More

    ಭಾರತದ ಮೊದಲ ಮಾರ್ಷಲ್ ಆರ್ಟ್ಸ್ ಸಿನಿಮಾ ‘ಲಡ್ಕಿ’

    ಬೆಂಗಳೂರು: ನಿರ್ದೇಶಕ ಆರ್‌ಜಿವಿ ಆಕ್ಷನ್ ಕಟ್ ಹೇಳಿರುವ ಭಾರತದ ಮೊದಲ ಮಾರ್ಷಲ್ ಆರ್ಟ್ಸ್ ಸಿನಿಮಾ ಎನ್ನಲಾದ ‘ಲಡ್ಕಿ – ಎಂಟರ್ ದಿ ಗರ್ಲ್ ಡ್ರಾಗನ್’ ತೆರೆಗೆ ಬರಲು ರೆಡಿಯಾಗಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲೂ ಚಿತ್ರ ರಿಲೀಸ್ ಆಗುತ್ತಿದೆ. ಹೀಗಾಗಿಯೇ ನಾಯಕಿ ಪೂಜಾ ಭಾಲೇಕರ್ ಜತೆ ಆರ್‌ಜಿವಿ ಇತ್ತೀಚೆಗಷ್ಟೇ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು.

    ಇದನ್ನೂ ಓದಿ: ಮದ್ವೆನೇ ಆಗಿಲ್ಲ, ಡಿವೋರ್ಸ್​ ಮಾತೆಲ್ಲಿ? ಎಂದಿದ್ದ ಪವಿತ್ರಾ ಮಾತಿಗೆ ಕೊನೆಗೂ ಮೌನ ಮುರಿದ ಸುಚೇಂದ್ರಪ್ರಸಾದ್!

    2020ರ ಮೇ ತಿಂಗಳಲ್ಲಿ ಭಾರತ – ಚೀನಾ ಗಡಿಯ ಗಲ್ವಾನ್‌ನಲ್ಲಿ ನಡೆದ ಘಟನೆಗೂ ಮುನ್ನವೇ ಈ ‘ಲಡ್ಕಿ’ ಪ್ರಾರಂಭವಾಗಿತ್ತಂತೆ. ‘2019ರಲ್ಲಿ ನಮ್ಮ ಸಿನಿಮಾ ಪ್ರಾರಂಭವಾಗಿದ್ದು, ಆಗಲೇ ಚೀನಾದ ನಿರ್ಮಾಣ ಸಂಸ್ಥೆ ಜತೆ ಸೇರಿ ಈ ಚಿತ್ರ ಪ್ರಾರಂಭಿಸಿದ್ದೆ. ಗಲ್ವಾನ್‌ನಲ್ಲಿ ನಡೆದ ಘಟನೆ ರಾಜಕೀಯ ಪ್ರೇರಿತ. ಅದರಿಂದಾಗಿ ಸಿನಿಮಾಗೆ ಏನೂ ಸಮಸ್ಯೆ ಆಗಲಿಲ್ಲ. ಅಲ್ಲಿ ಚಿತ್ರೀಕರಣದ ಸಮಯದಲ್ಲೂ ಏನೂ ತೊಂದರೆ ಆಗಲಿಲ್ಲ. ಚೀನಾದಲ್ಲಿ 40 ಸಾವಿರ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಲಿದೆ. ಭಾರತೀಯ ಚಿತ್ರವೊಂದು ಇಷ್ಟು ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿರುವುದು ಇದೇ ಮೊದಲು’ ಎಂದು ಹೇಳಿಕೊಳ್ಳುತ್ತಾರೆ.

    ಈಗಾಗಲೇ ಮಾರ್ಷಲ್ ಆರ್ಟ್ಸ್ ಕುರಿತ ಹಲವು ಚಿತ್ರಗಳು ಬಂದಿದ್ದರೂ, ‘ಇದೇ ಮೊದಲ ಬಾರಿಗೆ ಮಾರ್ಷಲ್ ಆರ್ಟಿಸ್ಟ್ ಒಬ್ಬರು ಮುಖ್ಯಭೂಮಿಕೆಯಲ್ಲಿ ನಟಿಸಿರುವ ಕಾರಣ ಈ ಚಿತ್ರವೇ ಭಾರತದ ಮೊದಲ ಮಾರ್ಷಲ್ ಆರ್ಟ್ಸ್ ಸಿನಿಮಾ. ಡೂಪ್, ಗ್ರಾಫಿಕ್ಸ್ ಅಥವಾ ಬಾಡಿ ಡಲ್ ಬಳಸಿಲ್ಲ. ಬ್ರೂಸ್‌ಲೀ ದ್ರೋಣಾಚಾರ್ಯ ಆದರೆ ಪೂಜಾ ಪಾತ್ರ ಏಕಲವ್ಯ. ಪುರುಷರು ಏಟು ತಿನ್ನುವುದನ್ನು ನೋಡಲು ಮಹಿಳೆಯರು ಇಷ್ಟಪಡುತ್ತಾರೆ. ಹೀಗಾಗಿ ಈ ಚಿತ್ರ ಮಹಿಳೆಯರಿಗೇ ಹೆಚ್ಚು ಇಷ್ಟವಾಗಲಿದೆ’ ಎನ್ನುತ್ತಾರೆ ಆರ್‌ಜಿವಿ.

    ಇದನ್ನೂ ಓದಿ: ಮಲೈಕಾ ಬಟ್ಟೆ ನೋಡಿ ಗಾಬರಿಯಾದ ನೆಟ್ಟಿಗರು ಹೇಳಿದ್ದು ಹೀಗೆ?

    ಇದೇ ಸಮಯದಲ್ಲಿ ಮಾತನಾಡಿದ ಚಿತ್ರದ ನಾಯಕಿ ಪೂಜಾ ಭಾಲೇಕರ್, ‘ಈ ಚಿತ್ರದಲ್ಲಿ ನನ್ನ ಪಾತ್ರಕ್ಕೆ ಕೇವಲ ಎರಡು, ಮೂರು ವರ್ಷ ಸಿದ್ಧತೆ ನಡೆಸಿದಂತೆ ಅನ್ನಿಸುತ್ತಿಲ್ಲ. ಬದಲಾಗಿ ನನ್ನ ಸಂಪೂರ್ಣ ಜೀವನ ಈ ಚಿತ್ರಕ್ಕಾಗಿ ಸಿದ್ಧತೆ ಮಾಡಿಕೊಂಡೆ ಅಂತನ್ನಿಸುತ್ತೆ. ನಾನು ಹುಟ್ಟಿದ್ದೇ ಈ ಸಿನಿಮಾಗಾಗಿ ಎನ್ನಬಲ್ಲೆ. ಇದು ನನ್ನ ಮೊದಲ ಚಿತ್ರ. ಆರ್‌ಜಿವಿ ಸರ್ ಜತೆ ಸಿನಿಮಾ ಮಾಡಿದ್ದು, ಇಷ್ಟು ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿರುವುದು, ಕನಸು ನನಸಾಗುತ್ತಿದೆ ಅಂತನ್ನಿಸುತ್ತಿದೆ. ಸದ್ಯಕ್ಕೆ ಇನ್ನೂ ಹೆಚ್ಚು ಆಕ್ಷನ್ ಚಿತ್ರಗಳನ್ನು ಮಾಡಲು ಇಷ್ಟಪಡುವೆ’ ಎಂದರು. ಅಂದಹಾಗೆ ಇದೇ ಜುಲೈ 15ರಂದು ‘ಲಡ್ಕೀ’ ಕನ್ನಡದಲ್ಲಿ ‘ಹುಡುಗಿ’ಯಾಗಿ ರಿಲೀಸ್ ಆಗಲಿದೆ.

    ಕಿಚ್ಚ ಸುದೀಪ್​ಗೆ ಅವಹೇಳನ; ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಪೊಲೀಸರಿಗೆ ದೂರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts