More

    ಇಂಥಾ ಪೋಸ್ಟ್​ ಮಾಡೋ ಬದಲು ಡ್ರೋನ್​ ತಯಾರಿಸಿದ ವಿಡಿಯೋ ಅಪ್​ಲೋಡ್​ ಮಾಡಪ್ಪಾ ಪ್ರತಾಪ್​!

    ಬೆಂಗಳೂರು: ಮಿಕ್ಸಿ ಹಾಗೂ ಟಿವಿ ಬಿಡಿ ಭಾಗಗಳಿಂದ ಸುಮಾರು 600 ಡ್ರೊನ್​ಗಳನ್ನು ತಯಾರಿಸಿದ್ದೇನೆಂದು ಹೇಳಿ ಜನಮನ್ನಣೆ ಗಳಿಸಿದ್ದ ಡ್ರೋನ್​ ಪ್ರತಾಪ್​ ಓರ್ವ ನಕಲಿ ವಿಜ್ಞಾನಿ ಎಂಬುದು ಗೊತ್ತಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಲೇ ಇದೆ.

    ಇದನ್ನೂ ಓದಿ: ಫೇಸ್​ಬುಕ್​ನಲ್ಲಿ ಡ್ರೋನ್ ಪ್ರತಾಪ್ ಫ್ಯಾನ್ಸ್ ಕ್ಲಬ್ ತೆರೆದಿದ್ದು ಅಭಿಮಾನಿಗಳೋ, ಪ್ರತಾಪನೋ?

    ಡ್ರೋನ್​ ಪ್ರತಾಪ್​ ಫ್ಯಾನ್ಸ್​ ಕ್ಲಬ್​ ಹೆಸರಿನಲ್ಲಿ ಫೇಸ್​ಬುಕ್​ನಲ್ಲಿ ತೆರೆಯಲಾಗಿರುವ ಖಾತೆ ಬಗ್ಗೆಯೂ ಸಂಶಯ ವ್ಯಕ್ತವಾಗಿದೆ. ಮೇ-ಜೂನ್‌ವರೆಗೆ ಆಗೊಂದು ಈಗೊಂದು ಪೋಸ್ಟ್ ಅಪ್‌ಡೇಟ್ ಆಗುತ್ತಿತ್ತು. ಇದೀಗ ಸಾಕಷ್ಟು ಪೋಸ್ಟ್​ಗಳು ಅಪ್​ಡೇಟ್​ ಆಗುತ್ತಿದ್ದು, ಅವರೇ ಅಕೌಂಟ್​ ಓಪನ್​ ಮಾಡಿ ತಮ್ಮನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಹೀಗಿದ್ದರೂ ಫ್ಯಾನ್ಸ್​ ಕ್ಲಬ್​ನಲ್ಲಿ ಪ್ರತಿನಿತ್ಯ ಸಾಕಷ್ಟು ಪೋಸ್ಟ್​ ಮಾಡಲಾಗುತ್ತದೆ. ಸರ್ಕಾರದ ಕೋವಿಡ್​ ಸಲಹೆಗಳನ್ನು ಹಂಚಿಕೊಳ್ಳಲಾಗುತ್ತಿದೆ. ಇದರೊಂದಿಗೆ ಪ್ರತಾಪ್​ ಅವರ ಕೆಲವು ವಿಡಿಯೋಗಳು ಅಪ್​ಲೋಡ್​ ಆಗಿವೆ. ಆದರೆ, ಎಲ್ಲ ಪೋಸ್ಟ್​ಗಳಿಗೂ ಬೆಂಬಲಕ್ಕಿಂತ ಆಕ್ರೋಶವೇ ಹೆಚ್ಚಾಗಿ ಕಂಡುಬಂದಿದೆ.

    ಇದರ ನಡುವೆ ಕಳೆದ ವರ್ಷ ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಪ್ರವಾಹದ ವೇಳೆ ನಡೆದ ರಕ್ಷಣಾ ಕಾರ್ಯಾಚರಣೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಅಜ್ಜಿಯೊಬ್ಬರು ನೀಡಿದ ಹಾಲಿಗೆ ಸೆಕ್ಕರೆ ಬೆರೆಸಿ ಕುಡಿದು ಚೆನ್ನಾಗದೆ ಎಂದು ಹೇಳಿದ ದೃಶ್ಯವಿದೆ. ಇದೀಗ ಈ ವಿಡಿಯೋ ಕುರಿತು ಅನೇಕರು ಕಿಡಿಕಾರಿದ್ದಾರೆ. ಇಂತಹ ವಿಡಿಯೋಗಳನ್ನು ಹಾಕುವ ಬದಲು ಡ್ರೋನ್​ ತಯಾರಿಸಿದ ವಿಡಿಯೋಗಳನ್ನು ಪೋಸ್ಟ್​ ಮಾಡಿ ಎಂದು ಸವಾಲು ಹಾಕಿದ್ದಾರೆ.

    Uttara Karnataka flood time

    Posted by Drone Prathap Fan's Club on Wednesday, July 15, 2020

    ಇದನ್ನೂ ಓದಿ:  ಮೀತಿ ಮೀರುತ್ತಿದ್ದೀರಿ ಜೋಕೆ ಎಂದು ಡ್ರೋನ್ ಪ್ರತಾಪ್​ ಎಚ್ಚರಿಕೆ ನೀಡಿದ್ಯಾರಿಗೆ?

    ನಿಮ್ಮ ಪ್ರಮಾಣ ಪತ್ರ, ಸ್ಪರ್ಧೆಗಳು, ಸಮಿನಾರ್​ ಹಾಗೂ ಮೆಡಲ್​ಗಳನ್ನು ಜನರ ಮುಂದೆ ಬಹಿರಂಗಪಡಿಸಿ, ಈಗಲಾದರೂ ಜನತೆಯ ಮುಂದೆ ಕ್ಷಮೆಯಾಚಿಸಿ ಎಂದು ಜಾಲತಾಣದಲ್ಲಿ ನೆಟ್ಟಿಗರು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡಿದ್ದಾರೆ. (ಏಜೆನ್ಸೀಸ್​)

    ಇಂಥಾ ಪೋಸ್ಟ್​ ಮಾಡೋ ಬದಲು ಡ್ರೋನ್​ ತಯಾರಿಸಿದ ವಿಡಿಯೋ ಅಪ್​ಲೋಡ್​ ಮಾಡಪ್ಪಾ ಪ್ರತಾಪ್​!

    ಹುಟ್ಟೂರಿನ ಹೆಮ್ಮೆಯ ಲಾಭ ಪಡೆಯಲು ಡ್ರೋನ್ ಪ್ರತಾಪ್ ಪ್ರಯತ್ನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts