More

    ಮಕ್ಕಳಿಗೆ ಸಂಸ್ಕೃತಿಯ ಜತೆಗೆ ವೈಚಾರಿಕತೆ ಮೂಡಿಸಿ.

    ಹೂವಿನಹಡಗಲಿ: ಪ್ರಸ್ತುತ ಮಕ್ಕಳಿಗೆ ಶಿಕ್ಷಣ, ಸಂಸ್ಕೃತಿಯ ಜತೆಗೆ ವೈಚಾರಿಕತೆ ಅರಿವು ಮೂಡಿಸಿ. ಸನಾತನ ಧರ್ಮದ ವಿಚಾರಗಳ ಪ್ರೌಢಿಮೆಯನ್ನು ಮೆರೆಯುವ ಅಗತ್ಯವಿದೆ. ಭಾರತೀಯರಲ್ಲಿ ದೇಶಾಭಿಮಾನ ಬೆಳೆಯಬೇಕು ಎಂದು ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಗೌಡ್ರ ಬಸವರಾಜಪ್ಪ ಹೇಳಿದರು.

    ಇದನ್ನೂ ಓದಿ: ಓದುವ ಸಂಸ್ಕೃತಿಯಿಂದ ಕನ್ನಡ ಸಾಹಿತ್ಯ ಶ್ರೀಮಂತ

    ಪಟ್ಟಣದ ಸರಕಾರಿ ನೌಕರರ ಸಮುದಾಯ ಭವನದಲ್ಲಿ ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗ ಮತ್ತು ಶಾಖಾ ಗ್ರಂಥಾಲಯ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ರಜತ ಸಂಭ್ರಮ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು.

    ಸನಾತನ ಧರ್ಮದಲ್ಲಿ ಶಿಕ್ಷಣ, ಸಂಸ್ಕೃತಿ, ವೈಚಾರಿಕತೆ, ವಿಜ್ಞಾನ ಮತ್ತು ತಂತ್ರಜ್ಞ್ಞಾನ ಸೇರಿ ಸಮೃದ್ಧವಾಗಿದ್ದು, ಜಗತ್ತಿನ ಇತರ ದೇಶಗಳಿಗೆ ಪ್ರೇರಣೆಯಾಗಿದೆ. ಸಾವಿರಾರು ವರ್ಷಗಳ ಹಿಂದೆಯೇ ಚಂದ್ರಯಾನ ನಡೆದಿದೆ.

    ಚಂದ್ರ ಮತ್ತು ಸೂರ್ಯ ಗ್ರಹಣ ವೀಕ್ಷಣೆ ಮಾಡಿದ್ದೇವೆ. ಕನ್ನಡಿಗರು ಹೃದಯ ವೈಶಾಲ್ಯತೆಯುಳ್ಳವರು. ನೆಲ-ಜಲ ಭಾಷೆ ಜತೆಗೆ ಹಲವು ಭಾಷೆಗಳನ್ನೂ ಗೌರವಿಸುತ್ತೆವೆ. ಅಭೂತಪೂರ್ವ ಜ್ಞಾನ ಹೊಂದಿ, ಕಲೆ, ಸಾಹಿತ್ಯ, ಸಂಸ್ಕೃತಿಯಲ್ಲೂ ಶ್ರೀಮಂತವಾಗಿದ್ದೇವೆ.

    ನಮ್ಮ ಸಂಸ್ಕೃತಿಗೆ ನಾವೇ ಬೆಲೆ ಕೊಡದಿರುವುದು ಖೆದೇಕರ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು. ಜೀವಿ ವೈವಿದ್ಯತೆ, ವೈಜ್ಞ್ಞಾನಿಕತೆ ಅಂದಿನ ಕಾಲದಲ್ಲಿಯೂ ಪ್ರೌಢಿಮೆಯನ್ನು ಮೆರೆದಿದೆ.

    ವೇದಗಳ ಕಾಲದ ಗಾಯತ್ರಿ ಮಂತ್ರವನ್ನು ವಿದೇಶೀಯರು ಪಠಿಸುತ್ತಾರೆ. ಹಂಪಿ ಸೇರಿ ಇತರ ಪ್ರವಾಸಿ ತಾಣಗಳಿಗೆ ಭೇಟಿ ನೀಡುವರು ಎಂದರು. 2023ನೇ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪ್ರಾಥಮಿಕ ಶಾಲಾ ವಿಭಾಗದಿಂದ ಪಟ್ಟಣದ ಎಂ.ಪಿ.ಪ್ರಕಾಶ ನಗರ ಸ.ಹಿ.ಪ್ರಾ.ಶಾಲೆಯ ಶಿಕ್ಷಕಿ ಪರಂಜ್ಯೋತಿ ಅಂಗಡಿ,

    ಪ್ರೌಢಶಾಲಾ ವಿಭಾಗದಿಂದ ಪಶ್ಚಿಮ ಕಾಲ್ವಿ ಎಂಬಿಪಿಸಿ ಪ್ರೌಢಶಾಲೆಯ ಮುಖ್ಯಗುರು ಪರಶುರಾಮ್ ಮಾಳಗಿ, ಕಾಲೇಜು ವಿಭಾಗದಿಂದ ಜಿಪಿಜಿ ಬಾ.ಸ.ಪ.ಪೂ ಕಾಲೇಜಿನ ಉಪನ್ಯಾಸಕ ವಿರುಪಾಕ್ಷಪ್ಪ ಬಡಿಗೇರ, ಗ್ರಂಥಾಲಯ ವಿಭಾಗದಿಂದ ಹ್ಯಾರಡ ಗ್ರಂಥಾಲಯ ಗ್ರಂಥಪಾಲಕ ಕೃಷ್ಣೇಗೌಡ ಅವರಿಗೆ ಪ್ರಶಸ್ತಿ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts