More

    ಇಂದಿರಾ ಕ್ಯಾಂಟೀನ್​ಗೆ ಹಿಡಿದಿದೆ ಗ್ರಹಣ

    ನರಗುಂದ: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್ ಅನ್ನು ಪಟ್ಟಣದಲ್ಲಿ ನಿರ್ವಿುಸಿ ಎರಡು ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ಒದಗಿಬಂದಿಲ್ಲ. ಇದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

    ಪಟ್ಟಣದ ಬಾಬಾಸಾಹೇಬ ಭಾವೆ ಸರ್ಕಾರಿ ಸಾರ್ವಜನಿಕ ತಾಲೂಕು ಆಸ್ಪತ್ರೆ ಆವರಣದಲ್ಲಿ 2017-18ರಲ್ಲಿ ಸುಸಜ್ಜಿತ ಇಂದಿರಾ ಕ್ಯಾಂಟೀನ್ ಕಟ್ಟಡ ಕಟ್ಟಲಾಗಿದೆ. ಸರ್ಕಾರದ 80 ಲಕ್ಷ ರೂ. ಹಾಗೂ ಸ್ಥಳೀಯ ಪುರಸಭೆಯ ಎಸ್​ಎಫ್​ಸಿಯ 12 ಲಕ್ಷ ರೂ. ಅನುದಾನ ಸೇರಿ ಒಟ್ಟು 92 ಲಕ್ಷ ರೂ. ವೆಚ್ಚದಲ್ಲಿ ನಿರ್ವಿುಸಲಾಯಿತು. ಆದರೆ, ಇದು ಈವರೆಗೂ ಉದ್ಘಾಟನೆಯಾಗಿಲ್ಲ. ಇದರಿಂದಾಗಿ ಕಡಿಮೆ ದರದಲ್ಲಿ ಊಟ, ಉಪಾಹಾರ ದೊರೆಯುತ್ತದೆ ಎಂಬ ನೀರಿಕ್ಷೆಯಲ್ಲಿದ್ದ ತಾಲೂಕಿನ ಬಡವರು, ನಿರ್ಗತಿಕರು, ಕೂಲಿ ಕಾರ್ವಿುಕರು, ಪ್ರಯಾಣಿಕರಿಗೆ ನಿರಾಸೆ ಉಂಟಾಗಿದೆ.

    ನರಗುಂದ ತಾಲೂಕಿನ ಬಡವರು, ಅಂಗವಿಕಲರು, ನಿರ್ಗತಿಕರಿಗೆ ಅನುಕೂಲವಾಗಲೆಂದು ಸರ್ಕಾರದಿಂದ ನಿರ್ವಿುಸಲಾಗಿರುವ ಇಂದಿರಾ ಕ್ಯಾಂಟೀನ್ ಅನ್ನು ಶೀಘ್ರ ಆರಂಭಿಸಬೇಕು. ಇಲ್ಲದಿದ್ದರೆ ಕಟ್ಟಡದ ವಿವಿಧ ವಸ್ತುಗಳು ತುಕ್ಕು ಹಿಡಿದು ಉಪಯೋಗಕ್ಕೆ ಬಾರದಂತಾಗುತ್ತವೆ. ಕ್ಯಾಂಟೀನ್ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಲು ಪುರಸಭೆ ಗಮನಹರಿಸಬೇಕು.

    | ಇಬ್ರಾಹಿಂ ಸವಟಗಿ, ನರಗುಂದ ನಿವಾಸಿ

    ರಾಜ್ಯ ಸರ್ಕಾರಕ್ಕೆ ರಾಜ್ಯದ ಬಡವರು, ದೀನ-ದಲಿತರು, ಕೂಲಿ ಕಾರ್ವಿುಕರ ಬಗ್ಗೆ ಕಾಳಜಿಯಿಲ್ಲ. ಹಾಗಾಗಿಯೇ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೊಳಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಈ ಕುರಿತು ಗಮನ ಹರಿಸಿ ಆದಷ್ಟು ಬೇಗ ಕ್ಯಾಂಟೀನ್ ಕಾರ್ಯಾರಂಭ ಆಗುವಂತೆ ಮಾಡಬೇಕು.

    | ಪ್ರವೀಣ ಯಾವಗಲ್, ನರಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

    ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಅಡುಗೆ ತಯಾರಿಕೆಗೆ ಕೆಲ ವಸ್ತುಗಳನ್ನು ಅಳವಡಿಸುವುದು ಬಾಕಿಯಿದೆ. ಈ ಎಲ್ಲ ಕೆಲಸವನ್ನು ತಕ್ಷಣ ಪೂರ್ಣಗೊಳಿಸಿ ಟೆಂಡರ್ ಕರೆದು ಕಟ್ಟಡ ಉದ್ಘಾಟನೆಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ರ್ಚಚಿಸಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಆದಷ್ಟು ಬೇಗನೆ ಕಟ್ಟಡ ಉದ್ಘಾಟನೆ ಕಾರ್ಯ ನೆರವೇರಲಿದೆ.

    | ಸಂಗಮೇಶ ಬ್ಯಾಳಿ, ನರಗುಂದ ಪುರಸಭೆ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts