More

    “ಕರೊನಾ ಲಸಿಕೆ ಅಭಿಯಾನದಲ್ಲಿ ಖಾಸಗಿ ಆಸ್ಪತ್ರೆ, ಎನ್​ಜಿಒಗಳನ್ನು ಬಳಸಿ”

    ಪುಣೆ: ಭಾರತದ ಜನಸಂಖ್ಯೆಯ ಹಿನ್ನೆಲೆಯಲ್ಲಿ, ಎಲ್ಲರಿಗೂ ಕರೊನಾ ಲಸಿಕೆ ತಲುಪಿಸುವುದು ಕಠಿಣ ಕಾರ್ಯವಾಗಿದೆ. ಆದ್ದರಿಂದ ಸರ್ಕಾರ ಆರಂಭಿಸಿರುವ ಕರೊನಾ ಲಸಿಕಾ ಅಭಿಯಾನದ ಮುಂದಿನ ಹಂತಗಳಲ್ಲಿ ಖಾಸಗಿ ಆಸ್ಪತ್ರೆಗಳ ಮತ್ತು ಸರ್ಕಾರೇತರ ಸಂಸ್ಥೆಗಳ ಸಹಕಾರವನ್ನು ಪಡೆಯಬೇಕು. ತನ್ಮೂಲಕ ಸರ್ಕಾರಿ ಆರೋಗ್ಯ ಸೇವಾ ಕ್ಷೇತ್ರದ ಮೇಲಿರುವ ಹೊರೆಯನ್ನು ಇಳಿಸಬೇಕು ಎಂದು ಮರಾಠಾ ಚೇಂಬರ್ ಆಫ್ ಕಾಮರ್ಸ್, ಇಂಡಸ್ಟ್ರೀಸ್ ಅಂಡ್ ಅಗ್ರಿಕಲ್ಚರ್(ಎಂಸಿಸಿಐಎ) ಆಗ್ರಹಿಸಿದೆ.

    ಮಹಾರಾಷ್ಟ್ರದಲ್ಲಿ ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯದ ಸಿಎಂ ಉದ್ಧವ್ ಠಾಕ್ರೆ ಸೂಕ್ತ ಮುನ್ನೆಚ್ಚರಿಕೆಗಳನ್ನು ವಹಿಸದೆ ಕರೊನಾ ಪ್ರಕರಣಗಳು ಹೆಚ್ಚಿದಲ್ಲಿ ಮತ್ತೊಂದು ಲಾಕ್​ಡೌನ್ ವಿಧಿಸಬೇಕಾಗುವುದು ಎಂದು ಹೇಳಿದ್ದರು. ಆದರೆ ಮತ್ತೊಂದು ಲಾಕ್​ಡೌನ್ ಆರ್ಥಿಕತೆಗೆ ಮಾರಣಾಂತಿಕವಾಗಲಿದೆ ಎಂದು ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕರೊನಾ ಲಸಿಕೆ ಆದಷ್ಟು ಬೇಗ ಎಲ್ಲರನ್ನೂ ತಲುಪಲು ಖಾಸಗಿ ವೈದ್ಯಕೀಯ ಕ್ಷೇತ್ರವನ್ನು ಬಳಸಿಕೊಂಡರೆ ಉತ್ತಮ ಎಂದು ಎಂಸಿಸಿಐಎ ಅಧ್ಯಕ್ಷ ಸುಧೀರ್ ಮೆಹ್ತ ಹೇಳಿದ್ದಾರೆ.

    ಇದನ್ನೂ ಓದಿ: ಮತ್ತೆ ಹಬ್ಬುತ್ತಿದೆ ಕರೊನಾ… ಮತ್ತೊಬ್ಬ ಸಚಿವರಲ್ಲಿ ಕರೊನಾ ಸೋಂಕು ಪತ್ತೆ !

    ಫೋರಂ ಫಾರ್ ಸ್ಮಾಲ್ ಅಂಡ್ ಮೀಡಿಯಂ ಸ್ಕೇಲ್ ಇಂಡಸ್ಟ್ರೀಸ್ ಸಂಸ್ಥೆಯ ಅಧ್ಯಕ್ಷ ಅಭಯ್ ಭೋರ್, ಲಸಿಕಾ ಅಭಿಯಾನದಲ್ಲಿ ಕೈಗಾರಿಕೆಗಳ ಕಾರ್ಮಿಕರಿಗೆ ಆದ್ಯತೆಯಲ್ಲಿ ಲಸಿಕೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. “ದಿನನಿತ್ಯ ಅವರು ಕೆಲಸಕ್ಕೆ ಬರುವುದರಿಂದ, ಅವರಿಗೆ ರಕ್ಷಣೆಯ ಅಗತ್ಯ ಹೆಚ್ಚಾಗಿದೆ. ಉದ್ಯಮ ಉಳಿಯಬೇಕೆಂದರೆ ಕಾರ್ಮಿಕರ ಅಗತ್ಯವಿದೆ” ಎಂದಿದ್ದಾರೆ.

    ಸರ್ಕಾರವೇ ಪೂರ್ಣವಾಗಿ ನಡೆಸುತ್ತಿರುವ ಕರೊನಾ ಲಸಿಕೆ ಅಭಿಯಾನವು ಇದೀಗ ಮೂರನೇ ಹಂತ ಪ್ರವೇಶಿಸಲಿದೆ. ಈಗಾಗಲೇ ಮೊದಲ ಎರಡು ಹಂತಗಳಲ್ಲಿ ಆರೋಗ್ಯ ಸೇವಾ ಸಿಬ್ಬಂದಿ ಮತ್ತು ಮುಂಚೂಣಿ ಕಾರ್ಯಕರ್ತರು ಲಸಿಕೆಗಳನ್ನು ಪಡೆಯುತ್ತಿದ್ದಾರೆ. ಮೂರನೇ ಹಂತದಲ್ಲಿ ಕೋಮಾರ್ಬಿಡಿಟೀಸ್ ಇರುವ 50 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಯೋಜನೆ ಇದೆ. ಸರಕಾರಿ ಪ್ರಾಧಿಕಾರಗಳೇ ಲಸಿಕೆಗಳ ಸಂಗ್ರಹಣೆ ಮತ್ತು ವಿತರಣೆ ಮಾಡುತ್ತಿದ್ದು, ಫಲಾನುಭವಿಗಳು ಕೋ-ವಿನ್ ಪ್ಲಾಟ್​ಫಾರಂನಲ್ಲಿ ನೋಂದಾಯಿಸಿಕೊಳ್ಳಬೇಕಾಗಿದೆ.(ಏಜೆನ್ಸೀಸ್)

    ಡ್ಯೂಟಿ ಮಧ್ಯೆ ಮುಟ್ಟಾದರೆ…?! ಮಹಿಳಾ ಪೊಲೀಸರಿಗೆ ಸಿಕ್ಕಿದೆ ಪರಿಹಾರ

    ಪಂಜಾಬ್: ಮೊಹಾಲಿ ಮಹಾನಗರ ಪಾಲಿಕೆಯೂ ಕಾಂಗ್ರೆಸ್ ಪಾಲು

    ಬಾಲಿವುಡ್ ನಟನ ಆತ್ಮಹತ್ಯೆ ಪ್ರಕರಣ : ಹೆಂಡತಿ, ಅತ್ತೆ ನೀಡಿದ್ದರೇ ಕಿರುಕುಳ ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts