ಎಫ್ಐಎಚ್ ಅಧ್ಯಕ್ಷರಾಗಿ ನರೀಂದರ್ ಬಾತ್ರಾ ಪುನರಾಯ್ಕೆ

ನವದೆಹಲಿ: ಭಾರತದ ನರೀಂದರ್ ಬಾತ್ರಾ, ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್‌ಗೆ (ಎಫ್ಐಎಚ್) ಸತತ 2ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶನಿವಾರ ವರ್ಚುವಲ್ ಮೂಲಕ ನಡೆದ ಎಫ್ಐಎಚ್ ನ 47ನೇ ಸಭೆಯಲ್ಲಿ ನರೀಂದರ್ ಬಾತ್ರಾ ಕೇವಲ 2 ಮತಗಳಿಂದ ಬೆಲ್ಜಿಯಂನ ಮಾರ್ಕ್ ಕೌಡ್ರೊನ್ ಅವರನ್ನು ಸೋಲಿಸಿದರು. ನರೀಂದರ್ ಬಾತ್ರಾ, ಭಾರತೀಯ ಒಲಿಂಪಿಕ್ ಸಂಸ್ಥೆಯ (ಐಒಎ) ಹಾಲಿ ಅಧ್ಯಕ್ಷರಾಗಿದ್ದು, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಸದಸ್ಯರಾಗಿದ್ದಾರೆ. ಬೆಲ್ಜಿಯಂ ಹಾಕಿ ಫೆಡರೇಷನ್‌ನ ಮುಖ್ಯಸ್ಥರೂ ಆಗಿರುವ ಮಾರ್ಕ್ ಕೌಡ್ರೊನ್ ಬಾತ್ರಾಗೆ ಪ್ರಬಲ ಪೈಪೋಟಿ ನೀಡಿದ್ದರು. … Continue reading ಎಫ್ಐಎಚ್ ಅಧ್ಯಕ್ಷರಾಗಿ ನರೀಂದರ್ ಬಾತ್ರಾ ಪುನರಾಯ್ಕೆ