More

    ಜೂ. ಹಾಕಿ ವಿಶ್ವಕಪ್‌ನಲ್ಲಿ ಕಂಚು ಕೈಚೆಲ್ಲಿದ ಭಾರತ ಕಿರಿಯರ ತಂಡ: ಜರ್ಮನಿ ದಾಖಲೆಯ 7ನೇ ಬಾರಿಗೆ ವಿಶ್ವಚಾಂಪಿಯನ್

    ಕೌಲಾಲಂಪುರ: ಜೂನಿಯರ್ ಪುರುಷರ ಹಾಕಿ ವಿಶ್ವಕಪ್‌ನಲ್ಲಿ 2016ರ ಬಳಿಕ ಪೋಡಿಯಂಗೇರುವ ಭಾರತದ ಕನಸು ಭಗ್ನಗೊಂಡಿದೆ. ಶನಿವಾರ ನಡೆದ ಕಂಚಿನ ಪದಕದ ಹೋರಾಟದಲ್ಲಿ ಎರಡು ಬಾರಿ ಚಾಂಪಿಯನ್ ಭಾರತ ತಂಡ 1-3 ಗೋಲುಗಳಿಂದ ಸ್ಪೇನ್‌ಗೆ ಶರಣಾಗಿದೆ. ಇದರೊಂದಿಗೆ ಭಾರತ ಸತತ 2ನೇ ಆವೃತ್ತಿಯಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.

    ಟೂರ್ನಿಯಲ್ಲಿ ಪೆನಾಲ್ಟಿ ಅವಕಾಶಗಳನ್ನು ಗೋಲಾಗಿಸುವಲ್ಲಿ ವೈಲ್ಯ ಕಂಡಿದ್ದು ಭಾರತಕ್ಕೆ ಮತ್ತೆ ಹಿನ್ನಡೆ ತಂದಿತು. ಸುನೀಲ್ ಜೊಜೊ (28ನೇ ನಿಮಿಷ) ಭಾರತದ ಪರ ಏಕೈಕ ಗೋಲು ಸಿಡಿಸಿದರು. ಸ್ಪೇನ್ ಪರವಾಗಿ ನಿಕೋಲಸ್ ಅಲ್ವರೆಜ್ (25, 51) ಎರಡು ಮತ್ತು ಪೆಟ್‌ಚೆಮ್ ಪೌ (40) ಗೋಲುಗಳಿಸಿದರು. ಲೀಗ್ ಮುಖಾಮುಖಿಯಲ್ಲೂ ಸ್ಪೇನ್ ಎದುರು 1-4ರಿಂದ ಸೋಲು ಕಂಡಿದ್ದ ಭಾರತ ಟೂರ್ನಿಯಲ್ಲಿ 2ನೇ ಬಾರಿಗೆ ನಿರಾಸೆ ಅನುಭವಿಸಿತು. 2005ರ ಬಳಿಕ ಸ್ಪೇನ್ ಮತ್ತೆ ಕಂಚಿನ ಪದಕ ಜಯಿಸಿದೆ.

    ಜರ್ಮನಿಗೆ 7ನೇ ಬಾರಿ ವಿಶ್ವಕಪ್: ಜರ್ಮನಿ ತಂಡ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು 2-1ರಿಂದ ಮಣಿಸಿ 7ನೇ ಬಾರಿಗೆ ಜೂನಿಯರ್ ಹಾಕಿ ವಿಶ್ವಕಪ್ ಜಯಿಸಿತು. ಈ ಮುನ್ನ 1982, 1985, 1989,1993, 2009, 2013ರಲ್ಲೂ ಜರ್ಮನಿ ವಿಶ್ವಕಪ್ ಗೆದ್ದುಕೊಂಡಿತ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts