More

    ಇನ್ನರ್ ವೀಲ್ ಕ್ಲಬ್ ಆಫ್ ಗದಗ್ ಮಿಡ್ ಟೌನ್ ವತಿಯಿಂದ ಮಹಿಳಾ ದಿನಾಚರಣೆ

    ಗದಗ: ಇನ್ನರ್ ವೀಲ್ ಕ್ಲಬ್ ಆಫ್ ಗದಗ ಮಿಡ್ ಟೌನ್ ವತಿಯಿಂದ ಮಹಿಳಾ ದಿನಾಚರಣೆ ಯನ್ನು ಅರುಣೋದಯ ಸೇವಾ ಚೇತನ ಗದಗ್ ದಲ್ಲಿ ನಡೆಯಿತು. ವೇದಿಕೆ ಮೇಲೆ ಕ್ಲಬ್ಬಿನ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ಬಿರಾದಾರ್, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರೈತ ಮಹಿಳೆಆದ ಶ್ರೀಮತಿ ಮಂಗಳಾ ನೀಲಗುಂದ್, ಕಾರ್ಯದರ್ಶಿ ಶ್ರೀಮತಿ ಪ್ರೀತಿ ಶಿವಪ್ಪನಮಠ, ಖಜಾಂಚಿ ಶ್ರೀಮತಿ ರಾಣಿ ಚಂದಾವರಿ,ಐಎಸ್ಓ ಶ್ರೀಮತಿ ಸುವರ್ಣ ಹೊನಗುಡಿ, ಐಪಿಪಿ ಶ್ರೀಮತಿ ಲತಾ ಮತ್ತಿನಪೆಂಡಿಮಠ, NIMA ಸಂಸ್ಥೆ ವುಮೆನ್ಸ್ ಫೋರಂ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಹಿರೇಮಠ್, ಉಪಸ್ಥಿತರಿದ್ದರು.

    ಮಂಗಳ ನೀಲಗುಂದ ಇವರ ಪರಿಚಯ ಶ್ರೀಮತಿ ಅನುಪಮಾ ಜೋಳದ್ ಮಾಡಿದರು, ಹಾಗೂ ಅವರನ್ನು ಸನ್ಮಾನಿಸಲಾಯಿತು ಇದರ ಪ್ರಾಯೋಜಕತ್ವವನ್ನು ಮಾಜಿ ಅಧ್ಯಕ್ಷರಾಾದ ಶ್ರೀಮತಿ ಡಾ. ಸುನಿತಾ ಸಜ್ಜನ್ ವಹಿಸಿದ್ದರು. RD ಏಜೆಂಟ್ಆದ ಶ್ರೀಮತಿ ಜಾನಕಿ ರಂಗಾಪುರ್ ಇವರ ಪರಿಚಯ ಮಾಜಿ ಅಧ್ಯಕ್ಷರಾದ ಶ್ರೀಮತಿ ಅಕ್ಕಮ್ಮ ಶಿರೋಳ್ ಹಾಗೂ ಗೀತಾ ಅಂಗಡಿ ಇವರ ಪರಿಚಯ ಶ್ರೀಮತಿ ಸುಧಾ ಮುತ್ತಗಿ ಮಾಡಿದರು, ಹಾಗೂ ಇವರನ್ನು ಕೂಡ ಸನ್ಮಾನಿಸಲಾಯಿತು, ಇದರ ಪ್ರಾಯೋಜಕತ್ವವನ್ನು ಶ್ರೀಮತಿ ಅಕ್ಕಮ್ಮ ಶಿರೋಳ್, ಶ್ರೀಮತಿ ಸಂಧ್ಯಾ ಪೋತ್ನಿಸ್, ಶ್ರೀಮತಿ ವಿಜಯ ಹಿರೇಗೌಡರ್ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಯಾದ ಶ್ರೀಮತಿ ಮಂಗಳ ನೀಲಗುಂದ ಮಹಿಳೆಯರ ಕುರಿತು ಮಾತನಾಡಿದರು,

    ನಮ್ಮ ಕ್ಲಬ್ಬಿನ ಸದಸ್ಯರಾದ ಗಿರಿಜಾ ನಾಲತ್ವಾಡ ಮಠ, ಕವನ ಬರೆದು ಪುಸ್ತಕದಲ್ಲಿ ಪ್ರಕಟಿಸಿದ್ದನ್ನು ಗುರುತಿಸಿ ಅವರಿಗೆ ಕಿರು ಕಾಣಿಕೆ ನೀಡಲಾಯಿತು. ಇವೆಂಟ್ ಚೇರ್ಮನ್ ಹಾಗೂ ಮಾಜಿ ಅಧ್ಯಕ್ಷರುಗಳಾದ ಶ್ರೀಮತಿ ಅನುಪಮಾ ಜೋಳದ ಹಾಗೂ ಶ್ರೀಮತಿ ಲತಾ ಮುತ್ತಿನಪೆಂಡಿಮಠ, ಇವರು ಮಹಿಳಾ ದಿನಾಚರಣೆಯ ಅಂಗವಾಗಿ ಸ್ಪರ್ಧೆಗಳನ್ನು ಏರ್ಪಡಿಸಿದ್ದರು ಮೊದಲನೇದಾಗಿ *ಒಗಟು* ಹೇಳುವ ಸ್ಪರ್ಧೆಯಲ್ಲಿ ೧.ಶ್ರೀಮತಿ ಗಿರಿಜಾ ನಾಲ್ವತವಾಡಮಠ, ಶ್ರೀಮತಿ ದೀಪಾ ಉಗಲಾಟ, ೩.ಶ್ರೀಮತಿ ಸುವರ್ಣ ಹೊನ್ನಗುಡಿ ಬಹುಮಾನ ಪಡೆದರು.

    ಅಭಿನೇತ್ರಿ ರೇವಣಕ್ಕರ್, ಹಾಗೂ ಶ್ರೀಮತಿ ಶ್ರುತಿ ಕಮತರ್ , ಆಫೀಸ್ ಬೇರೆಸ್ ಹಾಗೂ ಸಂಗಡಿಗರು ನೃತ್ಯ ಮಾಡಿದರು. ಮಾಜಿ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ಸ್ವಾಮಿ ಅವರು ಸ್ಪರ್ಧೆಗಳನ್ನು ಏರ್ಪಡಿಸಿದ್ದರು ಹಾಗೂ ಬಹುಮಾನದ ಪ್ರಾಯೋಜಕತ್ವವನ್ನು ವಹಿಸಿದ್ದರು. ಲಕ್ಕಿ ಲೇಡಿಯಾಗಿ ಶ್ರೀಮತಿ ರಶ್ಮಿ ಕುರಗೋಡು ಹಾಗೂ ಮಾಜಿ ಅಧ್ಯಕ್ಷರಾದ ಶ್ರೀಮತಿ ಶೋಭಾ ಹಿರೇಮಠ್, ವಿಜೇತರಾದರು, ಮಾರ್ಚ್ ತಿಂಗಳಲ್ಲಿ ಬರುವ ಮದುವೆ ವಾರ್ಷಿಕೋತ್ಸವ ಹಾಗೂ ಹುಟ್ಟು ಹಬ್ಬದವರಿಗೆ ಹೂ ಕೊಡುವ ದರ ಮೂಲಕ ಶುಭಾಶಯ ಕೋರಿದರು.   

    ನಿರೂಪಣೆಯನ್ನು ಶ್ರೀಮತಿ ನೀಲಾಂಬಿಕ ಮುಷ್ಟಿಗೇರಿ ಮಾಡಿದರು ಕೊನೆಯದಾಗಿ ಕೇಕ್ ಕತ್ತರಿಸಿ, ಕಾರ್ಯದರ್ಶಿ ಶ್ರೀಮತಿ ಪ್ರೀತಿ ಶಿವಪ್ಪನಮಠ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts