More

    ತೆಲುಗು ನಿರ್ಮಾಪಕರ ಒಳಜಗಳ; ಹಬ್ಬಗಳಲ್ಲಿ ಟಾಲಿವುಡ್ ಚಿತ್ರಗಳ ಬಿಡುಗಡೆಗೆ ಆದ್ಯತೆ

    ಬೆಂಗಳೂರು: ತೆಲುಗು ಚಿತ್ರ ನಿರ್ವಪಕರ ಕೌನ್ಸಿಲ್​ನ ಸದಸ್ಯರು ಸಭೆ ನಡೆಸಿ ಒಂದು ನಿರ್ಣಯಕ್ಕೆ ಬಂದಿದ್ದಾರೆ. ಅದೇನೆಂದರೆ ತೆಲುಗು ಸಿನಿಮಾಗಳ ನಿರ್ಮಾಣ ವೆಚ್ಚ ಹೆಚ್ಚುತ್ತಿದ್ದು, ನಿರ್ವಪಕರ ಒಳಿತಿಗಾಗಿ ಮತ್ತು ಟಾಲಿವುಡ್ ರಕ್ಷಣೆಗಾಗಿ ಸಂಕ್ರಾಂತಿ ಮತ್ತು ದಸರಾ ಹಬ್ಬಗಳ ಸಮಯದಲ್ಲಿ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಕೇವಲ ತೆಲುಗು ಚಿತ್ರಗಳ ಬಿಡುಗಡೆಗೆ ಆದ್ಯತೆ ನೀಡಬೇಕು ಎಂದು ತೀರ್ವನಿಸಿದ್ದಾರೆ. ಇದೀಗ ತೆಲುಗು ನಿರ್ವಪಕರ ಒಳಜಗಳಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಟಾಲಿವುಡ್ ಮಾರ್ಕೆಟ್​ನತ್ತ ಗಮನ ಹರಿಸಿರುವ ಬೇರೆ ಚಿತ್ರರಂಗದವರಲ್ಲಿ ಆತಂಕ ಸೃಷ್ಟಿಸಿದೆ.

    ಈಗ ಈ ವಿಷಯ ಮುನ್ನೆಲೆಗೆ ಬರಲು ಕಾರಣವಿದೆ. 2023ರ ಜನವರಿ 12ರಂದು ಚಿರಂಜೀವಿ ನಟನೆಯ ‘ವಾಲ್ಟೇರ್ ವೀರಯ್ಯ’ ಮತ್ತು ಬಾಲಯ್ಯ ಅಭಿನಯದ ‘ವೀರಸಿಂಹ ರೆಡ್ಡಿ’ ಚಿತ್ರಗಳು ಬಿಡುಗಡೆ ಘೋಷಿಸಿವೆ. ಅದೇ ಸಮಯದಲ್ಲಿ ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ನಿರ್ವಪಕ, ವಿತರಕ ದಿಲ್ ರಾಜು ನಿರ್ವಣದ ತಮಿಳು ಚಿತ್ರ ‘ವಾರಿಸು’ ಸಹ ರಿಲೀಸ್ ಆಗಲಿದೆ. ವಿಜಯ್, ರಶ್ಮಿಕಾ ಮಂದಣ್ಣ ನಟಿಸಿರುವ ‘ವಾರಿಸು’ ತೆಲುಗಿನಲ್ಲಿ ಡಬ್​ಆಗಿ ಬಿಡುಗಡೆಯಾಗಲಿದ್ದು, ಇದು ಬೇರೆ ತೆಲುಗು ಚಿತ್ರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. 2019ರಲ್ಲಿ, ಹಬ್ಬಗಳ ಸಮಯದಲ್ಲಿ ತೆಲುಗು ಸಿನಿಮಾಗಳ ಬಿಡುಗಡೆಗೆ ಆದ್ಯತೆ ನೀಡಬೇಕು ಎಂದಿದ್ದ ದಿಲ್ ರಾಜು ಈಗ ತಾವೇ ತಮಿಳು ಡಬ್ ಸಿನಿಮಾ ರಿಲೀಸ್ ಮಾಡಲು ಮುಂದಾಗಿರುವುದು ತೆಲುಗು ನಿರ್ವಪಕರ ಅಸಮಾಧಾನಕ್ಕೆ ಕಾರಣವಾಗಿದೆ.

    ಮತ್ತೊಂದೆಡೆ ‘ಕೆಜಿಎಫ್ 2’, ‘ಕಾಂತಾರ’ದಂತಹ ಕನ್ನಡ ಚಿತ್ರಗಳು ಸಹ ತೆಲುಗು ಭಾಷೆಗಳಲ್ಲಿ ಡಬ್ ಆಗಿ ಬಾಕ್ಸಾಫೀಸ್ ಲೂಟಿ ಮಾಡಿವೆ. ಹೀಗಾಗಿ ಪರಭಾಷೆಗಳಿಂದ ತೆಲುಗಿಗೆ ಡಬ್ ಆಗುವ ಚಿತ್ರಗಳಿಗೆ ಕಡಿವಾಣ ಹಾಕಲು ತೆಲುಗು ನಿರ್ವಪಕರು ಮುಂದಾಗಿದ್ದಾರೆ. ಮತ್ತೊಂದೆಡೆ ಟಾಲಿವುಡ್​ನಲ್ಲಿ ಆಗುತ್ತಿರುವ ಈ ಬೆಳವಣಿಗೆಗಳನ್ನು ನೋಡಿ, ಕನ್ನಡ ಪ್ರೇಕ್ಷಕರು ಸಹ ಆನ್​ಲೈನ್ ಹೋರಾಟಕ್ಕೆ ಮುಂದಾಗಿದ್ದಾರೆ. ಕನ್ನಡ ನಿರ್ವಪಕರು, ವಾಣಿಜ್ಯ ಮಂಡಳಿ ಸಹ ಹಬ್ಬಗಳ ಸಮಯದಲ್ಲಿ ಕನ್ನಡ ಸಿನಿಮಾಗಳಿಗೆ ಆದ್ಯತೆ ನೀಡುವ ಬಗ್ಗೆ ನಿರ್ಧಾರ ಮಾಡಬೇಕೆಂದು ಒತ್ತಡ ಹೇರುತ್ತಿದ್ದಾರೆ.

    ಒಂದೂವರೆ ವರ್ಷದ ಮಗನನ್ನೇ ಮಾರಿದ ತಾಯಿ; ನಾಲ್ಕೂವರೆ ವರ್ಷ ಹುಡುಕಾಡಿ ಪುತ್ರನನ್ನು ಪತ್ತೆ ಮಾಡಿ ಪಡೆದ ತಂದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts