More

    ಫುಟ್​ಬಾಲರ್​ ಆಗುವ ಕನಸನ್ನೇ ಕಸಿದ ಸೊಳ್ಳೆ ಕಡಿತ: ಊದಿದ ಕಾಲು, ಭಯಾನಕ ರೋಗಕ್ಕಿಲ್ಲ ಮದ್ದು..!

    ನೋಮ್ ಪೆನ್(ಕಾಂಬೋಡಿಯಾ): ಎರಡು ದಶಕಗಳ ಹಿಂದೆ ಕಚ್ಚಿದ ಸೋಂಕುಳ್ಳ ಸೊಳ್ಳೆಯಿಂದಾಗಿ ಕಾಂಬೋಡಿಯಾ ಮೂಲದ ವ್ಯಕ್ತಿಯೊಬ್ಬನ ಕಾಲು ಸಾಮಾನ್ಯ ಗಾತ್ರಕ್ಕಿಂತ ಐದು ಪಟ್ಟು ಹೆಚ್ಚು ಊದಿಕೊಂಡಿದ್ದು, ನಡೆದಾಡಲು ಪರದಾಟ ನಡೆಸುವಂತಾಗಿದೆ. ಅಲ್ಲದೆ, ಇದೊಂದು ಗುಣಪಡಿಸಲಾಗದ ಪರವಾಲಂಬಿ ರೋಗವಾಗಿದೆ.

    ಬೋಂಗ್​ ಥೆಟ್​ (27) ಸಂತ್ರಸ್ತ ಯುವಕ. ಈತ ಛನಾಂಗ್​ ಪ್ರಾಂತ್ಯದ ಕಂಪೊಂಗ್​ ಏರಿಯಾ ನಿವಾಸಿಯಾಗಿದ್ದು, ತನ್ನ ಮನೆಯಲ್ಲೇ ಓಡಾಡಬೇಕೆಂದರೂ ನೋವು ತುಂಬಿದ ಕಾಲುಗಳನ್ನು ಎಳೆದುಕೊಂಡು ತಿರುಗಾಡಬೇಕಿದೆ. ತಾನೋರ್ವ ಫುಟ್​ಬಾಲ್​ ಆಟಗಾರನಾಗಬೇಕೆಂಬ ಬೋಂಗ್​ ಕನಸಿಗೆ ಅನಿರೀಕ್ಷಿತ ಕಾಯಿಲೆ ತಣ್ಣೀರೆರಚಿದೆ.

    6 ವರ್ಷದವನಿದ್ದಾಗ ಕಾಲಿನ ಮೇಲೆ ಆದ ಸಣ್ಣ ಗಾಯದಿಂದ ಆರಂಭವಾದ ಗಡ್ಡೆ ಬೋಂಗ್​ 12 ವರ್ಷ ಪೂರೈಸುವಷ್ಟರಲ್ಲಿ ಇಡೀ ಕಾಲನ್ನೇ ಆವರಿಸಿಕೊಂಡಿದೆ. ಮೊದಲೇ ಕುಟುಂಬದವರು ಎಚ್ಚೆತ್ತುಕೊಂಡಿದ್ದರೆ, ಬೋಂಗ್​ ಬಹುಶಃ ಗುಣಮುಖನಾಗಿರುತ್ತಿದ್ದ. ಆದರೆ, ಹೊರಭಾಗದಲ್ಲಿ ಆಟವಾಡುವಾಗ ಆಗಿರುವ ತರಚು ಗಾಯವೆಂದು ಕುಟುಂಬ ನಿರ್ಲಕ್ಷಿಸಿತ್ತು. ಆದರೆ, ಇಂದು ಅದೇ ನಿರ್ಲಕ್ಷ್ಯ ಬೋಂಗ್​ ಜೀವನದ ಉತ್ಸಾಹವನ್ನೇ ಕಸಿದುಕೊಂಡಿದೆ.

    ಇದನ್ನೂ ಓದಿ: ಇಬ್ಬರು ಖದೀಮರು ಕದ್ದಿದ್ದು ಒಂದಲ್ಲ, ಎರಡಲ್ಲ ಬರೋಬ್ಬರಿ 108 ಬೈಕ್: ಪೊಲೀಸರ ಕೈಗೆ ಸಿಕ್ಕಿದ್ದೇ ರೋಚಕ..!

    ಇನ್ನು ಮನೆಯ ಸಮೀಪದ ಕಾರ್ಖಾನೆಯಲ್ಲಿ ಬೋಂಗ್​ ಕುಟುಂಬ ಕೆಲಸ ಮಾಡುತ್ತದೆ. ಬಡತನ ತಾಂಡವಾಡುತ್ತಿರುವ ದೇಶದಲ್ಲಿ ಚಿಕಿತ್ಸೆಗೆ ಬೇಕಾದಷ್ಟು ಹಣ ಒದಗಿಸಲು ಬೋಂಗ್​ ಕುಟುಂಬಕ್ಕೆ ಸಾಧ್ಯವಾಗಲಿಲ್ಲ. ಹೀಗಾಗಿ ವರ್ಷದಿಂದ ವರ್ಷಕ್ಕೆ ಆತನ ಕಾಲಿನ ಸ್ಥಿತಿ ಬಿಗಡಾಯಿತ್ತಾ ಹೋಯಿತು. ಆಸ್ಪತ್ರೆಯೊಂದನ್ನು ಬಿಟ್ಟು ಬೇರೆ ಎಲ್ಲ ಮಾರ್ಗಗಳನ್ನು ಕಳೆದ ಎರಡು ದಶಕಗಳಿಂದ ಬೋಂಗ್​ ಪ್ರಯತ್ನಿಸಿದ್ದಾರೆ. ಈತನ ನೋವಿನ ಕತೆ ಕೇಳಿ ಸ್ವಯಂ ಸೇವಕರು ಚಿಕಿತ್ಸೆ ಕೊಡಿಸಲು ಮುಂದೆ ಬಂದಿದ್ದಾರೆ.

    ಕಾಂಬೋಡಿಯಾದ ಉದ್ಯಮಿ ಮಹಿಳೆ ದನಾ ಟ್ರೈ ಎಂಬುವರು 10,000,000 ಕಾಂಬೋಡಿಯಾ ರಿಯಲ್ (ಭಾರತೀಯ ಕರೆನ್ಸಿ 1,80,120 ರೂ.) ನೀಡಿದ್ದಾರೆ. ಇದೀಗ ಮೊದಲ ಬಾರಿಗೆ ಬೋಂಗ್​ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ರಕ್ತ ಪರೀಕ್ಷೆ ನಡೆಸಿದ ವೈದ್ಯರು ಇದೊಂದು ಲೈಂಫಟಿಕ್ ಫೈಲೇರಿಯಾಸಿಸ್ ಪರವಾಲಂಬಿ ರೋಗ ಎಂದು ಪತ್ತೆಹಚ್ಚಿದ್ದಾರೆ. ಸೋಂಕುಳ್ಳ ಸೊಳ್ಳೆಯ ಕಡಿತದಿಂದಾಗಿ ಇದು ಸಂಭವಿಸಿದೆ ಎಂದು ಹೇಳಿದ್ದಾರೆ. ಈ ರೋಗವನ್ನು ಗುಣಪಡಿಸಲು ಈವರೆಗೂ ಯಾವುದೇ ಔಷಧ ಇಲ್ಲ ಮತ್ತು ಇದು ಗುಣಪಡಿಸಲಾಗದ ಕಾಯಿಲೆ ಎಂದು ತಿಳಿಸಿದ್ದಾರೆ. ಇದನ್ನು ತಿಳಿದ ಬೋಂಗ್​ ಹೃದಯ ಒಂದು ಕ್ಷಣ ಕಂಪಿಸಿತು. ಆದರೂ ನೆರವಿಗೆ ಬಂದ ಜನರಿಗೆ ಬೋಂಗ್​ ಧನ್ಯವಾದ ಹೇಳಿದ್ದಾರೆ.

    ನನ್ನ ಬಗ್ಗೆ ಕಾಳಜಿ ವಹಿಸುವ ವ್ಯಕ್ತಿಗಳಿದ್ದಾರೆ ಎಂದು ತಿಳಿದು ನನಗೆ ಸಂತೋಷವಾಯಿತು. ನನ್ನು ಚಿಕಿತ್ಸೆ ಮತ್ತು ಊಟಕ್ಕಾಗಿ ನೆರವು ಮಾಡಿದವರಿಗೆ ಕತಜ್ಞನಾಗಿದ್ದೇನೆಂದು ಬೋಂಗ್​ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಚಿಕಿತ್ಸೆ ತೆಗೆದುಕೊಳ್ಳುವುದನ್ನು ಮುಂದುವರಿಸುತ್ತೇನೆ. ಅದರಿಂದಾದರೂ ಸ್ವಲ್ಪಮಟ್ಟಿಗೆ ನನಗೆ ನೆಮ್ಮದಿ ಸಿಗುವಂತಾಗಲಿ ಎಂದಿದ್ದಾರೆ. (ಏಜೆನ್ಸೀಸ್​)

    10 ತಿಂಗಳ ಹೆಣ್ಣು ಮಗು ರೇಪ್​ ಮಾಡಿ, ಗೂಗಲ್ ಹುಡುಕಾಡಿದ ಪಾಪಿ ತಂದೆ: ಮೊಬೈಲ್​ನಲ್ಲಿತ್ತು ಭಯಾನಕ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts