More

    ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಅಥವಾ ನೇರವಾಗಿ ಷೇರುಗಳ ಖರೀದಿ: ಯಾವುದು ಸೂಕ್ತ ಎಂಬುದಕ್ಕೆ ಹೀಗಿವೆ 9 ಕಾರಣಗಳು…

    ಬೆಂಗಳೂರು: ಅನೇಕ ಹೂಡಿಕೆದಾರರಿಗೆ ಇದು ಸಾಮಾನ್ಯ ಸಂದಿಗ್ಧತೆ, ಗೊಂದಲ ಸಾಮಾನ್ಯವಾಗಿ ಕಾಡುತ್ತಿರುತ್ತದೆ.

    ಹೆಚ್ಚಿನ ಆದಾಯದ ನಿರೀಕ್ಷೆಯ ಕಾರಣದಿಂದ ನೇರವಾಗಿ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುವುದು ಆಕರ್ಷಕವಾಗಿದ್ದರೂ, ಬಹುಪಾಲು ಹೂಡಿಕೆದಾರರಿಗೆ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು ಹೆಚ್ಚು ಸೂಕ್ತವಾದ ಆಯ್ಕೆಯಾಗಿ ಹೊರಹೊಮ್ಮುತ್ತವೆ.

    ಹೆಚ್ಚಿನ ಹೂಡಿಕೆದಾರರಿಗೆ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು ಏಕೆ ಉತ್ತಮ ಆಯ್ಕೆಯಾಗಬಹುದು ಎಂಬುದಕ್ಕೆ ಹಲವು ಕಾರಣಗಳನ್ನು ಇಲ್ಲಿ ವಿವರಿಸಲಾಗಿದೆ.

    1) ವೃತ್ತಿಪರ ನಿರ್ವಹಣೆ:

    ಇಕ್ವಿಟಿ ಮ್ಯೂಚುಯಲ್ ಫಂಡ್‌ಗಳ ಪ್ರಮುಖ ಅನುಕೂಲವೆಂದರೆ ಇವುಗಳನ್ನು ವೃತ್ತಿಪರ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತದೆ.

    ಮ್ಯೂಚುಯಲ್ ಫಂಡ್‌ಗಳ ಮ್ಯಾನೇಜರ್‌ಗಳು ಅನುಭವಿ ತಜ್ಞರು ಆಗಿರುತ್ತಾರೆ. ಪ್ರತಿದಿನವೂ ಇವರು ಮಾರುಕಟ್ಟೆಗಳ ವಿಶ್ಲೇಷಣೆ ಮಾಡುತ್ತಾರೆ. ಅಲ್ಲದೆ, ಬೆಳವಣಿಗೆಯ ಸಾಮರ್ಥ್ಯವನ್ನು ಹೊಂದಿರುವ ಷೇರುಗಳನ್ನು ಆಯ್ಕೆ ಮಾಡುತ್ತಾರೆ. ತಮ್ಮ ಹೂಡಿಕೆಗಳನ್ನು ಸಕ್ರಿಯವಾಗಿ ನಿರ್ವಹಿಸಲು ಸಮಯ ಅಥವಾ ಜ್ಞಾನದ ಕೊರತೆಯಿರುವ ಹೂಡಿಕೆದಾರರಿಗೆ ಈ ಪರಿಣತಿಯು ವಿಶೇಷವಾಗಿ ಮೌಲ್ಯಯುತವಾಗಿದೆ.

    ಅಲ್ಲದೆ, ಷೇರುಗಳನ್ನು ನಿರ್ವಹಿಸಲು ಯಾರಾದರೂ ಜ್ಞಾನ ಮತ್ತು ಸಮಯವನ್ನು ಹೊಂದಿದ್ದರೂ, ಅವರು ಅನುಭವಿ ವೃತ್ತಿಪರರಿಗಿಂತ ಉತ್ತಮ ಕೆಲಸವನ್ನು ಮಾಡುವ ಸಾಧ್ಯತೆ ವಿರಳವಾಗಿರುತ್ತದೆ.

    2) ವೈವಿಧ್ಯೀಕರಣ:

    ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು ವಿವಿಧ ವಲಯಗಳು ಮತ್ತು ವಿವಿಧ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತವೆ. ಹೀಗಾಗಿ, ವಿವಿಧ ಷೇರುಗಳಲ್ಲಿ ಹೂಡಿಕೆ ಮಾಡುವುದರಿಂದ ಅಪಾಯದ ಪ್ರಮಾಣ ಕಡಿಮೆ ಇರುತ್ತದೆ. ಹೆಚ್ಚಿನ ಪ್ರಮಾಣ ಬಂಡವಾಳವಿಲ್ಲದೆ ವೈಯಕ್ತಿಕ ಹೂಡಿಕೆದಾರರಿಗೆ ಈ ರೀತಿ ವಿವಿಧ ಷೇರುಗಳಲ್ಲಿ ಹೂಡಿಕೆ ಮಾಡುವುದು ಕಷ್ಟಕರವಾಗಿರುತ್ತದೆ.

    ಅನೇಕ ಹೂಡಿಕೆದಾರರಿಂದ ಹಣವನ್ನು ಒಟ್ಟುಗೂಡಿಸುವ ಮೂಲಕ, ಮ್ಯೂಚುವಲ್ ಫಂಡ್‌ಗಳು ಹೆಚ್ಚಿನ ಹೆಚ್ಚು ಪರಿಣಾಮಕಾರಿಯಾಗಿ ವಿವಿಧ ಷೇರುಗಳಲ್ಲಿ ಹೂಡಿಕೆ ಮಾಡಲು ಶಕ್ತವಾಗಿರುತ್ತವೆ.

    3) ವೆಚ್ಚ-ಪರಿಣಾಮಕಾರಿ:

    ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ನೇರವಾಗಿ ಷೇರುಗಳನ್ನು ಖರೀದಿಸುವುದಕ್ಕಿಂತ ಹೆಚ್ಚು ವೆಚ್ಚ-ಪರಿಣಾಮಕಾರಿಯಾಗಿದೆ, ವಿಶೇಷವಾಗಿ ಸಣ್ಣ ಹೂಡಿಕೆದಾರರಿಗೆ ಇದು ಅನ್ವಯಿಸುತ್ತದೆ.

    ನೀವು ಷೇರುಗಳನ್ನು ಖರೀದಿಸಿದಾಗ, ಪ್ರತಿ ವಹಿವಾಟಿನ ಮೇಲೆ ನೀವು ಬ್ರೋಕರೇಜ್ ಶುಲ್ಕವನ್ನು ಪಾವತಿಸುತ್ತೀರಿ. ಮತ್ತೊಂದೆಡೆ, ಮ್ಯೂಚುವಲ್ ಫಂಡ್‌ಗಳಲ್ಲಿ ಈ ವೆಚ್ಚಗಳು ಎಲ್ಲಾ ಹೂಡಿಕೆದಾರರ ಮೇಲೆ ಹರಡುತ್ತವೆ, ಇದು ವೈಯಕ್ತಿಕ ಆದಾಯದ ಮೇಲಿನ ಪರಿಣಾಮವನ್ನು ಕಡಿಮೆ ಮಾಡುತ್ತದೆ.

    4) ಸುಲಭದ ಹೂಡಿಕೆ:

    ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ನೇರವಾಗಿದ್ದು, ಕೈಗೆಟಕುವಂತಿರುತ್ತದೆ. ವ್ಯವಸ್ಥಿತ ಹೂಡಿಕೆ ಯೋಜನೆಗಳ (SIP) ರೀತಿಯ ಆಯ್ಕೆಗಳೊಂದಿಗೆ, ಹೂಡಿಕೆದಾರರು ಸಣ್ಣ ಮೊತ್ತದಿಂದ ಹೂಡಿಕೆ ಪ್ರಾರಂಭಿಸಬಹುದು, ಕ್ರಮೇಣ ತಮ್ಮ ಪೋರ್ಟ್​ಫೊಲಿಯೋ ರೂಪಿಸಬಹುದು. ಈ ಸರಳತೆ ಮತ್ತು ಪ್ರವೇಶವು ಹೊಸ ಹೂಡಿಕೆದಾರರಿಗೆ ಮ್ಯೂಚುವಲ್ ಫಂಡ್‌ಗಳನ್ನು ಅತ್ಯುತ್ತಮ ಆಯ್ಕೆಯನ್ನಾಗಿ ಮಾಡುತ್ತದೆ.

    5) ನಗದೀಕರಣ:

    ಮ್ಯೂಚುವಲ್ ಫಂಡ್‌ಗಳು ಸಾಮಾನ್ಯವಾಗಿ ಷೇರುಗಳಿಗೆ ಹೋಲಿಸಿದರೆ ಉತ್ತಮ ದ್ರವ್ಯತೆ ನೀಡುತ್ತವೆ. ಹೆಚ್ಚಿನ ಇಕ್ವಿಟಿ ಮ್ಯೂಚುಯಲ್ ಫಂಡ್‌ಗಳು ನಿಮ್ಮ ಹೂಡಿಕೆಯನ್ನು ತುಲನಾತ್ಮಕವಾಗಿ ತ್ವರಿತವಾಗಿ ಮತ್ತು ಸುಲಭವಾಗಿ ನಗದೀಕರಣ ಮಾಡಲು ಅನುಮತಿಸುತ್ತವೆ, ವೈಯಕ್ತಿಕ ಷೇರುಗಳು ನೀಡದಿರುವ ಹಣಕಾಸಿನ ನಮ್ಯತೆಯನ್ನು ಇವು ಒದಗಿಸುತ್ತವೆ.

    6) ಭಾವನಾತ್ಮಕ ಪಕ್ಷಪಾತ ಕಡಿಮೆ:

    ಷೇರುಗಳಲ್ಲಿ ಹೂಡಿಕೆ ಮಾಡುವುದು ಸಾಮಾನ್ಯವಾಗಿ ಭಾವನಾತ್ಮಕ ಪಕ್ಷಪಾತಗಳಿಂದ ಪ್ರಭಾವಿತವಾಗಿರುತ್ತದೆ. ವೃತ್ತಿಪರರಿಂದ ನಿರ್ವಹಿಸಲ್ಪಡುವ ಇಕ್ವಿಟಿ ಮ್ಯೂಚುಯಲ್ ಫಂಡ್‌ಗಳು ಸಾಮಾನ್ಯವಾಗಿ ತಮ್ಮ ವಿಧಾನದಲ್ಲಿ ಹೆಚ್ಚು ಶಿಸ್ತುಬದ್ಧವಾಗಿರುತ್ತವೆ, ನಿರ್ದಿಷ್ಟ ಹೂಡಿಕೆಯ ಆದೇಶಗಳು ಮತ್ತು ಭಾವನಾತ್ಮಕ ಪಕ್ಷಪಾತಗಳ ಪ್ರಭಾವವನ್ನು ತಗ್ಗಿಸುವ ತಂತ್ರಗಳಿಗೆ ಬದ್ಧವಾಗಿರುತ್ತವೆ.

    7) ನಿಯಮಿತ ನಿರ್ವಹಣೆ ಮತ್ತು ಮರುಸಮತೋಲನ:

    ಈಕ್ವಿಟಿ ಮ್ಯೂಚುಯಲ್ ಫಂಡ್‌ಗಳು ತಮ್ಮ ನಿಧಿಯ ಉದ್ದೇಶಗಳನ್ನು ಸಾಧಿಸುವಂತೆ ಮಾಡುವ ನಿಟ್ಟಿನಲ್ಲಿ ನಿಧಿ ವ್ಯವಸ್ಥಾಪಕರು ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಮರುಸಮತೋಲನ ಮಾಡುತ್ತಾರೆ. ಈ ಸಕ್ರಿಯ ನಿರ್ವಹಣೆಯು ಬದಲಾಗುತ್ತಿರುವ ಮಾರುಕಟ್ಟೆ ಪರಿಸ್ಥಿತಿಗಳಲ್ಲಿ ಅನುಗುಣವಾಗಿರುತ್ತದೆ, ಆದರೆ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ವೈಯಕ್ತಿಕ ಹೂಡಿಕೆದಾರರಿಗೆ ತಮ್ಮದೇ ಈ ಕೆಲಸವನ್ನು ಮಾಡುವುದು ಸವಾಲಿನ ಮತ್ತು ಸಾಕಷ್ಟು ಸಮಯ ತೆಗೆದುಕೊಳ್ಳುವ ಸಂಗತಿಯಾಗಿರುತ್ತದೆ.


    8) ತೆರಿಗೆ ದಕ್ಷತೆ:

    ಭಾರತದಲ್ಲಿ, ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು ಷೇರುಗಳಿಗಿಂತ ಹೆಚ್ಚು ತೆರಿಗೆ ದಕ್ಷತೆ ಹೊಂದಿರುತ್ತವೆ. ಅಂದರೆ, ಕಡಿಮೆ ತೆರಿಗೆ ಪಾವತಿಸುತ್ತವೆ. ಏಕೆಂದರೆ, ಮ್ಯೂಚುಯಲ್ ಫಂಡ್‌ಗಳನ್ನು ಟ್ರಸ್ಟ್‌ಗಳಾಗಿ ಸ್ಥಾಪಿಸಲಾಗಿದೆ.

    ಲಾಭವನ್ನು ಗಳಿಸಿದಾಗ ಮ್ಯೂಚುವಲ್ ಫಂಡ್‌ಗಳು ಅದರ ಮೇಲೆ ತೆರಿಗೆಯನ್ನು ಪಾವತಿಸುವ ಅಗತ್ಯವಿಲ್ಲ. ಆದರೆ, ನೀವು ನೇರವಾಗಿ ಷೇರುಗಳಲ್ಲಿ ಹೂಡಿಕೆ ಮಾಡಿದಾಗ, ಲಾಭಗಳು ಮತ್ತು ಲಾಭಾಂಶಗಳ ಮೇಲೆ ಅನ್ವಯವಾಗುವ ತೆರಿಗೆಗಳನ್ನು ನೀವು ಪಾವತಿಸಬೇಕಾಗುತ್ತದೆ.

    ಈ ಕಾರಣದಿಂದಾಗಿ, ನೀವು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಹಣವು ತೆರಿಗೆ ಸೋರಿಕೆಯನ್ನು ಹೊಂದಿರುವುದಿಲ್ಲ ಮತ್ತು ದೀರ್ಘಾವಧಿಯ ಸಂಯೋಜನೆಗಾಗಿ ಉತ್ತಮವಾಗಿ ಹೊಂದಿಸಲಾಗಿದೆ.

    9) ನಿಗಾ ಸುಲಭ:

    ವೈಯಕ್ತಿಕವಾಗಿ ವಿವಿಧ ಷೇರುಗಳಲ್ಲಿ ಹೂಡಿಕೆಗಳನ್ನು ಮಾಡುವವರಿಗೆ ಅವುಗಳನ್ನು ಟ್ರ್ಯಾಕ್ ಮಾಡುವುದು (ನಿಗಾ ವಹಿಸುವುದು) ತೊಡಕಿನ ಸಂಗತಿಯಾಗುತ್ತದೆ. ಇದು ಗಮನಾರ್ಹ ಸಮಯ ಮತ್ತು ಶ್ರಮವನ್ನು ಬಯಸುತ್ತದೆ.

    ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು ಕನ್ಸಾಲಿಡೇಟೆಡ್ ಸ್ಟೇಟ್‌ಮೆಂಟ್‌ಗಳು ಮತ್ತು ಕಾರ್ಯಕ್ಷಮತೆಯ ವರದಿಗಳನ್ನು ಒದಗಿಸುತ್ತವೆ, ಇದರಿಂದ ಹೂಡಿಕೆದಾರರು ತಮ್ಮ ಹೂಡಿಕೆಗಳನ್ನು ಟ್ರ್ಯಾಕ್ ಮಾಡಲು ಸುಲಭವಾಗುತ್ತದೆ.

    ಹೀಗಾಗಿ, ನಿಮ್ಮ ಹೂಡಿಕೆಯ ಕಾರ್ಯತಂತ್ರದ ಭಾಗವಾಗಿ ಇಕ್ವಿಟಿ ಮ್ಯೂಚುವಲ್ ಫಂಡ್‌ಗಳನ್ನು ಪರಿಗಣಿಸುವುದು ಬುದ್ಧಿವಂತ ನಿರ್ಧಾರವಾಗಿದೆ ಎಂದೇ ವಿಶ್ಲೇಷಕರು, ಪರಿಣತರು ಹೇಳುತ್ತಾರೆ.

    ಪುಣೆ ಬಿಜೆಪಿ ಶಾಸಕನಿಂದ ಕಾನ್‌ಸ್ಟೆಬಲ್‌ಗೆ ಕಪಾಳ ಮೋಕ್ಷ ವಿಡಿಯೋ ವೈರಲ್​

    https://www.vijayavani.net/getting-the-basics-about-pms-amp-aif-right

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts