More

    ಭಾರತದಲ್ಲಿನ ಕರೊನಾ ಪರಿಸ್ಥಿತಿ ತೀವ್ರ ಕಳವಳಕಾರಿಯಾಗಿದೆ: ಡಬ್ಲ್ಯುಎಚ್​​ಒ ಮುಖ್ಯಸ್ಥ

    ನವದೆಹಲಿ: ಭಾರತದಲ್ಲಿನ ಕರೊನಾ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​​ಒ)ಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಮೊದಲನೇ ಅಲೆಗಿಂತ ಎರಡನೇ ಅಲೆ ತುಂಬಾ ಮಾರಣಾಂತಿಕವಾಗಿರಲಿದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

    ಭಾರತದಲ್ಲಿ ಕರೊನಾ ಪ್ರಕರಣಗಳ ಇಳಿಕೆಯ ಕ್ರಮಕ್ಕೆ ಡಬ್ಲ್ಯುಎಚ್​ಒ ಸ್ಪಂದಿಸುತ್ತಿದೆ. ಆಕ್ಸಿಜನ್​ ಕಾನ್ಸನ್​ಟ್ರೇಟರ್ಸ್​, ಮೊಬೈಲ್​ ಫೀಲ್ಡ್​ ಆಸ್ಪತ್ರೆಗಳ ಟೆಂಟ್ಸ್​, ಮಾಸ್ಕ್​ ಮತ್ತು ಇತರೆ ವೈದ್ಯಕೀಯ ಅಗತ್ಯ ಸಾಮಾಗ್ರಿಗಳನ್ನು ಪೂರೈಸಿದ್ದೇವೆ ಎಂದು ತಿಳಿಸಿದ್ದಾರೆ.

    ಭಾರತದ ಅನೇಕ ರಾಜ್ಯಗಳಲ್ಲಿ ಕೋವಿಡ್​ ಸಂಖ್ಯೆಗಳ ಏರಿಕೆ ಮತ್ತು ಸಾವಿನ ಸಂಖ್ಯೆ ಇನ್ನು ಮುಂದುವರಿದಿದ್ದು, ಇಡೀ ವಿಶ್ವದಲ್ಲಿ ಭಾರತ ತೀವ್ರ ಕಳವಳಕಾರಿಯಾಗಿಯೇ ಮುಂದುವರಿದಿದೆ ಎಂದರು. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಭಾರತವನ್ನು ಬೆಂಬಲಿಸುತ್ತಿರುವ ಪಾಲುದಾರರಿಗೆ ಡಬ್ಲ್ಯುಎಚ್​ಒ ಮುಖ್ಯಸ್ಥರು ಧನ್ಯವಾದ ಹೇಳಿದರು.

    ಕರೊನಾ ಎರಡನೇ ಅಲೆಯಿಂದ ತತ್ತಿರಿಸಿರುವ ಭಾರತಕ್ಕೆ ಅನೇಕ ರಾಷ್ಟ್ರಗಳು ನೆರವಿನ ಹಸ್ತ ಚಾಚಿದೆ. ಈ ಮಧ್ಯೆ ನಿನ್ನೆ ಒಂದೇ ದಿನ ಮತ್ತೆ 3,43,144 ಕರೊನಾ ಪ್ರಕರಣಗಳು ದೇಶದಲ್ಲಿ ಕಂಡುಬಂದಿದೆ. ಇದರೊಂದಿಗೆ ಒಟ್ಟಾರೆ ಕೋವಿಡ್​ ಪ್ರಕರಣಗಳ ಸಂಖ್ಯೆ 2,40,46,809 ಕ್ಕೇರಿದೆ. ಇದುವರೆಗೂ ದೇಶದಲ್ಲಿ 2,62,317 ಮಂದಿ ಕರೊನಾಗೆ ಬಲಿಯಾಗಿದ್ದಾರೆ. (ಏಜೆನ್ಸೀಸ್​)

    ಸಿಎಂ ಜಗನ್​ ಸರ್ಕಾರದ ವಿರುದ್ಧ ಗಂಭೀರ ಆರೋಪ: ವೈಎಸ್​ಆರ್​ ಕಾಂಗ್ರೆಸ್​ ಸಂಸದನ ಬಂಧನ!

    ಆಯ್ಕೆ ವಿವಾದದ ಬೆನ್ನಲ್ಲೇ ಭಾರತ ಮಹಿಳಾ ಕ್ರಿಕೆಟ್​ ತಂಡಕ್ಕೆ ಶಿಖಾ, ಶೆಫಾಲಿ ವಾಪಸ್

    ಇಲ್ಲಿ ಕಳ್ಳರು ಶವಗಳನ್ನೂ ಬಿಡುತ್ತಿಲ್ಲ; ಕೋವಿಡ್ ಸೋಂಕಿನಿಂದ ಮೃತಪಟ್ಟವರ ಚಿನ್ನಾಭರಣ ಕಳವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts