More

    ಭಾರತೀಯ ಬಾಕ್ಸರ್‌ಗಳಿದ್ದ ವಿಮಾನ, ದುಬೈನಲ್ಲಿ ಟಚ್‌ಡೌನ್ ಮಾಡಲು ಎರಡು ತಾಸು ವಿಳಂಬವಾಗಿದ್ಯಾಕೆ ?

    ನವದೆಹಲಿ: ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುತ್ತಿರುವ 6 ಬಾರಿಯ ಚಾಂಪಿಯನ್ ಎಂಸಿ ಮೇರಿ ಕೋಮ್ (51 ಕೆಜಿ), ಅಮಿತ್ ಪಂಗಲ್ (52 ಕೆಜಿ) ಒಳಗೊಂಡ ಭಾರತ ಬಾಕ್ಸಿಂಗ್ ತಂಡ ಶನಿವಾರ ದುಬೈಗೆ ಬಂದಿಳಿಯಿತು. ಕೆಲವು ಆಡಳಿತಾತ್ಮಕ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ವಿಮಾನ ಕೆಳಗಿಳಿಯುವುದು ಎರಡು ಗಂಟೆ ತಡವಾಯಿತು. ಟೂರ್ನಿ ಸೋಮವಾರ ಆರಂಭವಾಗಲಿದ್ದು, ಭಾನುವಾರದಂದು ಭಾರತ ತಂಡ ದುಬೈ ತಲುಪಬೇಕಿತ್ತು. ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಈ ಟೂರ್ನಿಯೂ ಭಾರತದ ಪಾಲಿಗೆ ಪ್ರಮುಖವಾಗಿದೆ.

    ಇದನ್ನೂ ಓದಿ: ಕ್ರಿಕೆಟ್​ ಮಂಡಳಿ ವಿರುದ್ಧವೇ ಮುನಿಸಿಕೊಂಡ ಶ್ರೀಲಂಕಾ ಕ್ರಿಕೆಟಿಗರು

    ‘ಕೆಲವು ಆಡಳಿತಾತ್ಮಕ ಪ್ರಕ್ರಿಯೆಗಳು ತಡವಾಯಿತು. ಬಳಿಕ ಯುಎಇಯಲ್ಲಿರುವ ಭಾರತದ ರಾಯಭಾರಿ ಕಚೇರಿ ಮಧ್ಯಪ್ರವೇಶಿಸಿದ ಬಳಿಕ ಸಮಸ್ಯೆಗೆ ಇತ್ಯರ್ಥಗೊಂಡಿತು. ದುಬೈ ತಲುಪಿದ ಬಳಿಕ ಬಾಕ್ಸರ್‌ಗಳು ಹೋಟೆಲ್‌ಗೆ ತೆರಳಿದರು’ ಎಂದು ಮೂಲಗಳು ತಿಳಿಸಿವೆ.ಕೋವಿಡ್ ಹಿನ್ನೆಲೆಯಲ್ಲಿ ಭಾರತದ ವಿಮಾನಗಳನ್ನು ಯುಎಇಯಲ್ಲಿ ನಿಷೇಧಿಸಲಾಗಿದೆ. ಆದ್ದರಿಂದ, ಭಾರತೀಯ ಬಾಕ್ಸರ್‌ಗಳನ್ನು ಹೊತ್ತಿದ್ದ ವಿಮಾನಕ್ಕೂ ಅನುಮತಿ ಇರಲಿಲ್ಲ ಎನ್ನಲಾಗಿದೆ.

    ಇದನ್ನೂ ಓದಿ: ಮಹಿಳಾ ತಂಡದ ಕೋಚ್​ ಹುದ್ದೆಯಿಂದ ರಾಮನ್​ ಪದಚ್ಯುತಿಗೆ ಬೇಸರ ಹೊರಹಾಕಿದ ಸೌರವ್​ ಗಂಗೂಲಿ, 

    ಈ ಸಮಸ್ಯೆಯನ್ನು ಪರಿಹರಿಸಲು ಶ್ರಮಿಸಿದ ಭಾರತದ ರಾಯಭಾರ ಕಚೇರಿ, ಕೊನೆಗೂ ವಿಮಾನ ಟಚ್‌ಡೌನ್ ಆಗುವಂತೆ ಮಾಡಿದರು ಎಂದು ಭಾರತೀಯ ಬಾಕ್ಸಿಂಗ್ ಫೆಡರೇಷನ್ ತಿಳಿಸಿದೆ. ಹೋಟೆಲ್ ತಲುಪಿದ ಬಳಿಕ ಭಾರತೀಯ ಬಾಕ್ಸರ್‌ಗಳೆಲ್ಲರೂ ಎರಡು ಸುತ್ತಿನ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಗಾದರು.

    ಎಫ್ಐಎಚ್ ಅಧ್ಯಕ್ಷರಾಗಿ ನರೀಂದರ್ ಬಾತ್ರಾ ಪುನರಾಯ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts