More

  ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಪ್ತಾಹ- 2023

  ಮುಧೋಳ: ನಗರದ ಬಿವಿವಿ ಸಂಘದ ಬೀಳೂರು ಗುರುಬಸವ ಮಹಾಸ್ವಾಮೀಜಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ(ಇಸ್ರೋ)ದ ಲಿಕ್ವಿಡ್ ಪ್ರಪಲ್ಶನ್ ಕೇಂದ್ರದ ಸಹಯೋಗದೊಂದಿಗೆ ನ. 23 ಮತ್ತು 24 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಪ್ತಾಹ -2023 ಹಾಗೂ ಗಗನಯಾನ, ಚಂದ್ರಯಾನ ಮತ್ತು ವಿವಿಧ ಮಾದರಿ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ ಎಂದು ಬಿಜಿಎಂಐಟಿ ಕಾಲೇಜಿನ ಪ್ರಾಚಾರ್ಯ ಡಾ. ಶ್ರವಣಕುಮಾರ ಕೆರೂರ ತಿಳಿಸಿದರು.

  ನಗರದ ಕಾನಿಪ ಸಂಘದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಲಿಕ್ವಿಡ್ ಪ್ರಪಲ್ಶನ್ ಕೇಂದ್ರದ ನಿರ್ದೇಶಕ ಡಾ.ವಿ. ನಾರಾಯಣನ್, ಉಪನಿರ್ದೇಶಕ ಕೆ. ಶಾಂಬಯ್ಯ, ಬಾಗಲಕೋಟೆ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೆ. ನಂದನೂರ, ಮುಧೋಳ ತಾಲೂಕಿನ ಬ್ಲಾಕ್ ಶಿಕ್ಷಣ ಅಧಿಕಾರಿ ಬಿಇಒ ಎಸ್.ಎಂ. ಮುಲ್ಲಾ ಭಾಗವಹಿಸುವರು. ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಬಿಜಿಎಂಐಟಿಯ ಕಾರ್ಯಕಾರಿಣಿ ಮಂಡಳಿ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ್, ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ ಉಪಸ್ಥಿತರಿರುವರು ಎಂದರು.

  ಎರಡು ದಿನ ನಡೆಯುವ ಕಾರ್ಯಕ್ರಮದಲ್ಲಿ ಇಸ್ರೋದ 70ಕ್ಕೂ ಹೆಚ್ಚು ವಿಜ್ಞಾನಿಗಳ ತಂಡದಿಂದ ವಿವಿಧ ಸ್ಯಾಟ್‌ಲೈಟ್, ರಾಕೆಟ್, ಇಂಜಿನ್‌ಗಳ ಬಾಹ್ಯಾಕಾಶ ಉಪಕರಣಗಳ ಮಾದರಿ ಪ್ರದರ್ಶಿಸಲಾಗುವುದು. ಮುಧೋಳ ತಾಲೂಕಿನ ಎಲ್ಲ ಹೈಸ್ಕೂಲ್, ಪಿಯು ಕಾಲೇಜ್ ಮತ್ತು ಡಿಪ್ಲೊಮಾ ಕಾಲೇಜ್‌ಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಬಾಹ್ಯಾಕಾಶದ ವಿವಿಧ ವಿಷಯಗಳ ಮೇಲೆ ಸ್ವರ್ಧೆ ಜತೆಗೆ ಇಸ್ರೋ ವಿಜ್ಞಾನಿಗಳೊಂದಿಗೆ ಸಂವಾದ ಕೂಡ ಆಯೋಜಿಸಲಾಗಿದೆ ಎಂದು ತಿಳಿಸಿದರು.

  ತಾಲೂಕಿನ 12ಸಾವಿರ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದ್ದು, ಅವರಿಗೆ ಊಟದ ಜತೆಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
  ಇಸ್ರೋ ವಿಜ್ಞಾನಿಗಳು ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಪ್ತಾಹದ ಕಾರ್ಯಾಧ್ಯಕ್ಷ ಡಾ.ಎಂ. ಕಾರ್ತಿಕೇಯನ್ ಮಾತನಾಡಿ, ಬಾಗಲಕೋಟೆ ಆರ್ಥಿಕವಾಗಿ ಬಲಿಷ್ಠವಾಗಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಮೂಲಕ ಗಮನ ಸೆಳೆಯಲು ಪ್ರಯತ್ನಿಸುತ್ತಿದೆ. ಇಸ್ರೋ ಇಂಥ ಕಾರ್ಯಕ್ರಮ ಹೆಚ್ಚಾಗಿ ಬೆಂಗಳೂರು ಹಾಗೂ ಸಮೀಪದ ನಗರದಲ್ಲಿ ಹಮ್ಮಿಕೊಳ್ಳುತ್ತಿತ್ತು. ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ನಡೆಯುತ್ತಿದೆ ಎಂದು ತಿಳಿಸಿದರು.
  ಮಾಧ್ಯಮ ಪ್ರತಿನಿಧಿ ಪ್ರೊ. ವಿನಯ ಶೆಟ್ಟರ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts