More

    ಇಂದೋರ್​ನಲ್ಲಿ 25ಕ್ಕೂ ಹೆಚ್ಚು ಜನ ದೇವಸ್ಥಾನದ ಬಳಿ ಬಾವಿಗೆ ಬಿದ್ದ ಪ್ರಕರಣ; 8 ಜನ ಮೃತ…

    ಇಂದೋರ್: ಇಂದು ಬೆಳಿಗ್ಗೆ ಇಂದೋರ್ ದೇವಸ್ಥಾನದಲ್ಲಿ 30 ಕ್ಕೂ ಹೆಚ್ಚು ಜನರು ಮೆಟ್ಟಿಲು ಬಾವಿಗೆ ಬಿದ್ದಿದ್ದರು. ಈ ಪ್ರಕರಣದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದು ಅವರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ. ರಾಮನವಮಿ ಸಂದರ್ಭದಲ್ಲಿ ಭಾರೀ ಜನಸಂದಣಿಯಿಂದಾಗಿ ದೇಗುಲದ ಬಾವಿಯ ಮೇಲ್ಛಾವಣಿ ಕುಸಿದಿದೆ.

    ಸದ್ಯ ಹದಿನೇಳು ಜನರನ್ನು ರಕ್ಷಿಸಲಾಗಿದ್ದು, ಬೆಳೇಶ್ವರ ಮಹಾದೇವ ದೇವಸ್ಥಾನದಲ್ಲಿ ರಕ್ಷಣಾ ಕಾರ್ಯ ಮುಂದುವರಿದಿದೆ. ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾವುಗಳನ್ನು ಇಂದೋರ್ ಪೊಲೀಸ್ ಮುಖ್ಯಸ್ಥ ಮಕರಂದ್ ದೇವುಸ್ಕರ್ ಖಚಿತಪಡಿಸಿದ್ದಾರೆ.

    ಇದನ್ನೂ ಓದಿ: ರಾಮನವಮಿ ದಿನ ನಡೆಯಿತು ಘೋರ ದುರಂತ; ಇಂದೋರ್​ನಲ್ಲಿ ಬಾವಿಗೆ ಬಿದ್ದ 25ಕ್ಕೂ ಹೆಚ್ಚು ಜನ!

    ರಾಮನವಮಿಯಂದು ಭಕ್ತರ ನೂಕುನುಗ್ಗಲು ನಡುವೆಯೇ ಬೆಳೇಶ್ವರ ಮಹಾದೇವ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಭಾರೀ ಜನಸಂದಣಿಯಿಂದಾಗಿ ದೇವಾಲಯದ ನೆಲವು ಕುಸಿದಿದ್ದು ಜನರು ಬಾವಿಗೆ ಬಿದ್ದಿದ್ದಾರೆ ಎನ್ನಲಾಗಿದೆ.

    ಬಾವಿಯಲ್ಲಿ ಉಳಿದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. “ಇದು ದುರದೃಷ್ಟಕರ ಘಟನೆಯಾಗಿದೆ. ಆದರೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ” ಎಂದು ಅವರು ಹೇಳಿದರು.

    ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. “ಇಂದೋರ್‌ನಲ್ಲಿ ಸಂಭವಿಸಿದ ದುರ್ಘಟನೆಯಿಂದ ತೀವ್ರ ನೋವಾಗಿದೆ. ಸಿಎಂ ಚೌಹಾಣ್ ಶಿವರಾಜ್ ಜಿ ಅವರೊಂದಿಗೆ ಮಾತನಾಡಿ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. ರಾಜ್ಯ ಸರ್ಕಾರವು ತ್ವರಿತ ಗತಿಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಮುನ್ನಡೆಸುತ್ತಿದೆ. ಎಲ್ಲಾ ಸಂತ್ರಸ್ತರು ಮತ್ತು ಅವರ ಕುಟುಂಬಗಳೊಂದಿಗೆ ನನ್ನ ಪ್ರಾರ್ಥನೆಗಳಿವೆ” ಎಂದು ಅವರು ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts