More

    ಇನ್ಫೋಸಿಸ್​ ಸಿಇಒ, ಸಿಒಒ, ಅಧ್ಯಕ್ಷರ ಸಂಬಳಕ್ಕಿಲ್ಲ ಕರೊನಾ ಭೀತಿ…!

    ಬೆಂಗಳೂರು: ಕರೊನಾದಿಂದಾಗಿ ಇಡೀ ವಿಶ್ವವೇ ತತ್ತರಿಸಿದೆ. ದೇಶಾದ್ಯಂತ ಲಾಕ್​ಡೌನ್​ನಿಂದಾಗಿ ಆರ್ಥಿಕ ಚಟುವಟಿಕೆಗಳು ಕುಸಿದಿವೆ. ಸದ್ಯ ಲಾಕ್​ಡೌನ್​ ನಿರ್ಬಂಧಗಳು ತೆರವಾಗಿದ್ದರೂ, ಆರ್ಥಿಕ ಪರಿಸ್ಥಿತಿ ಸುಧಾರಿಸಲು ಇನ್ನು ಹಲವು ತಿಂಗಳುಗಳೇ ಬೇಕೆಂದು ತಜ್ಞರು ಲೆಕ್ಕಾಚಾರ ಹಾಕಿದ್ದಾರೆ. ಆದಾಯವೇ ಇಲ್ಲದ ಕಾರಣ ಹಲವು ಕಂಪನಿಗಳು ಉದ್ಯೋಗಿಗಳನ್ನು ವಜಾ ಮಾಡಿವೆ, ಸಂಬಳ ಕಡಿತ ಮಾಡಿವೆ, ಬಡ್ತಿಯನ್ನು ಮುಂದೂಡಿವೆ. ಆದರೆ, ಇನ್ಫೋಸಿಸ್​ ಮುನ್ನಡೆಸುತ್ತಿರುವವರಿಗೆ ಇದ್ಯಾವುದು ಪರಿಣಾಮ ಬೀರಿಲ್ಲ ಕಾಣುತ್ತದೆ.

    ಇನ್ಫೋಸಿಸ್​ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಸಲೀಲ್​ ಪಾರೇಖ್​ ಸಂಬಳ ಶೇ.27 ಏರಿಕೆ ಕಂಡಿದೆ. 2018-19ರಲ್ಲಿ 4.8 ಮಿಲಿಯನ್​ ಡಾಲರ್​ (ಅಂದಾಜು 36.25 ಕೋಟಿ ರೂ.) ಗಳಾಗಿದ್ದ ಅವರ ವೇತನ ಮೊತ್ತ 2019-20 ರಲ್ಲಿ 6.1 ಮಿಲಿಯನ್​ ಡಾಲರ್​ಗೆ (ಅಂದಾಜು 46.06 ಕೋಟಿ ರೂ.) ಏರಿಕೆಯಾಗಿದೆ. ಅಮೆರಿಕದ ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿಗೆ ನೀಡಿದ ವರದಿಯಲ್ಲಿ ಈ ಮಾಹಿತಿ ಇದೆ. ಇದರಲ್ಲಿ ಸಂಬಳ, ಬೋನಸ್​, ಕಂಪನಿಯ ಷೇರುಗಳು ಸೇರಿವೆ.

    ಇದನ್ನೂ ಓದಿ; ಮೊಬೈಲ್​ ಸಂಖ್ಯೆಗಿನ್ನು 11 ಅಂಕಿಗಳು, ಟ್ರಾಯ್​ ಶಿಫಾರಸು 

    ಮುಖ್ಯ ನಿರ್ವಹಣಾ ಅಧಿಕಾರಿ ಯು.ಬಿ. ಪ್ರವೀಣ್​ ರಾವ್​ ಸಂಬಳದಲ್ಲೂ ಶೇ.29 ಏರಿಕೆ ಕಂಡಿದ್ದು, 2.2 ಮಿಲಿಯನ್​ ಡಾಲರ್​ಗೆ (ಅಂದಾಜು 16.61 ಕೋಟಿ ರೂ.) ಹೆಚ್ಚಳವಾಗಿದೆ. ಇನ್ನಿಬ್ಬರು ಅಧ್ಯಕ್ಷರಾದ ರವಿಕುಮಾರ್​ ಹಾಗೂ ಮೋಹಿತ್​ ಜೋಶಿ ಸಂಬಳದಲ್ಲೂ ಕ್ರಮವಾಗಿ ಶೇ.25 ಹಾಗೂ ಶೇ.24.6 ಏರಿಕೆಯಾಗಿ 3 ಮಿಲಿಯನ್​ ಡಾಲರ್​ (ಅಂದಾಜು 22.65 ಕೋಟಿ ರೂ.) ಹಾಗೂ 3.2 ಮಿಲಿಯನ್ ಡಾಲರ್​ (24.16 ಕೋಟಿ ರೂ.)​ ಆಗಿದೆ.

    ಕಂಪನಿಯ ಚೇರ್​ಮನ್​ ನಂದನ್​ ನಿಲೇಕಣಿ ಯಾವುದೇ ಸಂಬಳವನ್ನು ಸ್ವೀಕರಿಸದಿರಲು ನಿರ್ಧರಿಸಿದ್ದಾರೆ. ಕರೊನಾದಿಂದಾಗಿ ಕಂಪನಿಯ ಆದಾಯ ಹಾಗೂ ಲಾಭಾಂಶದ ಮೇಲೆ ಪರಿಣಾಮ ಉಂಟಾಗಿದೆ. ಗ್ರಾಹಕ ಕಂಪನಿಗಳ ಆರ್ಥಿಕ ಸಂಕಷ್ಟ ಕೂಡ ಕಂಪನಿ ಮೇಲೆ ಪ್ರಭಾವ ಬೀರುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

    ಬಾಹ್ಯಾಕಾಶಯಾನಿಗಳನ್ನೂ ಬಿಡಲಿಲ್ಲ ಕರೊನಾ, ಕ್ವಾರಂಟೈನ್​ ಬಳಿಕವೇ ಆಗಸಕ್ಕೆ ಚಿಮ್ಮಿದ ಗಗನಯಾನಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts