More

  ಅನ್ಯಾಯದ ವಿರುದ್ಧ ಹೋರಾಟ ನಡೆಸಿ

  ಯಲಬುರ್ಗಾ; ರಾಜ್ಯದಲ್ಲಿ ವಾಲ್ಮೀಕಿ ಸಮುದಾಯ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಸಂಘಟನೆ ಅವಶ್ಯವಿದೆ ಎಂದು ರಾಜ್ಯ ಪರಿಶಿಷ್ಟ ಪಂಗಡ ವಾಲ್ಮೀಕಿ ಯುವ ಘಟಕದ ಅಧ್ಯಕ್ಷ ಮಹೇಶ ಶೀಗಿಹಳ್ಳಿ ಹೇಳಿದರು.

  ಇದನ್ನೂ ಓದಿ: ಕರ್ನಾಟಕಕ್ಕೆ ಅನ್ಯಾಯ ಆಗ್ತಿದೆ; ಸಿದ್ದರಾಮಯ್ಯ ಗರಂ!

  ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಪಂಗಡ ವಾಲ್ಮೀಕಿ ಯುವ ಘಟಕದ ಜಿಲ್ಲಾ ಹಾಗೂ ತಾಲೂಕು ಘಟಕಗಳ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.

  ರಾಜ್ಯದಲ್ಲಿ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದು, ಅದರ ವಿರುದ್ಧ ಹೋರಾಟ ನಡೆಸುವುದು ಅವಶ್ಯಕವಾಗಿದೆ. ನಾಡಿನಾದ್ಯಂತ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲೆ, ತಾಲೂಕು ಮಟ್ಟದಲ್ಲಿ ಯುವ ಘಟಕದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತಿದೆ.

  ಸಮುದಾಯ ಸಂಘಟನೆಯಲ್ಲಿ ನಿಯಮಗಳಿಗೆ ಬದ್ಧರಾಗಿ ಇದ್ದವರಿಗೆ ಮಾತ್ರ ಅವಕಾಶ ನೀಡುತ್ತೇವೆ. ಆ ನಿಟ್ಟಿನಲ್ಲಿ ಸಮಾಜದ ಅಭಿವೃದ್ಧಿಗೆ ಪದಾಧಿಕಾರಿಗಳು ಶ್ರಮಿಸಬೇಕು ಎಂದರು. ನೂತನ ಪದಾಧಿಕಾರಿಗಳಿಗೆ ಆದೇಶ ಪ್ರಮಾಣಪತ್ರ ವಿತರಿಸಿ ಗೌರವಿಸಲಾಯಿತು.

  ಪದಾಧಿಕಾರಿಗಳ ಆಯ್ಕೆ: ಶಂಕರಗೌಡ ಮಾಲಿಪಾಟೀಲ್ (ಜಿಲ್ಲಾಧ್ಯಕ್ಷ), ಮೌನೇಶ ಮದ್ಲೂರು (ಪ್ರಧಾನ ಕಾರ್ಯದರ್ಶಿ), ಶಿವಪ್ಪ ನಾಯಕ (ಉಪಾಧ್ಯಕ್ಷ), ಪಿಡ್ಡನಗೌಡ ಮಾಲಿಪಾಟೀಲ್ (ಖಜಾಂಚಿ), ನಾಗರಾಜ ಪೂಜಾರ (ಯಲಬುರ್ಗಾ ತಾ.ಅಧ್ಯಕ್ಷ), ಲಕ್ಷ್ಮಣ ಕುಲಕರ್ಣಿ (ಉಪಾಧ್ಯಕ್ಷ), ಶರಣಗೌಡ ಮಾಲಿಪಾಟೀಲ್ (ಕುಷ್ಟಗಿ ತಾ.ಅಧ್ಯಕ್ಷ), ಹನುಮಂತಪ್ಪ ನಾಯಕ (ಕನಕಗಿರಿ ತಾ.ಅಧ್ಯಕ್ಷ), ಬಸವರಾಜ ನಾಯಕ (ಕಾರಟಗಿ ತಾ.ಅಧ್ಯಕ್ಷ), ವೆಂಕಟೇಶ ನಾಯಕ (ಗಂಗಾವತಿ ತಾ.ಅಧ್ಯಕ್ಷ)ರಾಗಿ ಆಯ್ಕೆಗೊಂಡಿದ್ದಾರೆ ಎಂದು ರಾಜ್ಯಾಧ್ಯಕ್ಷ ಮಹೇಶ ತಿಳಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts