More

    ಬೋಟ್‌ಗಳಿಗೆ ಸ್ಯಾಟಲೈಟ್ ಸಂವಹನ

    ಉಡುಪಿ: ಇಂಡಿಯನ್ ಫಿಶರ್ ಮೆನ್ ಫಾರ್ ಟೆಕ್ನಾಲಜಿ ಅಡಾಪ್ಶನ್(ಐಎಫ್‌ಟಿಎ) ಸಹಯೋಗದಲ್ಲಿ ಮೊಬೈಲ್ ಜತೆ ಸಂಪರ್ಕ ಸಾಧಿಸಬಲ್ಲ ಉಪಗ್ರಹ ಆಧಾರಿತ ನೇವಿಗೇಷನ್ ವ್ಯವಸ್ಥೆ ಮತ್ತು ಆಧುನಿಕ ಸಂಪರ್ಕ ತಂತ್ರಜ್ಞಾನಗಳನ್ನು ಬೋಟ್‌ಗಳಲ್ಲಿ ಅಳವಡಿಸಲು ಯೋಜನೆ ರೂಪಿಸುವಂತೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನುಗಾರರ ಫೆಡರೇಶನ್ ಅಧ್ಯಕ್ಷ ಗಣಪತಿ ಮಾಂಗ್ರೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಉಪಗ್ರಹ ಆಧಾರಿತ ನೇವಿಗೇಶನ್ ವ್ಯವಸ್ಥೆಯಿಂದ ಸಮಯಕ್ಕೆ ಸರಿಯಾಗಿ ಎಚ್ಚರಿಕೆ ಸಂದೇಶ ರವಾನೆ ಸಾಧ್ಯ. 100ರಿಂದ 150 ನಾಟಿಕಲ್ ಮೈಲಿ ದೂರದಲ್ಲಿದ್ದರೂ ಕೋಸ್ಟ್‌ಗಾರ್ಡ್ ಅಥವಾ ನೌಕಾಸೇನೆಯನ್ನು ಸಂಪರ್ಕಿಸಬಹುದು. ಸಮುದ್ರದಲ್ಲಿ ಉತ್ತಮ ಮೀನು ಸಿಗುವ ಮುನ್ಸೂಚನೆಗಳನ್ನೂ ಪಡೆಯಲು ಸಾಧ್ಯ ಎಂದರು.

    ಬೋಟ್ ಉಳಿಸಲು ಸ್ಟಗ್: ಮಲ್ಪೆ ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ ಮಾತನಾಡಿ, ಬೋಟ್‌ಗಳು ಮುಳುಗಿದಾಗ ರಕ್ಷಣಾ ಪಡೆಗಳು ಮೀನುಗಾರರನ್ನು ರಕ್ಷಿಸುತ್ತವೆ. ಆದರೆ 1ರಿಂದ 1.5 ಕೋಟಿ ಮೌಲ್ಯದ ಬೋಟ್‌ಗಳ ರಕ್ಷಣೆಗೆ ಯಾರೂ ಮುಂದಾಗುತ್ತಿಲ್ಲ. ಹೀಗಾಗಿ ಸ್ಟಗ್‌ಗಳನ್ನು ಮೀನುಗಾರಿಕಾ ಇಲಾಖೆ ಮೂಲಕ ದೊರಕಿಸಿಕೊಡಬೇಕು ಎಂದರು. ಉ.ಕ.ಪರ್ಸಿನ್ ಮೀನುಗಾರರ ಸಂಘದ ಸದಸ್ಯ ನಿತಿನ್ ರಮಾಕಾಂತ್ ಗಾಂವ್ಕರ್ ಮಾತನಾಡಿ, ಸುವರ್ಣ ತ್ರಿಭುಜ ಬೋಟ್ ಅವಘಡದಿಂದ ಮೀನುಗಾರರ ಪ್ರಾಣಹಾನಿ ಮರುಕಳಿಸಬಾರದು ಎಂದರು.

    ಸುವರ್ಣ ತ್ರಿಭುಜ ಬೋಟ್ ಮುಳುಗಿರುವುದನ್ನು ನೌಕಾದಳ ಪತ್ತೆ ಮಾಡಿದೆ. ಆದರೆ ಬೋಟ್ ಮೇಲಕ್ಕೆತ್ತಲು ಆಸಕ್ತಿ ವಹಿಸಿಲ್ಲ. ದೊಡ್ಡ ಬೋಟ್‌ಗಳು ಮುಳುಗಿದರೂ ಮೇಲಕ್ಕೆತ್ತುವ ತಂತ್ರಜ್ಞಾನ ಭಾರತದಲ್ಲಿದೆ. ಆದರೆ ಈ ಬೋಟ್‌ನೊಳಗೆ ಇರುವ ಶವಗಳನ್ನು ಹುಡುಕುವ ಪ್ರಯತ್ನ ಆಗಿಲ್ಲ. ಶವಗಳು ಇನ್ನೂ ಬೋಟ್‌ನೊಳಗೇ ಇದೆ ಎಂಬ ಅನುಮಾನ ಮೀನುಗಾರರಲ್ಲಿದೆ.
    ಗಣಪತಿ ಮಾಂಗ್ರೆ ಅಧ್ಯಕ್ಷ, ಉ.ಕ.ಜಿಲ್ಲಾ ಸಹಕಾರಿ ಮೀನುಗಾರರ ಫೆಡರೇಶನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts