More

    ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಪ್ರಸ್ತಾವನೆ

    ಬೆಳಗಾವಿ: ಮುಂದಿನ ದಿನಗಳಲ್ಲಿ ಬೆಳಗಾವಿ ನಗರ ಕ್ರೀಡಾಲೋಕದಲ್ಲಿಯೂ ರಾಷ್ಟ್ರಮಟ್ಟದಲ್ಲಿ ಎಲ್ಲರ ಗಮನ ಸೆಳೆಯುವ ಕಾಲ ಕೂಡಿ ಬಂದಿದ್ದು, ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ‘ಸ್ಪೋರ್ಟ್ಸ್ ಇಂಡೋರ್ ಸ್ಟೇಡಿಯಂ’ ನಿರ್ಮಿಸಲು ಶಾಸಕ ಅಭಯ ಪಾಟೀಲ ಪ್ರಸ್ತಾವನೆ ಸಿದ್ಧಪಡಿಸಿದ್ದಾರೆ.

    ನಗರ ಪಕ್ಕದ ಯಳ್ಳೂರು ಗ್ರಾಮ ವ್ಯಾಪ್ತಿಯ 40 ಎಕರೆ ಸರ್ಕಾರಿ ಜಾಗದಲ್ಲಿ ಮಹಾರಾಷ್ಟ್ರದ ಬಾಲೆ ವಾಡಿಯಲ್ಲಿರುವ ಅಂತಾರಾಷ್ಟ್ರೀಯ ಒಳಾಂಗಣ ಕ್ರೀಡಾಂಗಣ ಮಾದರಿಯಲ್ಲಿ ನಿರ್ಮಿಸುವ ಸಂಕಲ್ಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಅಭಯ ಪಾಟೀಲ ಅವರು, ಕ್ರೀಡಾ ಇಲಾಖೆಯ ಆಯುಕ್ತ ಶ್ರೀನಿವಾಸ ಅವರೊಂದಿಗೆ ಯಳ್ಳೂರು ಗ್ರಾಮದಲ್ಲಿರುವ ಸರ್ಕಾರಿ ಜಾಗವನ್ನು ಸೋಮವಾರ ಪರಿಶೀಲಿಸಿದರು.

    ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಬೆಳಗಾವಿ ನಗರ ಫೌಂಡ್ರಿ ಉದ್ಯಮ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಕ್ರೀಡಾ ರಂಗದಲ್ಲೂ ಗಮನ ಸೆಳೆಯುವಂತಾಗಲು ಸರ್ಕಾರದ ಮಟ್ಟದಲ್ಲಿ ಹಲವು ಬಾರಿ ಚರ್ಚೆ ಮಾಡಿ ಗಮನ ಸೆಳೆದಿದ್ದೇನೆ. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಕ್ರೀಡಾಂಗಣ ನಿರ್ಮಿಸಲು ಸರ್ಕಾರ ಮುಂದಾಗಲಿದೆ ಎಂದರು.

    ಉತ್ತರ ಕರ್ನಾಟಕ ಭಾಗದಲ್ಲಿ ಬಹಳಷ್ಟು ಜನ ಅಥ್ಲೆಟಿಕ್ ಹಾಗೂ ವಿವಿಧ ಕ್ರೀಡಾಪಟುಗಳಿದ್ದಾರೆ. ನಗರದಲ್ಲಿ ರಾಷ್ಟ್ರಮಟ್ಟದ ಒಳಾಂಗಣ ಕ್ರೀಡಾಂಗಣ ನಿರ್ಮಾಣವಾದರೆ ಕ್ರಿಕೆಟ್ ಹೊರತುಪಡಿಸಿ ಟೆನಿಸ್, ಫುಟ್‌ಬಾಲ್, ವ್ಹಾಲಿಬಾಲ್, ಜಿಮ್ನ್ಯಾಸ್ಟಿಕ್ ಸೇರಿ ಎಲ್ಲ ಕ್ರೀಡೆಗಳನ್ನು ಒಂದೇ ಸೂರಿನಲ್ಲಿ ಆಡಬಹುದಾಗಿದೆ. ಜತೆಗೆ ತರಬೇತಿ ಮತ್ತು ಮಾರ್ಗದರ್ಶನ ಪಡೆಯಬಹುದು. ಇದರಿಂದ ಬೆಳಗಾವಿ ಆರ್ಥಿಕವಾಗಿಯೂ ಬೆಳೆಯಲಿದೆ ಎಂದು ಶಾಸಕ ಅಭಯ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts