More

    ಮೊಸಳೆ ಕೊರಳಲ್ಲಿ ಸಿಲುಕಿರೋ ಬೈಕ್​ ಟೈರ್​ ತೆಗೆದವರಿಗೆ ಸಿಗಲಿದೆ ಭಾರಿ ಬಹುಮಾನ: ಅದಕ್ಕೆ ಬೇಕಾಗಿರೋದಿಷ್ಟೇ…

    ಜಕಾರ್ತ: ಮೋಟರ್​ ಬೈಕ್​ ಟೈರ್​ ಕೊರಳಿಗೆ ಸಿಲುಕಿಕೊಂಡು ಬಿಡಿಸಿಕೊಳ್ಳಲು ಒದ್ದಾಡುತ್ತಿರುವ ಉಪ್ಪು ನೀರಿನ ಮೊಸಳೆಯನ್ನು ರಕ್ಷಿಸಿದವರಿಗೆ ಒಳ್ಳೆಯ ಬಹುಮಾನ ನೀಡುವುದಾಗಿ ಇಂಡೋನೇಷ್ಯಾ ಸರ್ಕಾರ ಘೋಷಿಸಿದೆ.

    ಈ ಒಂದು ಟಾಸ್ಕ್​ನಲ್ಲಿ ಜಯಿಸಿದವರಿಗೆ ಸಾಕಷ್ಟು ನಗದು ಬಹುಮಾನ ಸಿಗಲಿದೆ. ಆದರೆ, ಅದಕ್ಕೆ ಮಾಡಬೇಕಾಗಿರುವುದು ಇಂಡೋನೇಷ್ಯಾದ ಸುಲಾವೆಸಿಯಲ್ಲಿರುವ ಪಲು ಹೆಸರಿನ 13 ಅಡಿ ಉದ್ದದ ಮೊಸಳೆ ಎದುರು ನಿಂತು ಅದರ ಕತ್ತಿಗೆ ಸಿಲುಕಿರುವ ಟೈರ್​ ಅನ್ನು ತೆಗೆಯಬೇಕಾಗಿದೆ. ಆದರೆ, ಇದಕ್ಕೆ ಸಾಕಷ್ಟು ಗುಂಡಿಗೆ ಬೇಕು ಎಂಬುದು ಅನೇಕರ ಮಾತಾಗಿದೆ.

    ಸ್ಥಳೀಯ ಅಧಿಕಾರಿಗಳು ಟೈರ್​ ತೆಗೆಯುವ ಸಾಕಷ್ಟು ಪ್ರಯತ್ನಗಳನ್ನು ಈಗಾಗಲೇ ಮಾಡಿ ವಿಫಲವಾಗಿದ್ದಾರೆ. ಇದೇ ಆರಂಭವಲ್ಲ. ಅನೇಕ ವರ್ಷದಿಂದ ಮೊಸಳೆ ಈ ಸಮಸ್ಯೆಯನ್ನು ಎದುರಿಸುತ್ತಿದೆ. ಆದರೆ ಇತ್ತೀಚೆಗೆ ಮೊಸಳೆಯು ಬಾಯಿ ತೆರೆದು ಉಸಿರಾಡಲು ಶ್ರಮಪಡುತ್ತಿದ್ದ ವಿಡಿಯೋವೊಂದು ಬೆಳಕಿಗೆ ಬಂದ ಮೇಲೆ ಎಚ್ಚೆತ್ತ ಅಧಿಕಾರಿಗಳು ಹೀಗೆ ಬಿಟ್ಟರೆ ಟೈರ್​ ನಿಧಾನವಾಗಿ ಪ್ರಾಣಿಯನ್ನು ಕೊಂದು ಬಿಡುತ್ತದೆ ಎಂಬುದನ್ನು ಮನಗಂಡು, ಹೇಗಾದರೂ ಮಾಡಿ ಟೈರ್​ ತೆಗೆಯಲೇಬೇಕೆಂಬ ನಿರ್ಧಾರಕ್ಕೆ ಬಂದಿದ್ದಾರೆ.

    ಹೀಗಾಗಿ ಸುಲಾವೆಸಿ ಪ್ರಾಂತ್ಯದ ಗವರ್ನರ್​ ಇದಕ್ಕೆ ಅಂತ್ಯ ನೀಡಲು ಒಂದು ಯೋಜನೆ ರೂಪಿಸಿ ಎಂದು ಹೇಳಿದ ಬಳಿಕ, ಟೈರ್​ ತೆಗೆದವರಿಗೆ ಬಹುಮಾನ ನೀಡುವ ಹೊಸ ಆಫರ್ ಘೋಷಣೆ ಮಾಡಲಾಗಿದೆ. ಪ್ರಾಣಿಗೆ ಯಾವುದೇ ಪ್ರಾಣ ಹಾನಿ ಮಾಡದೇ ಉಪಾಯವಾಗಿ ಟೈರ್​ ಅನ್ನು ತೆಗೆದವರಿಗೆ ಒಳ್ಳೆಯ ನಗದು ಬಹುಮಾನವಂತೂ ಖಂಡಿತ ದೊರೆಯಲಿದೆ.​ (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts