More

    ಟಿ20 ವಿಶ್ವಕಪ್​ನಲ್ಲಿ ರೋಹಿತ್​ ಜತೆಗೆ ಸ್ಟಾರ್​ ಬ್ಯಾಟರ್​ ಓಪನಿಂಗ್​ಗೆ ಸಿದ್ಧತೆ: ಶುಭಮಾನ್​ ಪರ್ಯಾಯ ಆಯ್ಕೆ !

    ನವದೆಹಲಿ: ಮುಂಬರುವ ಟಿ20 ವಿಶ್ವಕಪ್​ ಟೂರ್ನಿಗೆ ಟೀಮ್​ ಇಂಡಿಯಾದ ವಿಕೆಟ್​ ಕೀಪರ್​ ಆಯ್ಕೆ ಕಗ್ಗಂಟ್ಟಾಗಿರುವುದರ ನಡುವೆಯೇ ರೋಹಿತ್​ ಜತೆಗೆ ವಿರಾಟ್​ ಕೊಹ್ಲಿ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸುವ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ. ವಿಶ್ವಕಪ್​ ತಂಡದ ಆಯ್ಕೆ ಕುರಿತು ಕೋಚ್​ ದ್ರಾವಿಡ್​, ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್​ ಅಗರ್ಕರ್​ ಹಾಗೂ ನಾಯಕ ರೋಹಿತ್​ ಶರ್ಮ ಕಳೆದ ವಾರ ಮುಂಬೈನಲ್ಲಿ ಸಭೆ ನಡೆಸಿದ್ದಾರೆ.

    2022ರ ಟಿ20 ವಿಶ್ವಕಪ್​ ಬಳಿಕ ಯಾವುದೇ ಟಿ20 ಪಂದ್ಯ ಆಡದ ವಿರಾಟ್​ ಕೊಹ್ಲಿ, ಜನವರಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಕಣಕ್ಕಿಳಿಯುವ ಮೂಲಕ ವಿಶ್ವಕಪ್​ಗೆ ಲಭ್ಯವಿರುವುದಾಗಿ ತಿಳಿಸಿದರು. ಐಪಿಎಲ್​ನಲ್ಲಿ ಆರಂಭಿಕನಾಗಿ ಉತ್ತಮ ದಾಖಲೆ ಹೊಂದಿರುವ ಕೊಹ್ಲಿ, ರೋಹಿತ್​ ಜತೆಗೆ ಇನಿಂಗ್ಸ್​ ಆರಂಭಿಸುವ ಸಾಧ್ಯತೆಗಳಿವೆ. ರೋಹಿತ್​&ಕೊಹ್ಲಿ ಜೋಡಿ ಓಪನಿಂಗ್​ ಮಾಡಿದರೆ, ಯಶಸ್ವಿ ಜೈಸ್ವಾಲ್​ ಮತ್ತು ಶುಭಮಾನ್​ ಗಿಲ್​ ಇಬ್ಬರ ನಡುವೆ ಪರ್ಯಾಯ ಓಪನರ್​ ಆಗಿ ಯಾರನ್ನು ಆಯ್ಕೆ ಮಾಡಬೇಕು ಎಂಬ ಚರ್ಚೆಯೂ ನಡೆದಿದೆ. ಹಾಲಿ ಐಪಿಎಲ್​ನಲ್ಲಿ ರನ್​ ಬರ ಎದುರಿಸಿರುವ ಎಡಗೈ ಬ್ಯಾಟರ್​ ಯಶಸ್ವಿ ಜೈಸ್ವಾಲ್​ಗೆ ವಿಶ್ವಕಪ್​ನಲ್ಲಿ ಆಡುವ ಅವಕಾಶ ಣಿಸಿದ್ದು, ಐಪಿಎಲ್​ ಪ್ರದರ್ಶನದ ಆಧಾರದ ಮೇಲೆ ಗಿಲ್​ ಮೇಲುಗೈ ಸಾಧಿಸಿದ್ದಾರೆ.
    ಜತೆಗೆ ವಿಶ್ವಕಪ್​ನಲ್ಲಿ ಯಾವುದೇ ಪ್ರಯೋಗ ನಡೆಸದೆ ಅಂತಾರಾಷ್ಟ್ರೀಯ ಟಿ20 ಹಾಗೂ ಐಪಿಎಲ್​ನ ಪ್ರದರ್ಶನದ ಆಧಾರದ ಮೇಲೆ ವಿಶ್ವಕಪ್​ ತಂಡಕ್ಕೆ ಆಯ್ಕೆ ನಡೆಸಲಾಗುವುದು ಎಂದು ವರದಿಗಳು ತಿಳಿಸಿವೆ.

    ಏಪ್ರಿಲ್​ ಅಂತ್ಯದಲ್ಲಿ ಆಯ್ಕೆಗಾರರ ಸಭೆ ನಡೆಯಲಿದ್ದು, ಇದರಲ್ಲಿ 15 ಸದಸ್ಯರ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಯಾರಾದರೂ ಗಾಯಗೊಂಡರೆ ಬದಲಿ ಆಟಗಾರರಾಗಿರುವ ಐದು ಹೆಚ್ಚುವರಿ ಆಟಗಾರರನ್ನು ಸಹ ಇದು ಒಳಗೊಂಡಿರುತ್ತದೆ. ಏಕೆಂದರೆ ಬದಲಿ ಆಟಗಾರರನ್ನು ತಣವೇ ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ಗೆ ಕಳುಹಿಸುವುದು ಕಷ್ಟ ಎನಿಸಿದೆ. ಟಿ20 ವಿಶ್ವಕಪ್​ ಜೂನ್​ 1ರಿಂದ ವೆಸ್ಟ್​ ಇಂಡೀಸ್​&ಅಮೆರಿಕದ ಜಂಟಿ ಆತಿಥ್ಯದಲ್ಲಿ ನಡೆಯಲಿದ್ದು, ಭಾರತ ತಂಡ ಜೂನ್​ 5ರಂದು ಐರ್ಲೆಂಡ್​ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಮೇ 1ರೊಳಗೆ ಎಲ್ಲ 20 ತಂಡಗಳನ್ನು ಹೆಸರಿಸುವ ಗಡುವನ್ನು ಐಸಿಸಿ ಈಗಾಗಲೆ ನಿಗದಿಪಡಿಸಿದೆ.

    ರೇಸ್​ನಲ್ಲಿ ಪರಾಗ್​: ಅಸ್ಸಾಂನ ಯುವ ಆಲ್ರೌಂಡರ್​ ರಿಯಾನ್​ ಪರಾಗ್​ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು. ಹಾಲಿ ಐಪಿಎಲ್​ನಲ್ಲಿ ಆಡಿರುವ ಏಳು ಪಂದ್ಯಗಳಲ್ಲಿ 318 ರನ್​ ಕಲೆಹಾಕಿರುವ ಪರಾಗ್​, ಮುಂದಿನ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನವನ್ನು ಕಾಯ್ದುಕೊಂಡರೆ, ಟೀಮ್​ ಇಂಡಿಯಾದಲ್ಲಿ ಸ್ಥಾನ ಪಡೆಯುವ ಅವಕಾಶಗಳಿವೆ. ಜತೆಗೆ ದೆಹಲಿಯ ಯುವ ವೇಗಿ ಮಯಾಂಕ್​ ಯಾದವ್​ ಅವರ ಹೆಸರೂ ಸಭೆಯಲ್ಲಿ ಪ್ರಸ್ತಾಪಗೊಂಡಿದೆ. ಶಿವಂ ದುಬೆ& ರಿಂಕು ಸಿಂಗ್​ ನಡುವೆ ಫಿನಿಶರ್​ ಸ್ಥಾನಕ್ಕೆ ಪೈಪೋಟಿ ಇದೆ. ಇದನ್ನು ಹೊರತುಪಡಿಸಿ ಯುವ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts