More

    ಬೆಂಬಲ ಬೆಲೆ ಖರೀದಿ ಕೇಂದ್ರ ಸ್ಥಾಪಿಸಿ

    ಹಾವೇರಿ: ಜಿಲ್ಲೆಯಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿ ರೈತ ಸೇನಾ ಕರ್ನಾಟಕ ಸಮಿತಿಯಿಂದ ಜಿಲ್ಲಾಧಿಕಾರಿ ಮೂಲಕ ಸಿಎಂ, ಕೃಷಿ ಹಾಗೂ ಗೃಹ ಸಚಿವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

    ರೈತ ಸೇನಾ ಕರ್ನಾಟಕದ ಜಿಲ್ಲಾಧ್ಯಕ್ಷ ಸಿದ್ಧಲಿಂಗೇಶ ಎಂ. ಪಾಟೀಲ ಮಾತನಾಡಿ, ರಾಜ್ಯದಲ್ಲಿ ಮುಂಗಾರು ಹಂಗಾಮಿನ ಬೆಳೆಗಳ ಕಟಾವು ನಡೆದಿದ್ದು, ರೈತರು ಬೆಳೆದಿರುವ ಮೆಕ್ಕೆಜೋಳ, ಗೆಜ್ಜೆಶೇಂಗಾ, ಬಿಟಿ ಹತ್ತಿ, ಜೋಳ, ಕುಸುಬಿ, ತೊಗರಿ, ಸೋಯಾಬೀನ್ ಬೆಳೆಗಳ ಬೆಲೆ ಕುಸಿತ ಕಂಡಿದೆ. ಅತಿಯಾದ ಮಳೆಯಿಂದ ಈ ಬೆಳೆಗಳ ಇಳುವರಿಯೂ ಕುಸಿದಿದೆ. ಈ ಸಮಯದಲ್ಲಿ ಸರ್ಕಾರ ರೈತರ ನೆರವಿಗೆ ಧಾವಿಸಬೇಕಿದೆ. ಕೂಡಲೆ ಸರ್ಕಾರ ಬೆಂಬಲ ಬೆಲೆಯಡಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಿದರೆ ರೈತರ ಉತ್ಪನ್ನಗಳಿಗೆ ಕನಿಷ್ಠ ಮಟ್ಟದಲ್ಲಾದರೂ ಬೆಲೆ ಸಿಗಲಿದೆ. ಇಲ್ಲವಾದರೆ ರೈತರು ತುರ್ತು ಅಗತ್ಯಕ್ಕಾಗಿ ಕಡಿಮೆ ಬೆಲೆಗೆ ಬೆಳೆ ಮಾರಿ ಮತ್ತೆ ನಷ್ಟ ಅನುಭವಿಸುವ ಸ್ಥಿತಿ ಬರಲಿದೆ ಎಂದರು.

    ಸದ್ಯ ಮಾರುಕಟ್ಟೆಯಲ್ಲಿ ಮೆಕ್ಕೆಜೋಳಕ್ಕೆ 1,000ದಿಂದ 1,200 ರೂ.ಗಳ ದರವಿದೆ. ಖರೀದಿ ಕೇಂದ್ರ ಸ್ಥಾಪನೆಯಾದರೆ 1,850 ರೂ.ಗಳಷ್ಟು ದರ ಸಿಗಲಿದೆ. ಭತ್ತಕ್ಕೆ 1,868ರಿಂದ 1,888 ರೂ. ಜೋಳ 2,620ರಿಂದ 2,640, ಗೆಜ್ಜೆಶೇಂಗಾ 5,275 ರೂ. ಹತ್ತಿ 5,515ರಿಂದ 5,825 ರೂ.ಗಳ ಕನಿಷ್ಠ ಬೆಂಬಲ ಬೆಲೆಯಿದೆ. ಇದರ ಜೊತೆಗೆ ಪ್ರತಿ ಕ್ವಿಂಟಾಲ್​ಗೆ ಕನಿಷ್ಠ 1,500ರಿಂದ 2 ಸಾವಿರ ರೂ.ಗಳವರೆಗೆ ಹೆಚ್ಚಿನ ಪ್ರೋತ್ಸಾಹ ಧನವನ್ನು ಘೊಷಿಸಬೇಕು. ಖರೀದಿ ಸಮಯದಲ್ಲಿ ನಾನಾ ಷರತ್ತುಗಳನ್ನು ಹಾಕಬಾರದು. ರೈತರ ಎಲ್ಲ ಬೆಳೆಗಳನ್ನು ಕಡ್ಡಾಯವಾಗಿ ಖರೀದಿಸಬೇಕು ಎಂದು ಒತ್ತಾಯಿಸಿದರು.

    ಸಂಘದ ಪ್ರಶಾಂತ ದುಂಡಿಗೌಡ್ರ, ನೀಲಪ್ಪ ಮೂಕಪ್ಪನವರ, ಪ್ರಶಾಂತ ಕ್ಷತ್ರಿಯ, ಮರ್ಧಾನಬಿ ನಧಾಪ್, ನಾಗನಗೌಡ ಪಾಟೀಲ, ಬಸವರಾಜ ನೀರಲಗಿಮಠ, ಪಂಚಾಕ್ಷರಿ ಷಣ್ಮುಕೇಶ್ವರಮಠ, ಇಮಾಮಸಾಬ್ ನದಾಫ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts