More

    ದೇಶದಲ್ಲಿ 1 ಕೋಟಿ ಗಡಿ ದಾಟಿದ ಕರೊನಾ ಸೋಂಕಿತರ ಸಂಖ್ಯೆ: ಚೇತರಿಕೆ ಪ್ರಮಾಣವೂ ಏರಿಕೆ!

    ನವದಹಲಿ: ದೇಶದಲ್ಲಿ ಮಹಾಮಾರಿ ಕರೊನಾ ಸೋಂಕಿತರ ಸಂಖ್ಯೆ ಒಂದು ಕೋಟಿ ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ 25,152 ಪಾಸಿಟಿವ್​ ಪ್ರಕರಣಗಳು ವರದಿಯಾಗುವ ಮೂಲಕ ಒಟ್ಟು ಕರೊನಾ ಸೋಂಕಿತರ ಸಂಖ್ಯೆ 1 ಕೋಟಿ ಗಡಿ ದಾಟಿದ್ದು, ಅಮೆರಿಕ ನಂತರ ಭಾರತ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ.

    ಜನವರಿ 30ರಂದು ಕೇರಳದಲ್ಲಿ ಮೊದಲ ಬಾರಿಗೆ ಕರೊನಾ ಕಾಣಿಸಿಕೊಂಡಾಗಿನಿಂದ ಇಲ್ಲಿಯವರೆಗೂ 95.5 ಲಕ್ಷ ಮಂದಿ ಗುಣಮುಖರಾಗಿದ್ದು, 1.45 ಲಕ್ಷ ಮಂದಿ ಈವರೆಗೂ ಕರೊನಾಗೆ ಬಲಿಯಾಗಿದ್ದಾರೆ.

    ಇದನ್ನೂ ಓದಿ: Web Exclusive | ಅಂಗವಿಕಲರು-ವೃದ್ಧರಿಗಿಲ್ಲ ಮತಹಕ್ಕು; ಗ್ರಾಪಂ ಮತದಾನದಿಂದ ವಂಚಿತರು…

    ಮೇ ತಿಂಗಳಿಂದ ಕರೊನಾ ಚೇತರಿಕೆ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಮೇನಲ್ಲಿ 50 ಸಾವಿರ ಇದ್ದ ಚೇತರಿಕೆ ಸಂಖ್ಯೆ ಡಿಸೆಂಬರ್​ ಮಧ್ಯಕ್ಕೆ 95 ಲಕ್ಷಕ್ಕೆ ತಲುಪಿದೆ ಎಂದು ಸರ್ಕಾರ ಇಂದು ಬೆಳಗ್ಗೆ ಮಾಹಿತಿ ನೀಡಿದೆ. ಚೇತರಿಕೆ ಪ್ರಮಾಣ ಸಕ್ರೀಯ ಪ್ರಕರಣಗಳಿಗಿಂತಲೂ 30 ಪಟ್ಟು ಹೆಚ್ಚಿದೆ ಎಂದು ತಿಳಿಸಿದೆ.

    ಸದ್ಯ ಚೇತರಿಕೆ ಪ್ರಮಾಣ ಶೇ. 95 ರಷ್ಟಿದ್ದು, ಇದು ವಿಶ್ವದಲ್ಲೇ ಹೆಚ್ಚಿನ ಪ್ರಮಾಣದ್ದಾಗಿದೆ. ಕಳೆದ 24 ಗಂಟೆಯಲ್ಲಿ 25,152 ಕರೊನಾ ಪ್ರಕರಣಗಳು ವರದಿಯಾಗಿದೆ. ಈ ಮೂಲಕ ದೇಶದ ಕರೊನಾ ಸೋಂಕಿತರ ಸಂಖ್ಯೆ 1,00,04,599ಕ್ಕೇರಿದೆ. 347 ಸಾವಿನ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 1,45,136ಕ್ಕೇರಿದೆ. (ಏಜೆನ್ಸೀಸ್​)

    ಇದನ್ನೂ ಓದಿ: ಮುಂದಿನ ಚುನಾವಣೆಗೆ ಚಾಮರಾಜಪೇಟೆಯಿಂದ ಸಿದ್ದು ಸ್ಪರ್ಧೆ? ಚಾ.ಪೇಟೆಯೇ ಯಾಕೆ?

    PHOTOS| ವಿಶ್ವದ ಒಂಟಿ ಮನೆಯ ರಹಸ್ಯ ಕೇಳಿದ್ರೆ ನಿಮಗೆಲ್ಲ ಅಚ್ಚರಿಯಾಗೋದು ಗ್ಯಾರೆಂಟಿ..!

    ಮದುವೆ ದಿನವೇ ಆತ್ಮಹತ್ಯೆಗೆ ಶರಣಾದ ಜೋಡಿ: ಹೊಸಬಾಳು ಆರಂಭಿಸುವ ಮುನ್ನವೇ ದುರಂತ ಸಾವು!

    ಅಮೆರಿಕದಲ್ಲಿ ಹಿಮಪಾತ ಹೊಡೆತ!; ಲಕ್ಷಾಂತರ ಮನೆಗಳ ವಿದ್ಯುತ್ ಸಂಪರ್ಕ ಕಡಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts