More

    ಹು-ಧಾದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

    ಹುಬ್ಬಳ್ಳಿ: ನವ ಕರ್ನಾಟಕ ಚಲನಚಿತ್ರ ಅಕಾಡೆಮಿ ಆಶ್ರಯದಲ್ಲಿ ‘ಕರ್ನಾಟಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-2021 : ಚಲನಚಿತ್ರ ಹಾಗೂ ಕಿರುಚಿತ್ರ ಪ್ರಶಸ್ತಿ ವಿತರಣೆ ಸಮಾರಂಭ’ವನ್ನು ಮೇ 21, 22 ಹಾಗೂ 23ರಂದು ಹುಬ್ಬಳ್ಳಿ-ಧಾರವಾಡದಲ್ಲಿ ಆಯೋಜಿಸಲಾಗಿದೆ.

    ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಚಲನಚಿತ್ರೋತ್ಸವದ ಉಸ್ತುವಾರಿ ಅಲ್ತಾಫ ಜಹಾಂಗೀರ್, ಒಟ್ಟು 120 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಇದರಲ್ಲಿ 26 ಚಿತ್ರಗಳು ವಿದೇಶಗಳದ್ದಾಗಿದ್ದು, ಚಲನಚಿತ್ರಗಳ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ ಎಂದರು.

    ಹುಬ್ಬಳ್ಳಿಯ ಐನಾಕ್ಸ್ ಮಲ್ಟಿಪ್ಲೆಕ್ಸ್​ನಲ್ಲಿ 4 ಹಾಗೂ ಧಾರವಾಡದ ಸೃಜನಾ ರಂಗಮಂದಿರ, ಕಲಾಭವನ, ನೌಕರರ ಭವನ, ರಂಗಾಯಣದಲ್ಲಿ ತಲಾ 1 ಪರದೆ ಅಳವಡಿಸಲಾಗುವುದು. ಬೆಳಗ್ಗೆ 9ರಿಂದ ರಾತ್ರಿ 12 ಗಂಟೆಯವರೆಗೆ ನಿತ್ಯ 5 ಪ್ರದರ್ಶನಗಳು ನಡೆಯಲಿವೆ ಎಂದರು.

    ಲ್ಯಾಟಿನ್ ಅಮೆರಿಕ, ಮಾಲ್ಡೀವ್ಸ್​ನ ಚಿತ್ರಗಳು, ಹಿಂದಿ, ಇಂಗ್ಲಿಷ್, ಕನ್ನಡ, ತಮಿಳು, ತೆಲುಗು ಸೇರಿದಂತೆ ಭಾರತದ ವಿವಿಧ ಭಾಷೆಗಳ ಚಿತ್ರಗಳು ಪ್ರದರ್ಶನ ಕಾಣಲಿವೆ.

    ವಿವಿಧ 7 ವಿಭಾಗದಲ್ಲಿ ಆಯ್ಕೆಯಾಗುವ ಚಲನಚಿತ್ರಗಳಿಗೆ ಪ್ರಶಸ್ತಿ ನೀಡಲಾಗುವುದು. 14ರಿಂದ 18 ವಯಸ್ಸಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಇದೆ. ಇತರರಿಗೆ 3 ದಿನಗಳಿಗೆ ಒಟ್ಟು 1,100 ರೂ. ಪ್ರವೇಶ ದರ ನಿಗದಿಪಡಿಸಲಾಗಿದೆ. ವಿವಿಧ ಕಾಲೇಜುಗಳಲ್ಲಿ ಮಾ. 21ರಿಂದ ಟ್ಯಾಲೆಂಟ್ ಹಂಟ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

    ಪ್ರತಿ ಪ್ರದರ್ಶನದ ನಂತರ ಚರ್ಚೆ ಹಾಗೂ ಕಾರ್ಯಾಗಾರ ನಡೆಯಲಿದೆ. ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಹಾಗೂ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವ ಚಿತ್ರಗಳು, ಕಿರುಚಿತ್ರಗಳು www.kiff.org.inn ವೆಬ್​ಸೈಟ್​ನಲ್ಲಿ ಆನ್​ಲೈನ್ ಮೂಲಕ ಹೆಸರು ನೋಂದಾಯಿಸಬೇಕು. 60 ಕಿರುಚಿತ್ರಗಳೂ ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದರು.

    ಮೇ 21ರಂದು ಬೆಳಗ್ಗೆ 9ಕ್ಕೆ ಹುಬ್ಬಳ್ಳಿಯ ನವೀನ ಹೋಟೆಲ್​ನಲ್ಲಿ ಉದ್ಘಾಟನೆ ಹಾಗೂ 23ರಂದು ಧಾರವಾಡದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.

    ಅಕಾಡೆಮಿ ಅಧ್ಯಕ್ಷ ಎಂ.ಎಂ. ಮುಮ್ಮಿಗಟ್ಟಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು, ಬಹುಭಾಷಾ ನಟ ಸುಮನ್, ನಿರ್ವಪಕರ ಸಂಘದ ಅಧ್ಯಕ್ಷ ಪ್ರವೀಣಕುಮಾರ ಹಾಗೂ ಇತರರು ಸುದ್ದಿಗೋಷ್ಠಿಯದ್ದರು.

    ಬಾಲಿವುಡ್ ನಟ ಅನಿಲ ಕಪೂರ ಸೇರಿದಂತೆ ಎಲ್ಲ ಭಾಷೆಗಳ ಹಿರಿ-ಕಿರಿಯ ನಟರನ್ನು ಆಹ್ವಾನಿಸಲಾಗುವುದು. ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ ಜಾವಡೇಕರ ಅವರನ್ನು ಉದ್ಘಾಟನೆಗೆ ಆಹ್ವಾನಿಸಲಾಗುವುದು. ವಿದೇಶದಿಂದ 300ಕ್ಕೂ ಹೆಚ್ಚು ಗಣ್ಯರು ಭಾಗವಹಿಸಲಿದ್ದಾರೆ.
    | ಅಲ್ತಾಫ್ ಜಹಾಂಗೀರ್, ಚಲನಚಿತ್ರೋತ್ಸವದ ಉಸ್ತುವಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts