More

    ಬಲಿಷ್ಠವಾಗಿದೆ ಭಾರತೀಯ ಮಹಿಳಾ ಕ್ರಿಕೆಟ್ ಭವಿಷ್ಯ! ಯಾಕೆ ಗೊತ್ತೇ?

    ಬೆಂಗಳೂರು: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ದಂಪತಿ ಕಳೆದ ಸೋಮವಾರ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಭಾರತೀಯ ಮಹಿಳಾ ಕ್ರಿಕೆಟ್‌ನ ಭವಿಷ್ಯ ಬಲಿಷ್ಠವಾಗಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದಕ್ಕೆ ಕಾರಣವೇನೆಂದು ಗೊತ್ತೇ?

    ಭಾರತ ತಂಡದ ಹಾಲಿ ಕ್ರಿಕೆಟಿಗರು ಮತ್ತು ಇತ್ತೀಚೆಗಿನ ವರ್ಷಗಳಲ್ಲಿ ನಿವೃತ್ತಿ ಹೊಂದಿರುವ ಅಥವಾ ತಂಡದಿಂದ ಹೊರಗುಳಿದಿರುವ ಬಹುತೇಕ ಆಟಗಾರರು ಹೆಣ್ಣು ಮಗುವಿನ ಸೌಭಾಗ್ಯವನ್ನೇ ಪಡೆದಿದ್ದಾರೆ. ಇದರಿಂದಾಗಿ ಇವರೆಲ್ಲ ಕ್ರಿಕೆಟಿಗರ ಪುತ್ರಿಯರು ಕ್ರಿಕೆಟಿಗರೇ ಆದರೆ, ಭಾರತದ ಪುರುಷರ ಕ್ರಿಕೆಟ್‌ಗಿಂತ ಮಹಿಳಾ ಕ್ರಿಕೆಟ್ ತಂಡ ಬಲಿಷ್ಠವಾಗಲಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

    ಇದನ್ನೂ ಓದಿ: ಕೇಂದ್ರ ಸಚಿವರ ಕ್ರಿಕೆಟ್ ಅಜ್ಞಾನಕ್ಕೆ ಎರಡೇ ಪದಗಳಲ್ಲಿ ಟಾಂಗ್ ಕೊಟ್ಟ ಹನುಮ ವಿಹಾರಿ!

    ಎಂಎಸ್ ಧೋನಿ, ಸುರೇಶ್ ರೈನಾ, ಗೌತಮ್ ಗಂಭೀರ್, ರೋಹಿತ್ ಶರ್ಮ, ಮೊಹಮದ್ ಶಮಿ, ಆರ್. ಅಶ್ವಿನ್ (ಇಬ್ಬರು), ರವೀಂದ್ರ ಜಡೇಜಾ, ಅಜಿಂಕ್ಯ ರಹಾನೆ, ವೃದ್ಧಿಮಾನ್ ಸಾಹ, ಚೇತೇಶ್ವರ ಪೂಜಾರ, ಹರ್ಭಜನ್ ಸಿಂಗ್, ಉಮೇಶ್ ಯಾದವ್, ಟಿ. ನಟರಾಜನ್ ಮತ್ತು ಎಸ್. ಶ್ರೀಶಾಂತ್ ಹೆಣ್ಣು ಮಗುವಿನ ತಂದೆಯಾಗಿದ್ದಾರೆ.

    ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ ಕೂಡ ಬುಧವಾರ ರಾತ್ರಿ ಈ ಬಗ್ಗೆ ಟ್ವೀಟಿಸಿದ್ದು, ಎಂಎಸ್ ಧೋನಿ ಪುತ್ರಿ ಝೀವಾ ಖಂಡಿತವಾಗಿಯೂ ಈ ಮಹಿಳಾ ಕ್ರಿಕೆಟ್ ತಂಡಕ್ಕೆ ನಾಯಕಿಯಾಗಿರಬಹುದೇ ಎಂದು ಕ್ರಿಕೆಟ್ ಪ್ರೇಮಿಗಳನ್ನು ಪ್ರಶ್ನಿಸಿದ್ದಾರೆ.

    ಈ ನಡುವೆ ಕೆಲವರು, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಗಂಡು ಮಗುವಿನ ತಂದೆಯಾಗಿರುವ ಹಿನ್ನೆಲೆಯಲ್ಲಿ ಅವರ ಕಾಲೆಳೆದಿದ್ದಾರೆ. ಹಾರ್ದಿಕ್ ಪಾಂಡ್ಯ ಪುತ್ರ ಅಗಸ್ತ್ಯ ಈಗ ಜಗತ್ತಿನ ಅತ್ಯಂತ ಖುಷಿಯ ಗಂಡು ಮಗುವಾಗಿರಬಹುದು ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.

    ಮಗುವಿನ ಫೋಟೋ ತೆಗೆಯದಂತೆ ವಿರುಷ್ಕಾ ದಂಪತಿ ಮನವಿ ಮಾಡಿದ್ಯಾಕೆ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts