ ಮಾರ್ಗನ್ ಕೈಬಿಡಲಾಗಿದ್ದು, ಹೊಸ ನಾಯಕನಾಗಬಲ್ಲ ಆಟಗಾರನಿಗೆ ಹುಡುಕಾಟ. ಸ್ಟಾರ್ ಬ್ಯಾಟರ್‌ಗಳನ್ನು ಸೆಳೆಯುವ ಹಂಬಲ. ಬಹುತೇಕ ಹೊಸ ತಂಡ ಕಟ್ಟುವ ಪ್ರಯತ್ನ.ಪ್ಯಾಟ್ ಕಮ್ಮಿನ್ಸ್‌ರನ್ನು ಮರಳಿ ಸೇರಿಸಲು ಯತ್ನಿಸಬಹುದು.

    *ಚೆನ್ನೈ ಸೂಪರ್‌ಕಿಂಗ್ಸ್
    ರಿಟೇನ್ ಆಟಗಾರರು: ಎಂಎಸ್ ಧೋನಿ(₹12 ಕೋಟಿ), ರವೀಂದ್ರ ಜಡೇಜಾ(₹16 ಕೋಟಿ), ಮೊಯಿನ್ ಅಲಿ(₹8 ಕೋಟಿ), ಋತುರಾಜ್ ಗಾಯಕ್ವಾಡ್(₹6 ಕೋಟಿ).
    ಉಳಿದ ಬಜೆಟ್: ₹48 ಕೋಟಿ
    ಬೇಕಾದ ಆಟಗಾರರು: 21 (7 ವಿದೇಶಿ)
    ಲೆಕ್ಕಾಚಾರ: ಎಂದಿನಂತೆ ಈ ಸಲವೂ ಅನುಭವಿ ಆಟಗಾರರನ್ನು ಸೆಳೆಯಲು ಹೆಚ್ಚು ಪ್ರಯತ್ನ. ಬಲಿಷ್ಠ ತಂಡದ ಪ್ರಮುಖ ಭಾಗವಾಗಿದ್ದ ್ಾ ಡು ಪ್ಲೆಸಿಸ್, ದೀಪಕ್ ಚಹರ್, ಶಾರ್ದೂಲ್ ಠಾಕೂರ್ ಮತ್ತಿತರ ಕೆಲ ಆಟಗಾರರನ್ನು ಮರಳಿ ಸೇರಿಸುವ ಗುರಿ.

    *ಸನ್‌ರೈಸರ್ಸ್‌ ಹೈದರಾಬಾದ್
    ರಿಟೇನ್ ಆಟಗಾರರು: ಕೇನ್ ವಿಲಿಯಮ್ಸನ್(₹14 ಕೋಟಿ), ಅಬ್ದುಲ್ ಸಮದ್(₹4 ಕೋಟಿ), ಉಮ್ರಾನ್ ಮಲಿಕ್(₹4 ಕೋಟಿ).
    ಉಳಿದ ಬಜೆಟ್: ₹68 ಕೋಟಿ
    ಬೇಕಾದ ಆಟಗಾರರು: 22 (7 ವಿದೇಶಿ)
    ಲೆಕ್ಕಾಚಾರ: ಡೇವಿಡ್ ವಾರ್ನರ್, ರಶೀದ್ ಖಾನ್‌ರಂಥ ಪ್ರಮುಖ ಆಟಗಾರರು ಕೈಜಾರಿದ್ದು, ಕೇನ್ ವಿಲಿಯಮ್ಸನ್ ಸಾರಥ್ಯದಲ್ಲಿ ಹೊಸ ತಂಡವನ್ನೇ ಕಟ್ಟುವ ಗುರಿ. ಭಾರತೀಯ ಸ್ಟಾರ್ ಆಟಗಾರರ ಮೇಲೂ ಹೆಚ್ಚಿನ ಒಲವು ತೋರಬಹುದು.

    *ರಾಜಸ್ಥಾನ ರಾಯಲ್ಸ್
    ರಿಟೇನ್ ಆಟಗಾರರು: ಸಂಜು ಸ್ಯಾಮ್ಸನ್(₹14 ಕೋಟಿ), ಜೋಸ್ ಬಟ್ಲರ್(₹10 ಕೋಟಿ), ಯಶಸ್ವಿ ಜೈಸ್ವಾಲ್(₹4 ಕೋಟಿ).
    ಉಳಿದ ಬಜೆಟ್: ₹62 ಕೋಟಿ
    ಬೇಕಾದ ಆಟಗಾರರು: 22 (7 ವಿದೇಶಿ)
    ಬಿಡ್ ಲೆಕ್ಕಾಚಾರ: ಯಾವುದೇ ಬೌಲರ್‌ಗಳು ರಿಟೇನ್ ಆಗದ ಕಾರಣ, ಬೌಲಿಂಗ್ ವಿಭಾಗ ಬಲಗೊಳಿಸಲು ಹೆಚ್ಚಿನ ಒತ್ತು. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಅಗತ್ಯ. ತಂಡ ಸಮತೋಲನಕ್ಕೆ ಆಲ್ರೌಂಡರ್‌ಗಳೂ ಬೇಕಾಗಿದ್ದಾರೆ.

    *ಡೆಲ್ಲಿ ಕ್ಯಾಪಿಟಲ್ಸ್
    ರಿಟೇನ್ ಆಟಗಾರರು: ರಿಷಭ್ ಪಂತ್(₹16 ಕೋಟಿ), ಅಕ್ಷರ್ ಪಟೇಲ್(₹9 ಕೋಟಿ), ಪೃಥ್ವಿ ಷಾ(₹7.5 ಕೋಟಿ), ಅನ್ರಿಚ್ ನೋಕಿಯ(₹6.5 ಕೋಟಿ).
    ಉಳಿದ ಬಜೆಟ್: ₹47.5 ಕೋಟಿ
    ಬೇಕಾದ ಆಟಗಾರರು: 21 (7 ವಿದೇಶಿ)
    ಬಿಡ್ ಲೆಕ್ಕಾಚಾರ: ಶಿಖರ್ ಧವನ್, ಕಗಿಸೊ ರಬಾಡ ಮುಂತಾದ ಕೆಲ ಆಟಗಾರರನ್ನು ಮರಳಿ ಸೇರಿಸಿಕೊಳ್ಳುವ ಪ್ರಯತ್ನ ನಡೆಸಬಹುದು. ಜತೆಗೆ ಹಿಂದಿನಂತೆ ಯುವ ಪ್ರತಿಭಾನ್ವಿತ ಆಟಗಾರರಿಗೆ ಅವಕಾಶ ಕಲ್ಪಿಸುವ ನಡೆ ಮುಂದುವರಿಯಬಹುದು.

    *ಪಂಜಾಬ್ ಕಿಂಗ್ಸ್
    ರಿಟೇನ್ ಆಟಗಾರರು: ಮಯಾಂಕ್ ಅಗರ್ವಾಲ್(₹14 ಕೋಟಿ), ಅರ್ಷದೀಪ್ ಸಿಂಗ್(₹4 ಕೋಟಿ).
    ಉಳಿದ ಬಜೆಟ್: ₹72 ಕೋಟಿ
    ಬೇಕಾದ ಆಟಗಾರರು: 23 (8 ವಿದೇಶಿ)
    ಲೆಕ್ಕಾಚಾರ: ಹರಾಜಿಗೆ ಅತಿ ಹೆಚ್ಚು ಮೊತ್ತ ಉಳಿಸಿಕೊಂಡಿದ್ದು, ಸ್ಟಾರ್ ಆಟಗಾರರತ್ತ ಹೆಚ್ಚು ಗಮನವಿಡಲಿದೆ. ಬಹುತೇಕ ಹೊಸ ತಂಡವನ್ನೇ ಕಟ್ಟಬೇಕಿದೆ. ನಾಯಕತ್ವ ವಹಿಸಬಲ್ಲ ಆಟಗಾರ ಲಭಿಸದಿದ್ದರೆ, ಅನುಭವವಿಲ್ಲದಿದ್ದರೂ ಕರ್ನಾಟಕದ ಮಯಾಂಕ್ ಅಗರ್ವಾಲ್‌ಗೆ ನಾಯಕತ್ವ ನೀಡಬೇಕಾದ ಅನಿವಾರ‌್ಯತೆ ಎದುರಾಗಲಿದೆ.

    *ಲಖನೌ ಸೂಪರ್‌ಜೈಂಟ್ಸ್
    ಡ್ರಾಫ್ಟ್​ ಆಟಗಾರರು: ಕೆಎಲ್ ರಾಹುಲ್(₹17 ಕೋಟಿ), ಮಾರ್ಕಸ್ ಸ್ಟೋಯಿನಿಸ್(₹9.2 ಕೋಟಿ), ರವಿ ಬಿಷ್ಣೋಯಿ(₹4 ಕೋಟಿ).
    ಉಳಿದ ಬಜೆಟ್: ₹59 ಕೋಟಿ
    ಬೇಕಾದ ಆಟಗಾರರು: 22 (7 ವಿದೇಶಿ)
    ಲೆಕ್ಕಾಚಾರ: ವಿದೇಶಿ ಸ್ಟಾರ್ ಬ್ಯಾಟರ್‌ಗಳ ಮೇಲೆ ಹೆಚ್ಚು ಬಿಡ್ ಮಾಡಬಹುದು. ರಾಹುಲ್‌ಗೆ ಸಮರ್ಥ ಆರಂಭಿಕ ಜೋಡಿಯಾಗಬಲ್ಲ ಆಟಗಾರ ಬೇಕಿದೆ. ಬೌಲಿಂಗ್ ವಿಭಾಗಕ್ಕೂ ಅನುಭವಿಗಳು ಬೇಕಾಗಿದ್ದಾರೆ.

    *ಗುಜರಾತ್ ಟೈಟಾನ್ಸ್
    ಡ್ರಾಫ್ಟ್​ ಆಟಗಾರರು: ಹಾರ್ದಿಕ್ ಪಾಂಡ್ಯ(₹15 ಕೋಟಿ), ರಶೀದ್ ಖಾನ್(₹15 ಕೋಟಿ), ಶುಭಮಾನ್ ಗಿಲ್(₹8 ಕೋಟಿ).
    ಉಳಿದ ಬಜೆಟ್: ₹52 ಕೋಟಿ
    ಬೇಕಾದ ಆಟಗಾರರು: 22 (7 ವಿದೇಶಿ)
    ಲೆಕ್ಕಾಚಾರ: ನಾಯಕತ್ವದ ವಿಚಾರದಲ್ಲಿ ಹಾರ್ದಿಕ್ ಅನನುಭವಿಯಾಗಿದ್ದರೂ, ಪಟ್ಟ ಕಟ್ಟಲಾಗಿದೆ. ಹೀಗಾಗಿ ಮೈದಾನದಲ್ಲಿ ಅವರು ಒತ್ತಡಕ್ಕೆ ಸಿಲುಕದಂತೆ ನೋಡಿಕೊಳ್ಳ ಅನುಭವಿಯೂ ಬೇಕಾಗಿದ್ದಾರೆ. ರಶೀದ್ ಖಾನ್ ಈಗಾಗಲೆ ಸ್ಪಿನ್ ವಿಭಾಗ ಬಲಿಷ್ಠಗೊಳಿಸಿದ್ದರೆ, ಹಾರ್ದಿಕ್ ತಂಡಕ್ಕೆ ಸಮತೋಲನ ತರಬಲ್ಲರು.

    ಹರಾಜಿನಲ್ಲಿ 28 ಕನ್ನಡಿಗರು
    ಮೂಲಬೆಲೆ ₹2 ಕೋಟಿ: ದೇವದತ್ ಪಡಿಕಲ್, ರಾಬಿನ್ ಉತ್ತಪ್ಪ, ಮೂಲಬೆಲೆ ₹1 ಕೋಟಿ: ಮನೀಷ್ ಪಾಂಡೆ, ಪ್ರಸಿದ್ಧಕೃಷ್ಣ, ಮೂಲಬೆಲೆ ₹50 ಲಕ್ಷ: ಕೆ. ಗೌತಮ್, ಕರುಣ್ ನಾಯರ್, ಮೂಲಬೆಲೆ ₹20 ಲಕ್ಷ: ಅಭಿನವ್ ಮನೋಹರ್, ಕೆಸಿ ಕಾರ್ಯಪ್ಪ, ಶ್ರೇಯಸ್ ಗೋಪಾಲ್, ಜೆ. ಸುಚಿತ್, ರೋಹನ್ ಕದಂ, ಪ್ರವೀಣ್ ದುಬೆ, ಲವ್ನಿತ್ ಸಿಸೋಡಿಯಾ, ವೈಶಾಖ್ ವಿಜಯ್ ಕುಮಾರ್, ಅನೀಶ್ವರ್ ಗೌತಮ್, ಬಿಆರ್ ಶರತ್, ಕೆಎಲ್ ಶ್ರೀಜಿತ್, ಕುಶಾಲ್ ವಾಧ್ವಾನಿ, ಆರ್. ಸಮರ್ಥ್, ಶುಭಾಂಗ್ ಹೆಗ್ಡೆ, ರೋನಿತ್ ಮೋರೆ, ವಿದ್ಯಾಧರ್ ಪಾಟೀಲ್, ವಿ. ಕೌಶಿಕ್, ಎಂ. ವೆಂಕಟೇಶ್, ಅನಿರುದ್ಧ ಜೋಶಿ, ಎಂಬಿ ದರ್ಶನ್, ಮನೋಜ್ ಭಾಂಡಗೆ, ದಿಕ್ಷಾಂಶು ನೇಗಿ.

    ಹರಾಜಿನಲ್ಲಿರುವ ಪ್ರಮುಖರು
    ₹2 ಕೋಟಿ ಮೂಲಬೆಲೆ: ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಶಿಖರ್ ಧವನ್, ಮೊಹಮದ್ ಶಮಿ, ಭುವನೇಶ್ವರ್, ಆರ್. ಅಶ್ವಿನ್, ದೇವದತ್ ಪಡಿಕಲ್, ದೀಪಕ್ ಚಹರ್, ಹರ್ಷಲ್ ಪಟೇಲ್, ಯಜುವೇಂದ್ರ ಚಾಹಲ್, ಶಾರ್ದೂಲ್ ಠಾಕೂರ್, ಸುರೇಶ್ ರೈನಾ, ರಾಬಿನ್ ಉತ್ತಪ್ಪ, ದಿನೇಶ್ ಕಾರ್ತಿಕ್, ಕೃನಾಲ್ ಪಾಂಡ್ಯ, ಟ್ರೆಂಟ್ ಬೌಲ್ಟ್, ಡೇವಿಡ್ ವಾರ್ನರ್, ಕ್ವಿಂಟನ್ ಡಿಕಾಕ್, ಡ್ವೇನ್ ಬ್ರಾವೊ, ಕಗಿಸೊ ರಬಾಡ, ಪ್ಯಾಟ್ ಕಮ್ಮಿನ್ಸ್, ಸ್ಟೀವನ್ ಸ್ಮಿತ್, ಮಿಚೆಲ್ ಮಾರ್ಷ್, ಶಕೀಬ್ ಅಲ್ ಹಸನ್, ಫಾಫ್​ ಡು ಪ್ಲೆಸಿಸ್, ಜೇಸನ್ ರಾಯ್, ಮುಸ್ತಾಫಿಜುರ್, ಲಾಕಿ ರ್ಗ್ಯುಸನ್.

    ₹1.5 ಕೋಟಿ ಮೂಲಬೆಲೆ: ಜಾನಿ ಬೇರ್‌ಸ್ಟೋ, ಶಿಮ್ರೋನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ವಾಷಿಂಗ್ಟನ್ ಸುಂದರ್, ಇಶಾಂತ್ ಶರ್ಮ, ನಿಕೋಲಸ್ ಪೂರನ್, ಆರನ್ ಫಿಂಚ್, ಡೇವಿಡ್ ಮಲಾನ್, ಇವೊಯಿನ್ ಮಾರ್ಗನ್, ಜೇಮ್ಸ್ ನೀಶಾಮ್.

    ₹1 ಕೋಟಿ ಮೂಲಬೆಲೆ: ಮನೀಷ್ ಪಾಂಡೆ, ಪ್ರಸಿದ್ಧಕೃಷ್ಣ, ವೃದ್ಧಿಮಾನ್ ಸಾಹ, ಟಿ. ನಟರಾಜನ್, ವಾನಿಂದು ಹಸರಂಗ, ಡೇವಿಡ್ ಮಿಲ್ಲರ್, ಅಜಿಂಕ್ಯ ರಹಾನೆ, ಕೇದಾರ್ ಜಾಧವ್, ಡೆವೊನ್ ಕಾನ್‌ವೇ, ಒಡೇನ್ ಸ್ಮಿತ್, ಜೇಮ್ಸ್ ಫೌಲ್ಕ್‌ನರ್, ತಬರೇಜ್ ಶಮ್ಸಿ.

    ₹75 ಲಕ್ಷ ಮೂಲಬೆಲೆ: ರಾಹುಲ್ ಚಹರ್, ಶೆಲ್ಡನ್ ಕಾಟ್ರೆಲ್, ಜೈದೇವ್ ಉನಾದ್ಕತ್, ಡೆರಿಲ್ ಮಿಚೆಲ್, ಮಾರ್ಟಿನ್ ಗುಪ್ಟಿಲ್, ಕಾಲೋಸ್ ಬ್ರಾಥ್‌ವೇಟ್.

    ₹50 ಲಕ್ಷ ಮೂಲಬೆಲೆ: ಚೇತೇಶ್ವರ ಪೂಜಾರ, ಸೌರಭ್ ತಿವಾರಿ, ಕೆ. ಗೌತಮ್, ಎಸ್. ಶ್ರೀಶಾಂತ್, ಮನೋಜ್ ತಿವಾರಿ, ಶಿವಂ ದುಬೆ, ವಿಜಯ್ ಶಂಕರ್, ಶೈ ಹೋಪ್, ನಿರೋಶನ್ ಡಿಕ್‌ವೆಲ್ಲಾ, ಥಿಸ್ಸರ ಪೆರೇರ, ಕೇಶವ್ ಮಹಾರಾಜ್, .

    ವಿಶೇಷ ಆಕರ್ಷಣೆ
    *ಟೆಸ್ಟ್ ತಜ್ಞ ಬ್ಯಾಟರ್ ಚೇತೇಶ್ವರ ಪೂಜಾರ (ಮೂಲಬೆಲೆ: ₹50 ಲಕ್ಷ).
    *2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ನಿಷೇಧ ಶಿಕ್ಷೆ ಮುಗಿಸಿರುವ ವೇಗಿ ಎಸ್. ಶ್ರೀಶಾಂತ್ (ಮೂಲಬೆಲೆ: ₹50 ಲಕ್ಷ).
    *ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ (ಮೂಲಬೆಲೆ: ₹20 ಲಕ್ಷ).
    *ಪಶ್ಚಿಮ ಬಂಗಾಳದ ಕ್ರೀಡಾ ಸಚಿವ (ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಳ್ಳುವ ಮೊದಲ ರಾಜಕಾರಣಿ) ಹಾಗೂ ಬ್ಯಾಟ್ಸ್‌ಮನ್ ಮನೋಜ್ ತಿವಾರಿ (ಮೂಲಬೆಲೆ: ₹50 ಲಕ್ಷ).
    *ಕಿರಿಯರ ವಿಶ್ವಕಪ್‌ನಲ್ಲಿ ರನ್‌ಹೊಳೆ ಹರಿಸಿದ ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಡಿವಾಲ್ಡ್ ಬ್ರೆವಿಸ್. ಆರ್‌ಸಿಬಿಯಲ್ಲಿ ಎಬಿಡಿ ಸ್ಥಾನ ತುಂಬಬಲ್ಲ ಫೇವರಿಟ್ (ಮೂಲಬೆಲೆ: ₹20 ಲಕ್ಷ).
    *ನಾಯಕ ಯಶ್ ಧುಲ್ ಸಹಿತ ಕಿರಿಯರ ವಿಶ್ವಕಪ್ ವಿಜೇತ ಭಾರತ ತಂಡದ ಕೆಲ ಸದಸ್ಯರು (ಮೂಲಬೆಲೆ: ತಲಾ ₹20 ಲಕ್ಷ).

    ಹಿರಿಯ-ಕಿರಿಯ ಆಟಗಾರ
    ದಕ್ಷಿಣ ಆಫ್ರಿಕಾದ ಸ್ಪಿನ್ನರ್ 42 ವರ್ಷದ ಇಮ್ರಾನ್ ತಾಹಿರ್ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಅತ್ಯಂತ ಹಿರಿಯ ಆಟಗಾರ. ಅಫ್ಘಾನಿಸ್ತಾನದ 17 ವರ್ಷದ ನೂರ್ ಅಹ್ಮದ್ ಹರಾಜಿನಲ್ಲಿ ಪಾಲ್ಗೊಳ್ಳುವ ಅತ್ಯಂತ ಕಿರಿಯ ಕ್ರಿಕೆಟಿಗರೆನಿಸಿದ್ದಾರೆ.

    *ಮೂಲಬೆಲೆ:
    48 ಕ್ರಿಕೆಟಿಗರು: ₹2 ಕೋಟಿ
    20 ಕ್ರಿಕೆಟಿಗರು: ₹1.5 ಕೋಟಿ
    34 ಕ್ರಿಕೆಟಿಗರು: ₹1 ಕೋಟಿ
    24 ಕ್ರಿಕೆಟಿಗರು: ₹75 ಲಕ್ಷ
    103 ಕ್ರಿಕೆಟಿಗರು: ₹50 ಲಕ್ಷ
    16 ಕ್ರಿಕೆಟಿಗರು: ₹40 ಲಕ್ಷ
    9 ಕ್ರಿಕೆಟಿಗರು: ₹30 ಲಕ್ಷ
    336 ಕ್ರಿಕೆಟಿಗರು: ₹20 ಲಕ್ಷ

    ದೇಶವಾರು ಆಟಗಾರರು
    ದೇಶ ಕ್ರಿಕೆಟಿಗರು
    ಭಾರತ 370
    ಆಸ್ಟ್ರೇಲಿಯಾ 47
    ವೆಸ್ಟ್ ಇಂಡೀಸ್ 34
    ದಕ್ಷಿಣ ಆಫ್ರಿಕಾ 33
    ಇಂಗ್ಲೆಂಡ್ 24
    ನ್ಯೂಜಿಲೆಂಡ್ 24
    ಶ್ರೀಲಂಕಾ 23
    ಅ್ಘಾನಿಸ್ತಾನ 17
    ಬಾಂಗ್ಲಾದೇಶ 5
    ಐರ್ಲೆಂಡ್ 5
    ನಮೀಬಿಯಾ 3
    ಸ್ಕಾಟ್ಲೆಂಡ್ 2
    ಜಿಂಬಾಬ್ವೆ 1
    ನೇಪಾಳ 1
    ಅಮೆರಿಕ 1

    ಹರಾಜಿಗೆ ಗೈರಾದ ಪ್ರಮುಖರು:
    ಕ್ರಿಸ್ ಗೇಲ್, ಬೆನ್ ಸ್ಟೋಕ್ಸ್, ಕೈಲ್ ಜೇಮಿಸನ್, ಮಿಚೆಲ್ ಸ್ಟಾರ್ಕ್, ಸ್ಯಾಮ್​ ಕರ್ರನ್​, ಜೋ ರೂಟ್.

    ಬ್ರಾಥ್‌ವೇಟ್ ಅವರ ಈಡನ್ ಗಾರ್ಡನ್ಸ್ ಸಾಧನೆಯ ನೆನಪಿನಲ್ಲಿ ಅರಳಿದ ಈಡನ್ ರೋಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts