ನವದೆಹಲಿ: ಕೇಂದ್ರ ಗುಪ್ತಚರ ಇಲಾಖೆಯು ಚೀನಿ ನಿರ್ಮಿತ 52 ಆ್ಯಪ್ಗಳ ಬಳಕೆ ಅಪಾಯಕಾರಿ ಎಂದು ಎಚ್ಚರಿಸಿದೆ. ಇದನ್ನು ಬ್ಲಾಕ್ ಮಾಡಬೇಕು ಇಲ್ಲವೇ, ಬಳಸದಂತೆ ಜನರಿಗೆ ಸೂಚಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ರಾಷ್ಟ್ರೀಯ ಭದ್ರತಾ ಮಂಡಳಿ ಕೂಡ ಈ ಪ್ರಸ್ತಾವನೆಯನ್ನು ಬೆಂಬಲಿಸುವುದಾಗಿ ತಿಳಿಸಿದೆ.
ಈ ಆ್ಯಪ್ಗಳು ಬಳಕೆಗೆ ಸುರಕ್ಷಿತವಲ್ಲ, ಜತೆಗೆ ಇವುಗಳ ಮೂಲಕ ಅಪಾರ ಪ್ರಮಾಣದ ಡೇಟಾ ದೇಶದಿಂದ ಹೊರಗೆ ರವಾನೆಯಾಗುತ್ತಿದೆ. ಹೀಗಾಗಿ ಇವುಗಳಿಂದ ದೂರವಿರುವುದೇ ಒಳ್ಳೆಯದು ಎಂದು ತಿಳಿಸಲಾಗಿದೆ.
ಇದನ್ನೂ ಓದಿ; ಭಾರತಕ್ಕೆ ಪಾಕಿಸ್ತಾನಕ್ಕಿಂತಲೂ ದೊಡ್ಡ ಗಡಿ ತಂಟೆಕೋರ ಚೀನಾ….!
ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿರುವ ಆ್ಯಪ್ಗಳ ಪಟ್ಟಿಯಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ಗೆ ಬಳಸಲಾಗುವ ಝೂಮ್, ಕಿರು ವಿಡಿಯೋಗಳ ಆ್ಯಪ್ ಟಿಕ್ಟಾಕ್, ಯುಸಿ ಬ್ರೌಸರ್, ಕ್ಸೆಂಡರ್ ಶೇರ್ ಇಟ್ ಹಾಗೂ ಕ್ಲೀನ್ ಮಾಸ್ಟರ್ ಆ್ಯಪ್ಗಳು ಪ್ರಮುಖವಾಗಿವೆ. ಈ ಆ್ಯಪ್ಗಳು ದೇಶದ ಭದ್ರತೆಗೂ ಧಕ್ಕೆ ಉಂಟುಮಾಡಬಲ್ಲವು ಎಂದು ಹೇಳಲಾಗಿದೆ.
ಕಳೆದ ಏಪ್ರಿಲ್ನಲ್ಲಿ ಝೂಮ್ ಆ್ಯಪ್ ಬಳಸದಂತೆ ಕೇಂದ್ರ ಗೃಹ ಸಚಿವಾಲಯವೇ ನಿರ್ದೇಶನ ನೀಡಿತ್ತು. ಹಲವು ಆ್ಯಂಡ್ರಾಯ್ಡ್ ಹಾಗೂ ಐಫೋನ್ ನಿರ್ವಹಣಾ ಸಾಫ್ಟ್ವೇರ್ಗಳನ್ನು ಚೀನಿ ಕಂಪನಿಗಳು ಅಥವಾ ಚೀನಾದೊಂದಿಗೆ ಸಂಬಂಧ ಹೊಂದಿರುವ ಕಂಪನಿಗಳೇ ನಿರ್ಮಿಸುವುದರಿಂದ ವೈರಸ್ಗಳನ್ನು ಹರಡಲು ಬಳಸಬಹುದು. ಇದರಿಂದ ಡೇಟಾಗೆ ಭದ್ರತೆಯೇ ಇಲ್ಲವಾಗಲಿದೆ ಎಂಬ ಆತಂಕವೂ ವ್ಯಕ್ತವಾಗಿದೆ.
ಚೀನಿ ಆ್ಯಪ್ಗಳ ಪಟ್ಟಿ ಇಲ್ಲಿದೆ.
* TikTok, Vault-Hide, Vigo Video, Bigo Live, Weibo
* WeChat, SHAREit, UC News, UC Browser
* BeautyPlus, Xender, ClubFactory, Helo, LIKE
* Kwai, ROMWE, SHEIN, NewsDog, Photo Wonder
* APUS Browser, VivaVideo- QU Video Inc
* Perfect Corp, CM Browser, Virus Cleaner (Hi Security Lab)
* Mi Community, DU recorder, YouCam Makeup
* Mi Store, 360 Security, DU Battery Saver, DU Browser
* DU Cleaner, DU Privacy, Clean Master – Cheetah
* CacheClear DU apps studio, Baidu Translate, Baidu Map
* Wonder Camera, ES File Explorer, QQ International
* QQ Launcher, QQ Security Centre, QQ Player, QQ Music
* QQ Mail, QQ NewsFeed, WeSync, SelfieCity, Clash of Kings
* Mail Master, Mi Video call-Xiaomi, Parallel Space
ಚೀನಾ ಅಕ್ರಮಣಕಾರಿ ನೀತಿ ಕಾರಣದಿಂದಾಗಿ ಪಾಶ್ಚಾತ್ಯ ದೇಶಗಳು ಚೀನಾದ ಸಾಫ್ಟ್ವೇರ್ ಹಾಗೂ ಹಾರ್ಡವೇರ್ಗಳ ಬಳಕೆಯಿಂದ ದೂರವಿರುವಂತೆ ಆಗಾಗ ಸಲಹೆ ನೀಡುತ್ತಲೇ ಇರುತ್ತವೆ. ಇದಲ್ಲದೇ, ಸಂವಹನ ವ್ಯವಸ್ಥೆಯನ್ನು ಕುಸಿಯುವಂತೆ ಚೀನಾ ಮಾಡಲಿದೆ ಎಂಬ ಆತಂಕವೂ ಇದೆ.
ಇದನ್ನೂ ಓದಿ; ಮೌಂಟ್ ಎವರೆಸ್ಟ್ ಬುಡಕ್ಕೂ ಬಂತು ಚೀನಾ ಗಡಿ ತಂಟೆ ವಿವಾದ
ಈ ಪೈಕಿ ಕೆಲವು ಸ್ಮಾರ್ಟ್ ಫೋನ್ಗಳೊಂದಿಗೆ ( ಚೀನಾ ನಿರ್ಮಿತ) ಇನ್ಬಿಲ್ಟ್ ಆಗಿರುವುದರಿಂದ ಅವುಗಳ ಬಳಕೆ ಅನಿವಾರ್ಯವಾಗಬಹುದು. ಆದರೆ, ಬೇರೆಡೆಯಿಂದ ಡೌನ್ಲೋಡ್ ಮಾಡಿಕೊಂಡು ಬಳಸುವ ಆ್ಯಪ್ಗಳನ್ನು ದೂರವಿಡಬಹುದು ಎಂದು ಸಲಹೆ ನೀಡಲಾಗಿದೆ.
ಅಂತಿಮ ವರ್ಷ, ಸೆಮಿಸ್ಟರ್ ವಿದ್ಯಾರ್ಥಿಗಳಿಗೂ ಪರೀಕ್ಷೆ ಇಲ್ಲವೆಂದ ವಿಶ್ವವಿದ್ಯಾಲಯ