ಹುಬ್ಬಳ್ಳಿ : ಹುಬ್ಬಳ್ಳಿ-ಶಿರಡಿ ನೇರ ರೈಲು, ಹುಬ್ಬಳ್ಳಿ-ಅಹ್ಮದಾಬಾದ-ಜೋಧಪುರ, ಹುಬ್ಬಳ್ಳಿ-ಅಹಮದಾಬಾದ-ಜಲೋರಕ್ಕೆ ರೈಲು ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಮಹೇಂದ್ರ ಸಿಂಘಿ ನೇತೃತ್ವದ ನಿಯೋಗ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಅವರಿಗೆ ಶನಿವಾರ ಮನವಿ ಸಲ್ಲಿಸಿತು.
ಹುಬ್ಬಳ್ಳಿಯಿಂದ ಮನಮಾಡ ವಾಯಾ ಬೆಳಗಾವಿ, ಪುಣೆ, ಕೊಪರಗಾಂವ (ಶಿರಡಿ), ಮನಮಾಡ ಗೆ ಹೊಸ ರೈಲು ಸಂಚಾರ ಪ್ರಾರಂಭ, ಹುಬ್ಬಳ್ಳಿ- ಅಹಮದಾಬಾದ ಸಾಪ್ತಾಹಿಕ ವಿಶೇಷ ರೈಲನ್ನು ಒಂದು ತಿಂಗಳ ಅವಧಿವರೆಗೆ ಮರು ಪರಿಚಯಿಸಿದ್ದು ಸ್ವಾಗತಾರ್ಹ. ಈ ರೈಲು ಸಂಚಾರವನ್ನು ಜುಲೈವರೆಗೆ ವಿಸ್ತರಿಸಬೇಕು ಮತ್ತು ಶಾಶ್ವತವಾಗಿ ವಾರದಲ್ಲಿ 4 ದಿನ ಬೆಳಗಾವಿ – ಮಿರಜ ಮೂಲಕ ಮತ್ತು ವಾರದಲ್ಲಿ 3 ದಿನ ಗದಗ-ಬಾಗಲಕೋಟೆ-ವಿಜಯಪುರ ಮೂಲಕ ಚಲಿಸುವಂತೆ ಮಾಡಲು ನಿಯೋಗ ಆಗ್ರಹಿಸಿತು.
ಹುಬ್ಬಳ್ಳಿ-ಅಹ್ಮದಾಬಾದ-ಜಲೋರರೈಲಿನ ಆವರ್ತನೆಯನ್ನು ವಾರಕ್ಕೆ 3 ದಿನಗಳವರೆಗೆ ಹೆಚ್ಚಿಸಲು ಮತ್ತು ಅದನ್ನು ಶಾಶ್ವತವಾಗಿಸಲು ಕೋರಲಾಯಿತು.
ಹುಬ್ಬಳ್ಳಿ, ಬೆಂಗಳೂರು ಮತ್ತು ಇನ್ನು ಕೆಲ ರೈಲು ನಿಲ್ದಾಣಗಳಲ್ಲಿ ಎಸ್ಕಲೇಟರಗಳ ಕಾರ್ಯವು ಸ್ಥಗಿತ ಗೊಂಡಿದೆ. ಇದರಿಂದ ಪ್ರಯಾಣಿಕರಿಗೆ ರೈಲು ನಿಲ್ದಾಣದಲ್ಲಿ ಸರಾಗವಾಗಿ, ಶೀಘ್ರವಾಗಿ ಚಲಿಸಲು ಅನಾನೂಕೂಲವಾಗಿದೆ. ಇವುಗಳನ್ನು ಸರಿಪಡಿಸಲು ನಿಯೋಗದಲ್ಲಿದ್ದ ಪ್ರಮುಖರು ಒತ್ತಾಯಿಸಿದರು.
ಪ್ಲಾಟಪಾಮರ್್ಗಳಲ್ಲಿರುವ ಪ್ರದರ್ಶನ ಫಲಕದಲ್ಲಿ ರೈಲು ಅಗಮಿಸುವ ಕೊನೆ ಗಳಿಗೆಯಲ್ಲಿ ರೈಲು ಯಾವ ಸಂಖ್ಯೆಯ ಪ್ಲಾಟಪಾಮರ್್ಗೆ ಆಗಮಿಸುತ್ತಿದೆ ಎಂದು ಪ್ರದರ್ಶಿಸುತ್ತಾರೆ. ಇದರಿಂದ ಕೊನೆಗಳಿಗೆಯಲ್ಲಿ ಪ್ರಯಾಣಿಕರು ತಮ್ಮ ಮಕ್ಕಳು, ಚೀಲಗಳನ್ನು ಹೊತ್ತುಕೊಂಡು ರೈಲು ತಲುಪಲು ಪರದಾಡಬೇಕಾಗುತ್ತದೆ. ಕಾರಣ ರೈಲು ಆಗಮಿಸುವ 15 ನಿಮಿಷಗಳ ಮೊದಲು ಪ್ಲಾಟಪಾಮರ್್ನ ಸಂಖ್ಯೆಯನ್ನು ಪ್ರದರ್ಶಿಸಬೇಕು ಹಾಗೂ ಪ್ರಮುಖ ರೈಲುಗಳನ್ನು ಪ್ಲಾಟಪಾಮ್ರ್ ನಂ. 1 ರಿಂದ ಹೋರಡಿಸಲು ವಿನಂತಿಸಿದರು
ಸಮಿತಿ ಮಾಜಿ ಸದಸ್ಯರಾದ ಗೌತಮ ಗುಲೇಚಾ, ಪ್ರಕಾಶ ಕಟಾರಿಯಾ, ಶ್ರೀ ವರ್ಧಮಾನ ಸ್ಥಾನಕವಾಸಿ ಜೈನ ಶ್ರಾವಕ ಸಂಘದ ಕೋಶಾಧ್ತಜ್ಷ ಕಾಂತಿಲಾಲ ಬೊಹರಾ, ಪ್ರವಾಸಿ ಯಾತ್ರಿ ಸಂಘದ ಕಾರ್ಯದರ್ಶಿ ಸುಭಾಷ ಡಂಕ ಹಾಗೂ ಇತರರು ನಿಯೋಗದಲ್ಲಿ ಇದ್ದರು.