More

    ವಿಮೆ ಪರಿಹಾರದಲ್ಲಿ ಅನ್ಯಾಯ

    ಡಿಸಿಯೊಂದಿಗಿನ ಸಭೆಯಲ್ಲಿ ರೈತರ ಆಕ್ರೋಶ -ಅಧಿಕಾರಿಗಳು, ವಿಮಾ ಸಂಸ್ಥೆ ಬೇಜವಾಬ್ದಾರಿ ಆರೋಪ

    ಚಿಕ್ಕಬಳ್ಳಾಪುರ : ಬರ ಹಿನ್ನೆಲೆಯಲ್ಲಿ ಬೆಳೆ ನಷ್ಟ ಅನುಭವಿಸಿರುವ ಅರ್ಹರಿಗೆ ವಿಮೆ ಪರಿಹಾರ ಒದಗಿಸುವಲ್ಲಿ ಅನ್ಯಾಯವಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ.
    ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ರೈತರೊಂದಿಗಿನ ಸಭೆಯಲ್ಲಿದ್ದ ರೈತರು ಮೇಲಿನಂತೆ ಆರೋಪ ಮಾಡಿದರು.
    ಆಯಾ ವ್ಯಾಪ್ತಿಯಲ್ಲಿ ಸ್ಥಳ ಪರಿಶೀಲನೆ, ಬೆಳೆ ನಷ್ಟದ ಅಂದಾಜು, ಸಿಗಬೇಕಾದ ಪರಿಹಾರದ ಬಗ್ಗೆ ಸಮರ್ಪಕವಾಗಿ ಮಾಹಿತಿ ಸಂಗ್ರಹಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ವಿಮಾ ಕಂಪನಿ ಸಿಬ್ಬಂದಿ ವಿಫಲವಾಗಿದ್ದಾರೆ ಎಂದರು.
    ಜಿಲ್ಲೆಯಲ್ಲಿ ಬೆಳೆ ನಷ್ಟ ಅಧ್ಯಯನಕ್ಕೆ ಸಂಬಂಧಪಟ್ಟ ಗ್ರಾಮಲೆಕ್ಕಿಗರು ಹಾಗೂ ವಿಮಾ ಕಂಪನಿ ಸಿಬ್ಬಂದಿ ಸರಿಯಾಗಿ ಸ್ಥಳ ಪರಿಶೀಲಿಸಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗಿದೆ. ಕೃಷಿ ಜಮೀನಿನಲ್ಲಿ ಯಾವುದೇ ಬೆಳೆ ಬೆಳೆಯದಿದ್ದರೂ ಕೆಲವರ ಖಾತೆಗೆ ಹಣ ಜಮೆಯಾಗಿದೆ. ಕಷ್ಟಪಟ್ಟು ಬೆಳೆದ ಬೆಳೆ ಹಾಳಾಗಿ ನಷ್ಟ ಅನುಭವಿಸಿದ ಅನೇಕರಿಗೆ ಪರಿಹಾರ ಸಿಕ್ಕಿಲ್ಲ ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ ಕಿಡಿಕಾರಿದರು. ರೈತರ ಪಹಣಿಯಲ್ಲಿ ಬೆಳೆ ದೃಢೀಕರಣ ಮಾಹಿತಿ ದಾಖಲಿಸದಿರಲು ಮತ್ತು ಅರ್ಹರ ಬ್ಯಾಂಕ್ ಖಾತೆಗೆ ವಿಮೆ ಹಣ ಜಮೆಯಾಗದಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಹೊಣೆ ಎಂದು ಆರೋಪಿಸಿದರು.

    ಸಭೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಎಚ್.ಪಿ. ರಾಮನಾಥ್, ಉಪಾಧ್ಯಕ್ಷ ವೀರಪುರದ ಮುನಿನಂಜಪ್ಪ, ಜಂಟಿ ಕಾರ್ಯದರ್ಶಿ ಶ್ರೀನಿವಾಸ, ಸಂಚಾಲಕ ಮಹೇಶ್, ತಾಲೂಕು ಅಧ್ಯಕ್ಷರಾದ ಮರಳುಕುಂಟೆ ರಾಮಾಂಜನಪ್ಪ, ತಾದೂರು ಮಂಜುನಾಥ್, ಸೋಮಶೇಖರ್, ಕಾರ್ಯದರ್ಶಿ ಗೋಪಾಲ್, ಪದಾಧಿಕಾರಿಗಳಾದ ಮುನಿಕೃಷ್ಣಪ್ಪ, ಬಸವರಾಜು, ನಾಗರಾಜು, ಅಶ್ವತಪ್ಪ, ನಾರಾಯಣಸ್ವಾಮಿ ಮತ್ತಿತರರು ಇದ್ದರು.


    ವಿವಿಧ ಸಮಸ್ಯೆಗಳ ಪ್ರಸ್ತಾಪ
    ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಸುಸಜ್ಜಿತ ಹೂವಿನ ಮಾರುಕಟ್ಟೆ ಸೌಕರ್ಯ ಕೊರತೆ, ತಾತ್ಕಾಲಿಕ ಮಾರುಕಟ್ಟೆಯಲ್ಲಿ ಮೂರು ರೂ. ಬದಲಿಗೆ ಹತ್ತು ರೂ. ಸುಂಕ ವಸೂಲಿ, ಜಿಲ್ಲೆಯ ಕೆರೆಗಳಿಗೆ ಎಚ್.ಎನ್.ವ್ಯಾಲಿ ನೀರು ಸಮರ್ಪಕವಾಗಿ ಹರಿಸುವುದು, ಬಗರ್‌ಹುಕುಂ ಸಭೆಗಳ ಮೂಲಕ ಮಂಜೂರಾಗಿರುವ ಜಮೀನು ಮಾಲೀಕರ ಅರಣ್ಯ ಇಲಾಖೆಯ ಸಿಬ್ಬಂದಿ ದಬ್ಬಾಳಿಕೆ ಸೇರಿ ನಾನಾ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts