More

    ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವವರು ಇವರೇ ನೋಡಿ…

    ಬೆಂಗಳೂರು: ದೇಶದಲ್ಲಿ ವಿಶೇಷವಾಗಿ ಐಟಿ ವಲಯದಲ್ಲಿ ತಿಂಗಳಿಗೆ ಲಕ್ಷ ಅಥವಾ ಕೋಟಿ ಗಳಿಸುವ ಉದ್ಯೋಗಿಗಳೂ ಇದ್ದಾರೆ. ಇವರ ಸಾಲಿಗೆ ಸಿ ವಿಜಯಕುಮಾರ್ ಕೂಡ ಸೇರುತ್ತಾರೆ. ಭಾರತದಲ್ಲಿ ಐಟಿ ಸಂಸ್ಥೆಗಳ ಉನ್ನತ ಅಧಿಕಾರಿಗಳಲ್ಲಿ ಒಬ್ಬರಾದ ಇವರು ಪ್ರಸ್ತುತ HCLTech ನ CEO ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

    ವಿಜಯಕುಮಾರ್ 2022ರಿಂದ ಭಾರತದಲ್ಲಿ ಐಟಿ ಸಂಸ್ಥೆಗಳಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಉನ್ನತ ಕಾರ್ಯನಿರ್ವಾಹಕರಾದರು. HCL ಸಂಸ್ಥಾಪಕ ಶಿವ ನಾಡರ್ ಈ ಸೀನಿಯರ್ ಪೋಸ್ಟ್​​​​ನಿಂದ ಕೆಳಗಿಳಿಯಲು ನಿರ್ಧರಿಸಿದ ನಂತರ ಜುಲೈ 20, 2022 ರಂದು ವಿಜಯಕುಮಾರ್ ಅವರನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಹೆಸರಿಸಲಾಯಿತು.

    ಎಚ್‌ಸಿಎಲ್‌ನ ವಾರ್ಷಿಕ ವರದಿಯ ಪ್ರಕಾರ, ವಿಜಯಕುಮಾರ್‌ಗೆ ಕಳೆದ ಹಣಕಾಸು ವರ್ಷದಲ್ಲಿ ಮೂಲ ವೇತನವಾಗಿ USD 2 ಮಿಲಿಯನ್, ವೇರಿಯಬಲ್ ಪೇನಲ್ಲಿ USD 2 ಮಿಲಿಯನ್ ಮತ್ತು ಇತರ ಪ್ರಯೋಜನಗಳ ಜೊತೆಗೆ USD 0.02 ಮಿಲಿಯನ್ ಪಾವತಿಸಲಾಗಿದೆ. ಹೆಚ್ಚು ಕಡಿಮೆ USD 4.13 ಮಿಲಿಯನ್ ಸಂಬಳ ಪಡೆದಿದ್ದಾರೆ.

    ಇದನ್ನೂ ಓದಿ: ಯೂಟ್ಯೂಬ್​​​ ವಿಡಿಯೋ ನೋಡಿ ಹಲ್ಲುನೋವಿಗೆ ಚಿಕಿತ್ಸೆ ಪಡೆದುಕೊಂಡ ಯುವಕ ಏಕಾಏಕಿ ಸಾವು

    ವಿಜಯಕುಮಾರ್ 1994 ರಲ್ಲಿ HCL ಗೆ ಸೇರಿದರು. ಸಿಇಒ ಆಗುವ ಮುನ್ನ ವಿಜಯಕುಮಾರ್ ಎಚ್‌ಸಿಎಲ್‌ನಲ್ಲಿ ಹಲವು ಹುದ್ದೆಗಳಲ್ಲಿ ಕೆಲಸ ಮಾಡಿದ್ದರು. ಪ್ರಸ್ತುತ ಯುಎಸ್-ಇಂಡಿಯಾ ಬಿಸಿನೆಸ್ ಕೌನ್ಸಿಲ್​​ನ ಮಂಡಳಿಯ ಸದಸ್ಯರೂ ಆಗಿದ್ದಾರೆ.

    ಇದನ್ನೂ ಓದಿ: ಕೋಲಾರದ ಬಳಿ ಹೈಟೆಕ್‌ ಕೈಗಾರಿಕಾ ಪಾರ್ಕ್ ಅಭಿವೃದ್ಧಿಗೆ ಆಸಕ್ತಿ; ₹10 ಸಾವಿರ ಕೋಟಿ ಹೂಡಿಕೆ, 40 ಸಾವಿರ ಉದ್ಯೋಗ ಸೃಷ್ಟಿ 

    ವಿಜಯಕುಮಾರ್ ತಮಿಳುನಾಡಿನಲ್ಲಿ ಜನಿಸಿದರು. ಆದರೆ ಪ್ರಸ್ತುತ ಅಮೆರಿಕಾದ ನ್ಯೂಜೆರ್ಸಿಯಲ್ಲಿ ನೆಲೆಸಿದ್ದಾರೆ. ವಿಜಯಕುಮಾರ್ ಅವರು ಊಟಿಯ ಲವ್‌ಡೇಲ್‌ನಲ್ಲಿರುವ ಲಾರೆನ್ಸ್ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು. ತಮಿಳುನಾಡಿನ ಪಿಎಸ್​ಜಿ ಕಾಲೇಜ್ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದಾರೆ (1986 ರಿಂದ 1990). ಬ್ಯುಸಿನೆಸ್ ಟುಡೇ ಮೂಲಕ ಐಟಿ/ಐಟಿಇಎಸ್ ಇಂಡಸ್ಟ್ರಿಯಲ್ಲಿ 2020 ರ ವರ್ಷದ ಅತ್ಯುತ್ತಮ ಸಿಇಒ ಎಂದು ವಿಜಯಕುಮಾರ್ ಅವರನ್ನು ಹೆಸರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts