More

    ಭಾರತದ ಮಹಿಳೆಯರಿಗೆ ವೀರೋಚಿತ ಸೋಲು: ಒಲಿಂಪಿಕ್ಸ್ ಅರ್ಹತೆಗೆ ಹಿನ್ನಡೆ

    ರಾಂಚಿ: ಆರಂಭಿಕ ಮುನ್ನಡೆ ಕಾಯ್ದುಕೊಳ್ಳುವಲ್ಲಿ ವಿಲವಾದ ಭಾರತ ಮಹಿಳಾ ತಂಡ ಎ್ಐಎಚ್ ಹಾಕಿ ಒಲಿಂಪಿಕ್ಸ್ ಅರ್ಹತಾ ಟೂರ್ನಿಯ ಸೆಮಿೈನಲ್‌ನಲ್ಲಿ ಜರ್ಮನಿ ಎದುರು 3-5ರಿಂದ ಪೆನಾಲ್ಟಿ ಶೂಟೌಟ್‌ನ ಸಡನ್ ಡೆತ್‌ನಲ್ಲಿ ವೀರೋಚಿತ ಸೋಲು ಕಂಡಿದೆ. ಸವಿತಾ ಪೂನಿಯಾ ಪಡೆ ಇನ್ನು ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆ ಒಲಿಸಿಕೊಳ್ಳಲು 3ನೇ ಸ್ಥಾನ ಪಡೆಯುವುದು ಅನಿವಾರ‌್ಯವೆನಿಸಿದ್ದು, ಇದಕ್ಕಾಗಿ ಶುಕ್ರವಾರ ಜಪಾನ್ ವಿರುದ್ಧ ಸೆಣಸಲಿದೆ. ಒಲಿಂಪಿಕ್ಸ್ ಅರ್ಹತೆ ಪಡೆಯಲು ಭಾರತಕ್ಕೆ ಕೊನೇ ಅವಕಾಶ ಎನಿಸಿದೆ.

    ಗುರುವಾರ ನಡೆದ ಪಂದ್ಯದಲ್ಲಿ ಆರಂಭಿಕ ಮುನ್ನಡೆ ಸಾಧಿಸಿದ ಭಾರತ ಪರ ದೀಪಿಕಾ (15) ಮೊದಲ ಗೋಲು ಸಿಡಿಸಿದರು. ಬಳಿಕ ತಿರುಗೇಟು ನೀಡಿದ ಜರ್ಮನಿಗೆ ಸ್ಟೇಪ್‌ನ ಹೋರ್ಸ್ಟ್ ಚಾರ್ಲೋಟ್ (27, 57) ಸಮಬಲ ತಂದರು. ಮೊದಲಾರ್ಧದ ಮುಕ್ತಾಯಕ್ಕೆ ಎರಡು ತಂಡಗಳು 1-1 ಸಮಬಲ ಪ್ರದರ್ಶಿಸಿದವು. ಪಂದ್ಯದ ಮುಕ್ತಾಯಕ್ಕೆ 3 ನಿಮಿಷ ಬಾಕಿಯಿರುವಾಗ ಮತ್ತೊಂದು ಗೋಲು ಸಿಡಿಸಿದ ಜರ್ಮನಿ ಮುನ್ನಡೆ ಸಾಧಿಸಿತು.  59ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿಯಲ್ಲಿ ಇಶಿಕಾ ಚೌಧರಿ ಗೋಲು ಸಿಡಿಸಿದರು. ಪಂದ್ಯದ ನಿಗದಿತ ಸಮಯದಲ್ಲಿ ಉಭಯ ತಂಡಗಳೂ 2-2ರಿಂದ ಸಮಬಲ ಸಾಧಿಸಿದವು. ಮೊದಲ ಸೆಮೀಸ್‌ನಲ್ಲಿ ಜಪಾನ್ ತಂಡವನ್ನು 1-2 ರಿಂದ ಮಣಿಸಿದ ಅಮೆರಿಕ ಒಲಿಂಪಿಕ್ಸ್ ಅರ್ಹತೆ ಪಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts