ನವದೆಹಲಿ: ಭಾರತದ ಇಂಡಿಗೋ ಏರ್ಲೈನ್ಸ್ನ ಯುನೈಟೆಡ್ ಅರಬ್ ಎಮೆರೆಟ್ಸ್(ಯುಎಇ) ವಿಮಾನಯಾನಗಳನ್ನು ಆಗಸ್ಟ್ 24 ರವರೆಗೆ ನಿಷೇಧಿಸಲಾಗಿದೆ. ಯಾತ್ರಿಕರಿಗೆ ವಿಮಾನ ನಿಲ್ದಾಣದಲ್ಲಿ ಕಡ್ಡಾಯವಾಗಿ ಮಾಡಬೇಕಾದ ಕರೊನಾ ಪರೀಕ್ಷೆಗಳನ್ನು ನಡೆಸದೆ ಪ್ರಯಾಣಕ್ಕೆ ಅವಕಾಶ ನೀಡಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.
ಭಾರತ, ಪಾಕಿಸ್ತಾನ, ನೇಪಾಳ, ಶ್ರೀಲಂಕ ಮತ್ತು ಉಗಾಂಡದಿಂದ ಯುಎಇಗೆ ತೆರಳುವ ಯಾತ್ರಿಕರಿಗೆ ಕರೊನಾ ಆರ್ಟಿಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಲಾಗಿದೆ. ವಿಮಾನ ಪ್ರಯಾಣಕ್ಕೆ 48 ಗಂಟೆಗಳ ಮುಂಚೆ ಮತ್ತು ವಿಮಾನ ನಿಲ್ದಾಣದಲ್ಲಿ ಕೆಲವು ಗಂಟೆಗಳ ಮುನ್ನ ಕರೊನಾ ಪರೀಕ್ಷೆ ಮಾಡಿಸಿಕೊಳ್ಳುವ ಅಗತ್ಯವಿರುತ್ತದೆ ಎನ್ನಲಾಗಿದೆ.
ಇದನ್ನೂ ಓದಿ: ಆ.23 ರಿಂದ ರಾಜ್ಯದಲ್ಲಿ ಭಾರೀ ಮಳೆ! ದಕ್ಷಿಣ ಒಳನಾಡಲ್ಲಿ ಯೆಲ್ಲೋ ಅಲರ್ಟ್
ಮಂಗಳವಾರದಿಂದ ಆಗಸ್ಟ್ 24 ರವರೆಗೆ ಒಂದು ವಾರದ ಕಾಲ ಯುಎಇಗೆ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿರುವ ಇಂಡಿಗೋ ಸಂಸ್ಥೆ, ಈ ದಿನಾಂಕಗಳಂದು ಫ್ಲೈಟ್ ಬುಕ್ ಆಗಿದ್ದು, ತೊಂದರೆಗೊಳಗಾಗುವ ಪ್ರಯಾಣಿಕರಿಗೆ ರೀಫಂಡ್ ಅಥವಾ ಮುಂದಿನ ದಿನಾಂಕಗಳಲ್ಲಿ ಪ್ರಯಾಣ ವ್ಯವಸ್ಥೆಯನ್ನು ಒದಗಿಸುವುದಾಗಿ ಹೇಳಿದೆ ಎನ್ನಲಾಗಿದೆ. (ಏಜೆನ್ಸೀಸ್)
ಮತ್ತೆ ಕರಾಳತೆಯ ಭೀತಿ: ತಾಲಿಬಾನ್ ಆಳ್ವಿಕೆಯಲ್ಲಿ ಹೆಣ್ಣುಮಕ್ಕಳಿಗೆ ಶಾಲೆ, ಉದ್ಯೋಗ ಅಪರಾಧವಾಗಿತ್ತು!
ದೂರು ಕೊಟ್ಟಳೆಂದು ಹೆಂಡತಿಯ ಮೇಲೆ ಗುಂಡು ಹಾರಿಸಿದ! ಆ ಸಮಯಕ್ಕೇ ಪೊಲೀಸರ ಎಂಟ್ರಿ!