More

    ದುಷ್ಕರ್ಮಿ ಪತ್ತೆಗೆ ಅಧಿಕಾರಿಗಳ ನಿರ್ಲಕ್ಷ್ಯ

    ಹನೂರು : ಪಟ್ಟಣದ ರೆಕಾರ್ಡ್ ರೂಂನಲ್ಲಿ ಕಳ್ಳತನವಾಗಿ 10 ದಿನಗಳು ಕಳೆದಿದೆ. ತಪ್ಪಿತಸ್ಥನನ್ನು ಪತ್ತೆಹಚ್ಚಲು ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂದು ತಾಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಬಸವರಾಜು ಆರೋಪಿಸಿದರು.
    ತಾಲೂಕಿನಲ್ಲಿ ಎಸ್ಸಿ, ಎಸ್ಟಿ ವರ್ಗಕ್ಕೆ ಸೇರಿದ ಕೆಲವು ಜಮೀನುಗಳ ನೋಂದಣಿಯಾಗಿಲ್ಲ. ಖಾತೆ ಬದಲಾವಣೆಯಲ್ಲಿ ಮಧ್ಯವರ್ತಿಗಳು ಭಾಗಿಯಾಗಿದ್ದಾರೆ. ಕೆಲವು ಜಮೀನುಗಳ ಮಾಲೀಕರು ಬೇರೆಡೆ ತೆರಳಿದ್ದು, ಕೆಲವರು ತಮ್ಮ ಹೆಸರಿನಲ್ಲಿ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದಾರೆ. ಜತೆಗೆ ಜಮೀನುಗಳಿಗೆ ಸಂಬಂಧಿಸಿದಂತೆ ಹಲವು ಅಕ್ರಮಗಳು ನಡೆದಿವೆ. ಹಾಗಾಗಿ ದಾಖಲೆಗಳನ್ನು ನಾಶಪಡಿಸುವ ಸಲುವಾಗಿ ದುಷ್ಕರ್ಮಿ ಅ.9ರಂದು ರಾತ್ರಿ ರೆಕಾರ್ಡ್ ರೂಂ ಬೀಗ ಒಡೆದು ಒಳನುಗ್ಗಿ ದಾಖಲೆಗಳಿಗಾಗಿ ಶೋಧ ನಡೆಸಿದ್ದಾನೆ. ಇದಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳೇ ಹೊಣೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
    ಇತ್ತ ಸ್ಥಳೀಯ ಶಾಸಕರು ಕಿಂಚಿತ್ತೂ ಗಮನಹರಿಸುತ್ತಿಲ್ಲ. ಸಂಬಂಧಪಟ್ಟವರು ತನಿಖೆ ಚುರುಕುಗೊಳಿಸಿ ತಪ್ಪಿತಸ್ಥನಿಗೆ ಶಿಕ್ಷೆ ವಿಧಿಸಬೇಕು. ವಿಳಂಬವಾದಲ್ಲಿ ಛಲವಾದಿ ಮಹಾಸಭಾದಿಂದ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
    ಪಪಂ ಸದಸ್ಯ ಮಹೇಶ್ ಮಾತನಾಡಿ, ಕಳ್ಳತನಕ್ಕೆ ಮಧ್ಯವರ್ತಿಗಳೇ ಕಾರಣ. ಎಸ್ಸಿ, ಎಸ್ಟಿ ಜಮೀನುಗಳ ದಾಖಲೆಗಳನ್ನು ನಾಶಪಡಿಸುವ ಹುನ್ನಾರವಾಗಿದೆ ಅಧಿಕಾರಿಗಳು ಈ ಬಗ್ಗೆ ಅಗತ್ಯ ಕ್ರಮವಹಿಸಬೇಕು ಎಂದರು.
    ಸುದ್ದಿಗೊಷ್ಠಿಯಲ್ಲಿ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಶ್ರೀಕಂಠಮೂರ್ತಿ, ಪುಟ್ಟರಾಜು, ನಾಗರಾಜು, ಪಿ.ಲಿಂಗರಾಜು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts