More

    ಯುದ್ಧ ಹಡಗು, ಜಲಾಂತರ್ಗಾಮಿಗಳ ರಿಪೇರಿ ಕಾರ್ಯ ಪರಿಶೀಲನೆ

    ಕಾರವಾರ: ಆತ್ಮನಿರ್ಭರ ಭಾರತ ಯೋಜನೆಯಡಿ ಇಲ್ಲಿನ ಕದಂಬ ನೌಕಾನೆಲೆಯ ಯುದ್ಧ ಹಡಗು ರಿಪೇರಿ ಪ್ರಾಂಗಣ (ಎನ್​ಎಸ್​ಆರ್​ವೈ) ಪ್ರಕ್ರಿಯೆ ನಡೆದಿದ್ದು, ಭಾರತೀಯ ನೌಕಾಸೇನೆಯ ಸಲಕರಣೆ ವಿಭಾಗದ ಮುಖ್ಯಸ್ಥ ವೈಸ್ ಅಡ್ಮಿರಲ್ ಸಂದೀಪ್ ನೈತಾನಿ ಇತ್ತೀಚೆಗೆ ಅದರ ಪ್ರಗತಿ ಪರಿಶೀಲನೆ ನಡೆಸಿದರು.

    ನಂತರ ಅವರು ಭಾರತೀಯ ನೌಕಾಸೇನೆಯ ಯುದ್ಧ ಹಡಗು ರಿಪೇರಿ ಪ್ರಾಂಗಣಗಳ ಅರ್ಧ ವಾರ್ಷಿಕ ಪ್ರಗತಿ ಪರಿಶೀಲನೆ ಸಭೆಯನ್ನು ಕಾರವಾರದಲ್ಲಿಯೇ ನಡೆಸಿದರು.

    ಸೇನೆಗೆ ಬೇಕಾದ ವಸ್ತುಗಳನ್ನು ಭಾರತದಲ್ಲೇ ತಯಾರಿಕೆ ಹಾಗೂ ಯುದ್ಧ ಹಡಗುಗಳಲ್ಲಿ ಅವುಗಳ ಬಳಕೆ ಬಗ್ಗೆ ದೇಶದ ಯೋಜನೆ ಹಾಗೂ ಮುಂದಿನ ಗುರಿಗಳ ಬಗ್ಗೆ ಎನ್​ಎಸ್​ಆರ್​ವೈ ಅಧಿಕಾರಿಗಳಿಗೆ ತಿಳಿಸಿದರು.

    ಅಲ್ಲದೆ, ದೇಶದ ವಿವಿಧೆಡೆ ನಡೆದ ಯುದ್ಧ ಹಡಗು ಹಾಗೂ ಜಲಾಂತರ್ಗಾಮಿಗಳ ರಿಪೇರಿ ಕಾರ್ಯದ ಪ್ರಗತಿಯ ವರದಿ ಪಡೆದರು.

    ನೌಕಾ ಯೋಜನೆಗಳ ಡಿಡಿಜಿ ವೈಸ್ ಅಡ್ಮಿರಲ್ ಆರ್. ಸ್ವಾಮಿನಾಥನ್, ಮುಂಬೈ ಡಾಕ್​ಯಾರ್ಡ್​ನ ಅಡ್ಮಿರಲ್ ಸುಪರಿಂಟೆಂಡೆಂಟ್ ಕೆ.ಪಿ. ಅರವಿಂದ್, ನೌಕಾ ಸಂಗ್ರಹಾಗಾರದ ಸಹಾಯಕ ನಿಯಂತ್ರಕ ರಿಯರ್ ಅಡ್ಮಿರಲ್ ಸಂಜೀವ್ ಶರ್ವ, ರಿಯರ್ ಅಡ್ಮಿರಲ್ ದೀಪಕ್ ಗೋಸ್ವಾಮಿ, ಡಾಕ್​ಯಾರ್ಡ್​ನ ಸಹಾಯಕ ನಿಯಂತ್ರಕ ಕೆ. ಶ್ರೀನಿವಾಸ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts