More

    ಶ್ವಾನ ಪ್ರಿಯರಿಗೆ ಸಿಹಿ ಸುದ್ದಿ; ನಾಯಿಗಳ ಬರ್ತ​ಡೇ ಸೆಲೆಬ್ರೇಟ್​​​​ ಮಾಡಲು ಶುರುವಾಯ್ತು ಡಾಬಾ!

    ಮಧ್ಯಪ್ರದೇಶ: ಶ್ವಾನಗಳನ್ನು ಪ್ರೀತಿಯಿಂದ ಮಕ್ಕಳಂತೆ ಸಾಕುವವರು ಇದ್ದಾರೆ. ಕುಟುಂಬಸ್ಥರಲ್ಲಿ ಒಬ್ಬರನ್ನಾಗಿ ನೋಡಿಕೊಳ್ಳುತ್ತಾ ಅವುಗಳ ಆಹಾರದ ಬಗ್ಗೆ ಹೆಚ್ಚು ಕಾಳಜಿ ಹೊಂದಿರ್ತಾರೆ. ಶ್ವಾನ ಪ್ರೀಯರಿಗೆ ಇಲ್ಲೋಂದು ಕಡೆ ವಿಶೇಷವಾಗಿ ಶ್ವಾನಗಳಿಗಾಗಿಯೇ ಡಾಬಾವೊಂದು ಪ್ರಾರಂಭವಾಗಿದೆ.

    ಸಾಕು ನಾಯಿಗಳಿಗೆ ನೀಡುವ ಆಹಾರವನ್ನು ಅತಿ ಕಡಿಮೆ ಬೆಲೆಗೆ ಮಾರಾಟ ಮಾಡುವ ಅಂಗಡಿ ಮಧ್ಯಪ್ರದೇಶದಲ್ಲಿ ಆರಂಭವಾಗಿದೆ. ಅದುವೇ ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ‘ಡಾಗಿ ಡಾಬಾ’. ಶ್ವಾನಪ್ರಿಯರಾದ ಬಾಲರಾಜ್ ಝಾಲಾ ಮತ್ತು ಅವರ ಪತ್ನಿ ಈ ಡಾಬಾವನ್ನ ಸ್ಥಾಪಿಸಿದ್ದಾರೆ.

    ಇದನ್ನೂ ಓದಿ: ಪುಲ್ವಾಮಾದಲ್ಲಿ ಎನ್‌ಕೌಂಟರ್ : ಓರ್ವ ಭಯೋತ್ಪಾದಕನನ್ನು ಹೊಡೆದುರುಳಿಸಿದ ಭಾರತೀಯ ಸೇನೆ

    ಡಾಗಿ ಡಾಬಾ ವಿಶೇಷತೆ: ಈ ಡಾಬಾದಲ್ಲಿ ನಾಯಿಗಳಿಗೆ ನೀಡುವ ಆಹಾರ ಪದಾರ್ಥಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ. ಸಸ್ಯಾಹಾರಿ ಮತ್ತು ಮಾಂಸಾಹಾರಿ ವಿಶೇಷತೆಗಳನ್ನೊಳಗೊಂಡಂತೆ ಅತಿ ಕಡಿಮೆ ಬೆಲೆ 7 ರೂಪಾಯಿಯಿಂದ ಹಿಡಿದು 500 ರೂ. ವರೆಗಿನ ಬೆಲೆಯಲ್ಲಿ ಡಾಬಾದಲ್ಲಿ ವಿವಿಧ ನಾಯಿ ಆಹಾರವನ್ನು ಒದಗಿಸಲಾಗುತ್ತದೆ. ಡಾಬಾದಲ್ಲಿ ನಾಯಿಗಳಿಗೆ ಆಹಾರ, ವಸತಿ ಮತ್ತು ಹುಟ್ಟುಹಬ್ಬದ ಆಚರಣೆಯ ಆಯ್ಕೆಗಳನ್ನು ನೀಡುತ್ತದೆ. ನಾಯಿಗಳ ಜನ್ಮದಿನ ಆಚರಣೆಗಾಗಿ ವೈಯಕ್ತಿಕ ವಿಶೇಷ ಕೇಕ್ ಗಳನ್ನೂ ಸಹ ತಯಾರಿಸಲಾಗುತ್ತದೆ.

    ಇದನ್ನೂ ಓದಿ: ಬೆಂಗಳೂರಿನಲ್ಲಿ ಬಾಡಿಗೆ ಮನೆಗಾಗಿ ಕಿಡ್ನಿ ಮಾರಾಟಕ್ಕಿಟ್ಟ ವ್ಯಕ್ತಿ!; ಟ್ವೀಟ್​​ ಪೋಸ್ಟ್​​ ವೈರಲ್​​

    ಶ್ವಾನ ಪ್ರೇಮಿ ಮತ್ತು ಡಾಬಾದ ಸಂಸ್ಥಾಪಕ ಝಾಲಾ ಮಾತನಾಡಿ, ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ನಾಯಿಗಳಿಗೆ ಆಹಾರ ಸಮಸ್ಯೆಯಾಗಿತ್ತು. ಹೀಗಾಗಿ ನಾವು ಡಾಬಾವನ್ನು ತೆರೆಯುವ ಯೋಚನೆ ಮಾಡಿದೆವು. ಆನ್‌ಲೈನ್‌ನಲ್ಲಿ ಶ್ವಾನಗಳ ಆಹಾರ ವಿತರಿಸಲು ಡೆಲಿವರಿ ಬಾಯ್‌ಗಳನ್ನು ಇರಿಸಲಾಗಿದೆ ಎಂದು ಹೇಳಿದ್ದಾರೆ.

    ಅಬಕಾರಿ ನೀತಿ ಪ್ರಕರಣ; CBI ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಸಿಸೋಡಿಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts