More

  ಕೋಲಂಬಿಯಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ರೈತ ಸಮಾವೇಶದಲ್ಲಿ ರಾಜ್ಯದ 8 ರೈತರು ಭಾಗಿ

  ಹಾವೇರಿ: ದಕ್ಷಿಣ ಅಮೇರಿಕಾದ ಕೋಲಂಬಿಯಾದಲ್ಲಿ ಡಿ. 1ರಿಂದ 9ರವರೆಗೆ ಜರುಗಲಿರುವ ಅಂತಾರಾಷ್ಟ್ರೀಯ ರೈತ ಸಮಾವೇಶದಲ್ಲಿ ರಾಜ್ಯದ 8 ರೈತರು ಭಾಗವಹಿಸುತ್ತಿದ್ದು, ಕೃಷಿ ಸಮಸ್ಯೆಗಳು ಹಾಗೂ ಕೈಗೊಳ್ಳಬೇಕಾದ ಪರಿಹಾರ ಬಗ್ಗೆ ನಡೆಯುವ ಚರ್ಚೆಯಲ್ಲಿ ಭಾಗಿಯಾಗಲಿದ್ದಾರೆ.
  ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಅಂತಾರಾಷ್ಟ್ರೀಯ ರೈತ ಸಮಾವೇಶ ಈ ಬಾರಿ ಕೊಲಂಬಿಯಾದಲ್ಲಿ ನಡೆಯಲಿದೆ. ಈ ಸಮಾವೇಶದಲ್ಲಿ ಹಾವೇರಿ ಜಿಲ್ಲೆಯ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಮಂಡ್ಯದಿಂದ ನಂದಿನಿ ಜಯರಾಮ್, ಬೆಳಗಾವಿಯಿಂದ ಪಾರ್ವತಿ ಕಳಸಣ್ಣನವರ, ಮೈಸೂರಿನಿಂದ ಮಂಜು ಕಿರಣಹಾಗೂ ರವಿವರ್ಮಾ ಕುಮಾರ ಸೇರಿ ಒಟ್ಟು 8 ಪಾಲ್ಗೊಳ್ಳುತ್ತಿದ್ದಾರೆ.
  ಈ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿದ ರೈತ ಮಲ್ಲಿಕಾರ್ಜುನ ಬಳ್ಳಾರಿ, ಪರಿಣಾಮಕಾರಿ ಹೋರಾಟದ ಮೂಲಕ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಹಾಗೂ ಸರ್ಕಾರವನ್ನು ಎಚ್ಚರಿಸುವಲ್ಲಿ ರೈತ ಸಂಘಟನೆ ಯಶಸ್ವಿಯಾಗಿದೆ. ಈ ಅನುಭವದ ಹಿನ್ನೆಲೆಯಲ್ಲಿ ಜಾಗತಿಕ ಸಮಾವೇಶದಲ್ಲಿ ರಾಜ್ಯದ ಕೃಷಿಕರ ಬೇಡಿಕೆಗಳ ಬಗ್ಗೆ ಚರ್ಚಿಸಿ, ಕೈಗೊಳ್ಳುವ ನಿರ್ಣಯಗಳನ್ನುಅನುಷ್ಠಾನಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲು ಅವಕಾಶ ಸಿಕ್ಕಿದೆ ಎಂದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts