More

    ಕಾರ್ಮಿಕರನ್ನು ಬೆಂಗಳೂರಿಗೆ ಕರೆತರಲು ಜಿಲ್ಲೆಗಳಿಂದ ಹೊರಡುತ್ತಿವೆ ವಿಶೇಷ ಬಸ್​ಗಳು

    ಬೆಂಗಳೂರು: ಲಾಕ್​ಡೌನ್​ ಅವಧಿಯಲ್ಲೂ ವಿವಿಧ ಕೈಗಾರಿಕೆಗಳ ಪುನರಾರಂಭಕ್ಕೆ ಸರ್ಕಾರ ಹಲವು ವಿನಾಯ್ತಿಗಳನ್ನು ನೀಡಿದೆ. ಕಡಿಮೆ ಸಿಬ್ಬಂದಿಯೊಂದಿಗೆ ವ್ಯಕ್ತಿಗತ ಅಂತರವನ್ನು ಕಾಯ್ದುಕೊಂಡು ಕಾರ್ಯಾಂಭಿಸಲು ಈಗಾಗಲೇ ಅನುಮತಿ ನೀಡಲಾಗಿದೆ.

    ಕೈಗಾರಿಕಾ ಸಂಸ್ಥೆಗಳು ಇದಕ್ಕೇನೋ ಸಜ್ಜಾಗಿವೆ. ಆದರೆ, ಅವರಿಗೆ ಕಾರ್ಮಿಕರೇ ಸಿಗುತ್ತಿಲ್ಲ. ಈಗಾಗಲೇ ಬಹುತೇಕರು ತಮ್ಮೂರುಗಳಿಗೆ ತೆರಳಿದ್ದಾರೆ. ಉದ್ಯೋಗಕ್ಕೆ ಮರಳಲು ಅವರಿಗೂ ಆಸೆಯಿದೆ. ಆದರೆ, ದೂರದ ಊರುಗಳಿಂದ ಬರಲು ಸಾರಿಗೆ ವ್ಯವಸ್ಥೆಯೇ ಇಲ್ಲದಂತಾಗಿದೆ. ಹೀಗಾಗಿ ಕೈಗಾರಿಕೆಗಳನ್ನು ಆರಂಭಿಸಲು ಸಾಧ್ಯವಾಗುತ್ತಿಲ್ಲ.

    ಬೆಂಗಳೂರಿನ ಕೈಗಾರಿಕೆ ಸಂಘಟನೆಗಳು ವಿವಿಧ ಜಿಲ್ಲೆಗಳಲ್ಲಿಂದ ಕಾರ್ಮಿಕರನ್ನು ಕರೆತರಲು ವಿಶೇಷ ಬಸ್​ಗಳನ್ನು ವ್ಯವಸ್ಥೆ ಮಾಡುತ್ತಿವೆ. ಕುಶಲ ಕಾರ್ಮಿಕರಿಲ್ಲದೇ, ಕಾರ್ಖಾನೆಗಳನ್ನು ಆರಂಭಿಸುವುದು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅವರಿರುವ ಜಿಲ್ಲೆಗಳಿಂದ ವಿಶೇಷ ಬಸ್​ಗಳಲ್ಲಿ ಕರೆತರಲು ಯೋಜನೆ ರೂಪಿಸಿವೆ.

    ಇದನ್ನೂ ಓದಿ; ಮತ್ತೆ 556 ಎಸ್​ಐ​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಪೊಲೀಸ್​ ಇಲಾಖೆ

    ಅಂದಾಜು 20,000ಕ್ಕೂ ಅಧಿಕ ಕಾರ್ಮಿಕರನ್ನು ರಾಜಧಾನಿಗೆ ಕರೆತರಲಾಗುತ್ತಿದೆ. ಇದಕ್ಕಾಗಿ ಆಯಾ ಜಿಲ್ಲಾ ಕೈಗಾರಿಕಾ ಕೇಂದ್ರಗಳ ಜಂಟಿ ನಿರ್ದೇಶಕರು ಜಿಲ್ಲಾಡಳಿತಗಳ ಸಹಕಾರದೊಂದಿಗೆ ಕಾರ್ಮಿಕರಿಗೆ ವಿಶೇಷ ಬಸ್​ಗಳ ಸಂಚಾರಕ್ಕೆ ಅಗತ್ಯ ಅನುಮತಿ ಕೊಡಿಸಲಿದ್ದಾರೆ ಎಂದು ಕೈಗಾರಿಕೆ ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್​ ಗುಪ್ತಾ ಹೇಳಿದ್ದಾರೆ.
    ಕೈಗಾರಿಕೆಗಳು ಖಾಸಗಿ ಅಥವಾ ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಕಾರ್ಮಿಕರನ್ನು ಕರೆತರಬಹುದು. ಇದಕ್ಕಾಗಿ ಏಕಗವಾಕ್ಷಿ ಪದ್ಧತಿಯ ಮೂಲಕ ಅನುಮತಿ ನೀಡಲಾಗುತ್ತದೆ.

    ರಾಜ್ಯದ ನಾಡಕಚೇರಿಗಳಿಗೆ ಬೇಕಾಗಿದ್ದಾರೆ ಡೇಟಾ ಎಂಟ್ರಿ ಆಪರೇಟರ್ಸ್, ಜಿಲ್ಲಾಧಿಕಾರಿಗಳ ಹಂತದಲ್ಲಿಯೇ ನಡೆಯಲಿದೆ ನೇಮಕಾತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts