More

    ಸಿದ್ಧಲಿಂಗ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ

    ಇಂಡಿ: ಭೀಮಾ ತೀರದಲ್ಲಿ ಶರಣರು, ಸಂತರು, ದಾರ್ಶನಿಕರು ನಡೆದಾಡಿ ಈ ಭಾಗದ ಜನರಿಗೆ ಉತ್ತಮ ಸಂಸ್ಕಾರ ನೀಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು.

    ಪಟ್ಟಣದ ಲಚ್ಯಾಣ ಪ್ರವೇಶ ದ್ವಾರದ ಮೇಲ್ಭಾಗದಲ್ಲಿ ಸಿದ್ಧಲಿಂಗ ಮಹಾರಾಜರ ಹಾಗೂ ಬಂಥನಾಳ ಸಂಗನಬಸವ ಸ್ವಾಮಿಗಳ ನೂತನ ಮೂರ್ತಿ ಪ್ರತಿಷ್ಠಾಪನೆಯನ್ನು ಗುರುವಾರ ನೆರವೇರಿಸಿ ಅವರು ಮಾತನಾಡಿದರು.

    ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದಲ್ಲಿ ಅನೇಕ ಪುಣ್ಯಕ್ಷೇತ್ರಗಳಿವೆ. ಅವುಗಳಲ್ಲಿ ಲಚ್ಯಾಣದ ಸಿದ್ಧಲಿಂಗ ಮಹಾರಾಜರು, ಬಂಥನಾಳ ಸಂಗನಬಸವ ಮಹಾಸ್ವಾಮಿಗಳು, ಗೋಳಸಾರದ ಪುಂಡಲಿಂಗ ಮಹಾ ಶಿವಯೋಗಿಗಳು, ಮಿರಗಿಯ ಯಲ್ಲಾಲಿಂಗ ಮಹಾರಾಜರು ಸೇರಿದಂತೆ ಅನೇಕ ದಾರ್ಶನಿಕರು ಈ ಭಾಗದ ಜನರಿಗೆ ಸಂಸ್ಕಾರ ನೀಡಿದ್ದರಿಂದಲೇ ಇಲ್ಲಿನ ಜನರು ಸಾಮರಸ್ಯದ ಜೀವನ ನಡೆಸುತ್ತಿದ್ದಾರೆ ಎಂದರು.

    ಶಾಸಕ ಯಶವಂತರಾಯಗೌಡ ಪಾಟೀಲ ಅವರ ಪುತ್ರ ವಿಠ್ಠಲಗೌಡ ಪಾಟೀಲ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಬಳಿಕ ಮಾತನಾಡಿದ ಅವರು, ಈ ಭಾಗದಲ್ಲಿ ಸಾಕಷ್ಟು ಪವಾಡಗಳನ್ನು ಮಾಡಿ ಲಚ್ಯಾಣ ಗ್ರಾಮವನ್ನು ಪಾವನ ಮಾಡಿದ ಕೀರ್ತಿ ಸಿದ್ಧಲಿಂಗ ಮಹರಾಜರಿಗೆ ಸಲ್ಲುತ್ತದೆ ಎಂದರು.

    ಪುರಸಭೆೆ ಮಾಜಿ ಅಧ್ಯಕ್ಷ ಶ್ರೀಕಾಂತ ಕೂಡಿಗನೂರ, ಎ.ಪಿ.ಕಾಗೊಡಕರ್, ಚಂದು ದೇವರ, ಪ್ರಕಾಶ ಕುಂಬಾರ, ಸತೀಶ್ ಕುಂಬಾರ, ಸುಧೀರ ಕರಕಟ್ಟಿ, ಜಾವಿದ್ ಮೋಮಿನ್, ಅನೀಲಗೌಡ ಬಿರಾದಾರ, ಶಿವಾನಂದ ಬಿಸನಾಳ, ರಾಮಸಿಂಗ್ ಕನ್ನೋಳಿ, ಧನರಾಜ ಮುಜಗೊಂಡ, ಶಂಕರಗೌಡ ಬಿರಾದಾರ, ಬ್ರಹ್ಮಾನಂದ ಜೀವನ, ಈರಣ್ಣ ಮುಜಗೊಂಡ, ಮಲ್ಲೇಶಿ ಮುಜಗೊಂಡ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts