More

    ಭಾರತದ ನಿರುದ್ಯೋಗ ಪ್ರಮಾಣ ಶೇ. 7.8ಕ್ಕೆ ಏರಿಕೆ

    ಮುಂಬೈ: ಭಾರತದ ನಿರುದ್ಯೋಗ ಪ್ರಮಾಣ ಮಾರ್ಚ್ ತಿಂಗಳಲ್ಲಿ ಶೇ. 7.8ಕ್ಕೆ ಏರಿಕೆ ಕಂಡಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಹೇಳಿದೆ. ಇದು ಕಳೆದ ಮೂರು ತಿಂಗಳ ಗರಿಷ್ಠ ಮಟ್ಟವಾಗಿದೆ.

    2022ರ ಡಿಸೆಂಬರ್​ನಲ್ಲಿ ನಿರುದ್ಯೋಗ ಪ್ರಮಾಣ ಶೇ. 8.30ಕ್ಕೆ ಏರಿತ್ತು. ಜನವರಿಯಲ್ಲಿ ಶೇ. 7.14ಕ್ಕೆ ಇಳಿದಿತ್ತು. ಫೆಬ್ರವರಿಯಲ್ಲಿ ಮತ್ತೆ ಶೇ. 7.45 ಏರಿತ್ತು ಎಂದು ಶನಿವಾರ ಬಿಡುಗಡೆಯಾದ ವರದಿ ಹೇಳಿದೆ.

    ಇದನ್ನೂ ಓದಿ: ಪ್ರೀತಿಯಲ್ಲಿ ಬೀಳಲು ಕಾಲೇಜು ವಿದ್ಯಾರ್ಥಿಗಳಿಗೆ ರಜೆ: ಜನಸಂಖ್ಯೆ ಹೆಚ್ಚಿಸಲು ಚೀನಾದ ಹೊಸ ಪ್ರಯೋಗ

    ಮಾರ್ಚ್​ನಲ್ಲಿ ನಗರ ಪ್ರದೇಶಗಳಲ್ಲಿ ನಿರುದ್ಯೋಗ ಪ್ರಮಾಣ ಶೇ. 8.4 ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ. 7.5 ಇದೆ. ಕಳೆದ ತಿಂಗಳು ಭಾರತದ ಕಾರ್ವಿುಕ ಮಾರುಕಟ್ಟೆ ಹಿನ್ನಡೆ ಕಂಡಿತ್ತು. ಇದರಿಂದಾಗಿ ಉದ್ಯೋಗ ಸೃಷ್ಟಿ ಪ್ರಮಾಣ ಶೇ. 36.7ಕ್ಕೆ ಕುಸಿದಿದೆ. ಉದ್ಯೋಗ ಪ್ರಮಾಣ 409.9 ದಶಲಕ್ಷದಿಂದ 407.6 ದಶಲಕ್ಷಕ್ಕೆ ಕುಸಿದಿದೆ.

    ಹರಿಯಾಣದಲ್ಲಿ ಶೇ. 26.8, ರಾಜಸ್ಥಾನದಲ್ಲಿ ಶೇ. 26.4, ಜಮ್ಮು-ಕಾಶ್ಮೀರದಲ್ಲಿ ಶೇ. 23.1, ಸಿಕ್ಕಿಂನಲ್ಲಿ ಶೇ. 20.7, ಬಿಹಾರದಲ್ಲಿ ಶೇ. 17.6, ಜಾರ್ಖಂಡದಲ್ಲಿ ಶೇ. 17.5 ನಿರುದ್ಯೋಗಿಗಳಿದ್ದಾರೆ. ಉತ್ತರಾಖಂಡ ಮತ್ತು ಛತ್ತೀಸ್​ಗಢದಲ್ಲಿ ಶೇ. 0.8, ಪುದುಚೇರಿಯಲ್ಲಿ ಶೇ. 1.5, ಗುಜರಾತ್​ನಲ್ಲಿ ಶೇ. 1.8, ಕರ್ನಾಟಕದಲ್ಲಿ ಶೇ. 2.3, ಮೇಘಾಲಯ ಮತ್ತು ಒಡಿಶಾದಲ್ಲಿ ಶೇ. 2.6ರಷ್ಟು ನಿರುದ್ಯೋಗ ಕಡಿಮೆಯಾಗಿದೆ ಎಂದು ವರದಿ ಹೇಳಿದೆ. (ಏಜೆನ್ಸೀಸ್​)

    ಆಟಿಸಂ ಮಕ್ಕಳು ಬುದ್ಧಿಮಾಂದ್ಯರಲ್ಲ: ಸಮಸ್ಯೆ ಗುರುತಿಸಿ, ಆರಂಭದಲ್ಲೇ ಚಿಕಿತ್ಸೆ ಕೊಡಿಸಲು ಪಾಲಕರಿಗೆ ಸಲಹೆ

    5 ದಶಕಗಳಲ್ಲೇ ಪಾಕ್​​​ ಹಣದುಬ್ಬರ ಗರಿಷ್ಠ: ಆಹಾರಕ್ಕಾಗಿ ನೂಕು ನುಗ್ಗಲು, ಕಾಲ್ತುಳಿತಕ್ಕೆ 20 ಮಂದಿ ಬಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts