More

    ದೇಶದ ಕಿರಿಯ ಮಹಿಳಾ ಬಸ್​ ಡ್ರೈವರ್: 8 ವರ್ಷದಿಂದಲೇ ಬಸ್​ ಓಡಿಸೋ ಈಕೆಯ ಕತೆ ಕೇಳಿದ್ರೆ ಹಮ್ಮೆ ಪಡ್ತಿರಾ!

    ಕೋಲ್ಕತ: ಸಾಮಾನ್ಯವಾಗಿ ಕಾರು, ಬೈಕ್​ ಮತ್ತು ಆಟೋ ಚಾಲನೆ ಮಾಡುವ ಮಹಿಳೆಯರನ್ನು ಓಡಿದ್ದೇವೆ. ಆದರೆ, ಲಾರಿ ಮತ್ತು ಬಸ್​ ಅಂತಹ ದೊಡ್ಡ ವಾಹನ ಚಾಲನೆ ಮಾಡುವ ಮಹಿಳೆಯರು ವಿರಾಳಾತಿ ವಿರಳ ಎಂದರೆ ತಪ್ಪಾಗಲಾರದು. ವಿದೇಶಗಳಲ್ಲಿ ಕಾಣಬಹುದೇನೋ? ಆದರೆ, ಭಾರತದಲ್ಲಂತೂ ತುಂಬಾ ಅಪರೂಪ. ಆದರೆ, ನಾವಿಂದು ಭಾರತದಲ್ಲಿ ಬಸ್​ ಚಾಲನೆ ಮಾಡುವ ಅತಿ ಕಿರಿಯ ವಯಸ್ಸಿನ ಮಹಿಳೆಯನ್ನು ನಿಮಗೆ ಪರಿಚಯ ಮಾಡಿಕೊಡುತ್ತೇವೆ.

    ಇದನ್ನೂ ಓದಿರಿ: ಹಿರಿಯರ ಒಪ್ಪಿಗೆ ಪಡೆದು ಪ್ರೇಮವಿವಾಹವಾದ ನವಜೋಡಿಗೆ ಮೂರೇ ತಿಂಗಳಲ್ಲಿ ಕಾದಿತ್ತು ಬಿಗ್​ ಶಾಕ್​!

    ದೇಶದ ಕಿರಿಯ ಮಹಿಳಾ ಬಸ್​ ಡ್ರೈವರ್: 8 ವರ್ಷದಿಂದಲೇ ಬಸ್​ ಓಡಿಸೋ ಈಕೆಯ ಕತೆ ಕೇಳಿದ್ರೆ ಹಮ್ಮೆ ಪಡ್ತಿರಾ!

    ಕಲ್ಪನಾ ಮೊಂಡಾಲ್​ ಎಂಬ ದಿಟ್ಟ ಯುವತಿಯ ಜೀವನವನ್ನೊಮ್ಮೆ ನೋಡಿಬರೋಣ. ಕೇವಲ 21ರ ವಯಸ್ಸಿನಲ್ಲೇ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತದ ಜನನಿಬಿಡ ಪ್ರದೇಶಗಳಲ್ಲಿ ಬಸ್​ ಚಾಲನೆ ಮಾಡುವ ಕಲ್ಪನಾಳನ್ನು ಅಸಾಧಾರಣ ಮಹಿಳೆ ಎಂದರೆ ತಪ್ಪಾಗಲಾರದು. ಚಾಲನೆ ಮಾಡುವುದನ್ನೆ ಉಸಿರಾಗಿಸಿಕೊಂಡಿರುವ ಕಲ್ಪನಾಗೆ ತಂದೆಯೇ ಸ್ಪೂರ್ತಿ. ಏಕೆಂದರೆ, ತಂದೆಯೂ ಕೂಡ ಚಾಲನೆಯನ್ನು ಉಸಿರಾಗಿಸಿಕೊಂಡಿದ್ದರು. ಆದರೆ, ಎರಡು ವರ್ಷಗಳ ಹಿಂದೆ ನಡೆದ ರಸ್ತೆ ಅಪಘಾತವೊಂದರಲ್ಲಿ ಕಲ್ಪನಾ ತಂದೆ ಕಾಲು ಕಳೆದುಕೊಂಡ ಬಳಿಕ ಇನ್ನೆಂದು ವಾಹನ ಚಾಲನೆ ಮಾಡದಂತಾಯಿತು.

    ಇದನ್ನೂ ಓದಿರಿ: ಭಯದಿಂದಲೇ ಎಸ್​ಬಿಐ ಉದ್ಯೋಗಿ ಆತ್ಮಹತ್ಯೆಗೆ ಶರಣು: ಡೆತ್​ನೋಟ್​ನಲ್ಲಿತ್ತು ನೋವಿನ ನುಡಿ!

    ದೇಶದ ಕಿರಿಯ ಮಹಿಳಾ ಬಸ್​ ಡ್ರೈವರ್: 8 ವರ್ಷದಿಂದಲೇ ಬಸ್​ ಓಡಿಸೋ ಈಕೆಯ ಕತೆ ಕೇಳಿದ್ರೆ ಹಮ್ಮೆ ಪಡ್ತಿರಾ!

    ಭಾರಿ ವಾಹನಗಳನ್ನು ಹೇಗೆ ಚಲಾಯಿಸಬೇಕೆಂದು ಕಲಿಯುವಾಗ ಕಲ್ಪನಾಗೆ ಕೇವಲ 8 ವರ್ಷ. ರಸ್ತೆ ಮತ್ತು ಮುಖ್ಯರಸ್ತೆಗಳಲ್ಲಿ ಅಭ್ಯಾಸ ಮಾಡುತ್ತಿರಲಿಲ್ಲ. ಮನೆಯ ಪಕ್ಕದಲ್ಲೇ ಇದ್ದ ಸ್ಥಳದಲ್ಲಿ ಅಭ್ಯಾಸದಲ್ಲಿ ಕಲ್ಪನಾ ತೊಡಗಿಕೊಂಡಿದ್ದಳು. ಬಳಿಕ ಬಸ್​ ಚಾಲನೆಯ ಪರೀಕ್ಷೆಯನ್ನು ತೆಗೆದುಕೊಂಡ ಕಲ್ಪನಾ ಅದರಲ್ಲಿ ಉತ್ತೀರ್ಣಳಾಗುವ ಮೂಲಕ ಮುಖ್ಯರಸ್ತೆಗಳಲ್ಲಿ ಚಾಲನೆ ಮಾಡುವ ಅರ್ಹತೆಯನ್ನು ಪಡೆದುಕೊಂಡಳು. ಕಲ್ಪನಾ ಬಸ್ ಚಾಲನೆ ಮಾಡಲು ಹೊರಟಾಗಲೆಲ್ಲಾ ತಂದೆ ಅಥವಾ ತಾಯಿ ಯಾವಾಗಲೂ ಜತೆ ಇರುತ್ತಾರೆ. ಮಗಳ ಆದಾಯದಿಂದಲೇ ಮನೆಯವರ ಜೀವನ ನಡೆಯುತ್ತಿದೆ.

    ಇದನ್ನೂ ಓದಿರಿ: ಖುರ್ಚಿಯಲ್ಲಿ ಪ್ರಿಯತಮನನ್ನು ಕಟ್ಟಿ ಸೆಕ್ಸ್​ ಮಾಡಲು ಹೋದ ಮಹಿಳೆ; ಕಾಮದಾಸೆಯಲ್ಲೇ ಯಮಲೋಕ ಸೇರಿದ ಯುವಕ

    ದೇಶದ ಕಿರಿಯ ಮಹಿಳಾ ಬಸ್​ ಡ್ರೈವರ್: 8 ವರ್ಷದಿಂದಲೇ ಬಸ್​ ಓಡಿಸೋ ಈಕೆಯ ಕತೆ ಕೇಳಿದ್ರೆ ಹಮ್ಮೆ ಪಡ್ತಿರಾ!

    ತಂದೆ ಅಪಘಾತದಲ್ಲಿ ಕಾಲು ಕಳೆದುಕೊಂಡು ಕುಟುಂಬಕ್ಕೆ ನೆರವಾಗಬೇಕೆಂದು ಕಲ್ಪನಾ ನಿರ್ಧಾರ ಮಾಡಿದಳು. ಆದರೆ, ಅನೇಕ ಬಸ್​ ಮಾಲೀಕರು ಕಲ್ಪನಾಳ ಮೇಲೆ ನಂಬಿಕೆ ಇಡಲಿಲ್ಲ. ಇದು ಆಕೆಯ ಆರಂಭಿಕ ಹಿನ್ನಡೆಯಾಗಿತ್ತು. ಆದರೆ, ಓರ್ವ ಮಾಲೀಕ ಮುಂದೆ ಬಂದು ಕಲ್ಪನಾಗೆ ನೆರವು ನೀಡಿದರು. ಆದರೆ, ಮಾಲೀಕನ ನಂಬಿಕೆಯನ್ನು ಕಲ್ಪನಾ ಕಳೆದುಕೊಳ್ಳಲಿಲ್ಲ. ಅಂದು ಕಲ್ಪನಾಳನ್ನು ತಿರಸ್ಕರಿಸಿದವರು ಪ್ರತಿದಿನ ಅವಳು ಬಸ್ ಓಡಿಸುತ್ತಿರುವುದನ್ನು ನೋಡಿ ನಿರಾಶೆಗೊಳ್ಳುತ್ತಿದ್ದಾರೆ. ಮಗಳ ದಿಟ್ಟತನ ಬಗ್ಗೆ ತಂದೆಗೂ ಹೆಮ್ಮೆ ಇದೆ. ತನ್ನ ಭವಿಷ್ಯವನ್ನು ನಾಶ ಮಾಡಿ ಕುಟುಂಬಕ್ಕೆ ಆಧಾರವಾಗಿ ನಿಂತಿದ್ದಾಳೆಂದು ಕಲ್ಪನಾ ತಂದೆ ಸುಭಾಶ್​ ಮೊಂಡಾಲ್​ ಭಾವುಕರಾದರು.

    ಇದನ್ನೂ ಓದಿರಿ: ಬಂಧಿತ ಯುವತಿಯರ ಮೊಬೈಲ್​, ಲ್ಯಾಪ್​ಟಾಪ್​ ತುಂಬಾ ಪೋರ್ನ್​ ವಿಡಿಯೋಗಳು: ಎಫ್​ಎಸ್​ಎಲ್​ ಸ್ಫೋಟಕ ವರದಿ!

    ದೇಶದ ಕಿರಿಯ ಮಹಿಳಾ ಬಸ್​ ಡ್ರೈವರ್: 8 ವರ್ಷದಿಂದಲೇ ಬಸ್​ ಓಡಿಸೋ ಈಕೆಯ ಕತೆ ಕೇಳಿದ್ರೆ ಹಮ್ಮೆ ಪಡ್ತಿರಾ!

    ಇನ್ನು ಕೋಲ್ಕತದಲ್ಲಿ ವಾಹನ ಚಾಲನೆ ಮಾಡುವುದೆಂದರೆ ಸುಲಭದ ಮಾತಲ್ಲ. ಏಕೆಂದರೆ, ಸುಗಮ ಚಾಲನೆಗೆ ಭಾರತದಲ್ಲೇ ಅತ್ಯಂತ ಕಷ್ಟದ ನಗರ ಎಂಬ ಕುಖ್ಯಾತಿಯನ್ನು ಪಡೆದುಕೊಂಡಿದೆ. ಇಕ್ಕಾಟದ ಪ್ರದೇಶಗಳಲ್ಲಿಯೂ ಕಲ್ಪನಾ ಲೀಲಾಜಾಲವಾಗಿ ಬಸ್​ ಚಲಾಯಿಸುತ್ತಾಳೆ. ಕಿಕ್ಕಿರಿದ ತುಂಬಿದ ಮಾರುಕಟ್ಟೆ ಏರಿಯಾಗಳಲ್ಲೂ ಸೊಗಸಾಗಿ ಡ್ರೈವ್​ ಮಾಡುತ್ತಾಳೆ. ಇಂತಹ ರಸ್ತೆಗಳಲ್ಲಿ ವಾಹನ ಚಲಾಯಿಸುವಾಗ ಎಂದಾದರೂ ಕಷ್ಟಕರ ಪರಿಸ್ಥಿತಿಯನ್ನು ಎದುರಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಕಲ್ಪನಾ, ಕೆಲವು ಪೊಲೀಸ್ ಅಧಿಕಾರಿಗಳು ಆಕೆಯನ್ನು ವಿಚಾರಣೆ ನಡೆಸಿದ್ದರ ಬಗ್ಗೆ ವಿವರಿಸಿದಳು. ಹೇಗೆ ಬಸ್ ಓಡಿಸುತ್ತಾಳೆ ಎಂದು ತಿಳಿಯುವ ಕುತೂಹಲದಿಂದ ಬಸ್​ ಓಡಿಸಲು ಹೇಳಿದರು, ಕೆಲವು ಪೊಲೀಸ್ ಅಧಿಕಾರಿಗಳು ಬಸ್​ ಚಾಲನೆ ಮಾಡಲು ಮತ್ತು ಅವಳ ಫೋಟೋಗಳನ್ನು ಕ್ಲಿಕ್ಕಿಸುವ ಮೂಲಕ ಪ್ರೋತ್ಸಾಹ ಮಾಡುತ್ತಿದ್ದರಂತೆ.

    ಇದನ್ನೂ ಓದಿರಿ: ಸೆಕ್ಸ್​ ಮಾಡುವಾಗ ಉಸಿರುಗಟ್ಟಿ ಸತ್ತೇ ಹೋದಳು… ಬ್ಯಾಚಲರ್​ ಮನೆಯಲ್ಲಿ ವಿವಾಹಿತೆ ಸಾವು!

    ದೇಶದ ಕಿರಿಯ ಮಹಿಳಾ ಬಸ್​ ಡ್ರೈವರ್: 8 ವರ್ಷದಿಂದಲೇ ಬಸ್​ ಓಡಿಸೋ ಈಕೆಯ ಕತೆ ಕೇಳಿದ್ರೆ ಹಮ್ಮೆ ಪಡ್ತಿರಾ!ಇನ್ನು ಜೀವನದ ಮುಂದಿನ ಗುರಿಯ ಬಗ್ಗೆ ಮಾತನಾಡಿರುವ ಕಲ್ಪನಾ, ದಿನನಿತ್ಯ ತಡರಾತ್ರಿಯವರೆಗೂ ದುಡಿಯುತ್ತಿರುವುದರಿಂದ ಅಧ್ಯಯನ ಮಾಡಲು ನನ್ನ ಆರೋಗ್ಯ ಸಹಕರಿಸುತ್ತಿಲ್ಲ ಎಂದಿದ್ದಾರೆ. ಸದ್ಯ ಮನೆಯಲ್ಲಿ ತಂದೆ-ತಾಯಿ ಅಲ್ಲದೆ, ಹಿರಿಯ ಸಹೋದರಿ ಮತ್ತು ಇಬ್ಬರು ಅಣ್ಣಂದಿರಿದ್ದಾರೆ. ಮನೆಯ ಕಿರಿಯ ಮಗಳಾಗಿರುವ ಕಲ್ಪನಾ 10ನೇ ತರಗತಿಯನ್ನಾದರೂ ಮುಗಿಸಿ ಪೊಲೀಸ್​ ಇಲಾಖೆಯಲ್ಲಿ ಡ್ರೈವರ್​ ಕೆಲಸಕ್ಕೆ ಅರ್ಜಿ ಸಲ್ಲಿಸುವ ಆಸೆ ಇದೆ. (ಏಜೆನ್ಸೀಸ್​)

    ಅಂಬಾನಿ ಭದ್ರತೆಗೆ ಇರುವ ಅತ್ಯಂತ ದುಬಾರಿ ಪೊಲೀಸ್ ಕಾರು: ಇದರ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!

    ಸಮುದ್ರಕ್ಕೆ ಬಿದ್ದ ಇಂಡೋನೇಷ್ಯಾ ವಿಮಾನ; ಪ್ರಯಾಣಿಕರೆಲ್ಲರೂ ಮೃತಪಟ್ಟಿರುವ ಶಂಕೆ

    ಆರ್​ಟಿಒ ಅಲೆದಾಟ ಸಂಕಟ: 6 ತಿಂಗಳು ಅಲೆದರೂ ಡಿಎಲ್ ಸಿಗಲ್ಲ; ದಂಡ ಪಾವತಿಯಲ್ಲೂ ಕಳ್ಳಾಟ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts