ಅಹರ್ನಿಶಿ ಟೆಸ್ಟ್​ ಪಂದ್ಯವಾಡಲಿದೆ ಭಾರತ ಮಹಿಳಾ ತಂಡ, ಮೊದಲ ಎದುರಾಳಿ ಯಾರು ಗೊತ್ತ?

blank

ನವದೆಹಲಿ: ಭಾರತ ಮಹಿಳಾ ತಂಡ ಮುಂಬರುವ ಆಸ್ಟ್ರೆಲಿಯಾ ಪ್ರವಾಸದಲ್ಲಿ ಸೆಪ್ಟೆಂಬರ್​ 30 ರಿಂದ ಅಕ್ಟೋಬರ್​ 3ರವರೆಗೆ ಚೊಚ್ಚಲ ಅಹರ್ನಿಶಿ ಟೆಸ್ಟ್​ ಪಂದ್ಯವನ್ನಾಡಲಿದೆ. ಪರ್ತ್​ನಲ್ಲಿ ಈ ಪಂದ್ಯ ನಡೆಯಲಿದೆ. ಭಾರತ ಮಹಿಳಾ ತಂಡ ಇದುವರೆಗೂ ಪಿಂಕ್​ ಬಾಲ್​ ಟೆಸ್ಟ್​ ಪಂದ್ಯವನ್ನಾಡಿಲ್ಲ. ಮಹಿಳಾ ಕ್ರಿಕೆಟ್​ ಅಭಿವೃದ್ಧಿಗೆ ಮಂಡಳಿ ಎಲ್ಲ ರೀತಿಯ ಸಹಾಕರ ನೀಡಲಿದೆ. ಭಾರತ ಮಹಿಳಾ ತಂಡ ಮೊಟ್ಟ ಮೊದಲ ಪಿಂಕ್​ ಬಾಲ್​ ಟೆಸ್ಟ್​ ಪಂದ್ಯವನ್ನಾಡಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಷಾ ಸ್ಪಷ್ಟ ಪಡಿಸಿದ್ದಾರೆ.

ಇದನ್ನೂ ಓದಿ: ಮುಂಬೈ ಫಸ್ಟ್ ಸ್ಟಾಪ್ ಎಂದು ಚೆನ್ನೈನಿಂದ ಹೊರಟ ಟೀಮ್ ಹೇಳಿದ್ಯಾಕೆ..!, 

ಭಾರತ ಮಹಿಳಾ ತಂಡ 7 ವರ್ಷಗಳ ಬಳಿಕ ಮುಂದಿನ ತಿಂಗಳು ಟೆಸ್ಟ್​ ಪಂದ್ಯವನ್ನಾಡಲಿದೆ. ಜೂನ್​ 16 ರಿಂದ ಇಂಗ್ಲೆಂಡ್​ ಎದುರು ಟೆಸ್ಟ್​ ಪಂದ್ಯನ್ನಾಡಲಿದ್ದು, ಇದಾದ ಬಳಿಕ ಭಾರತ ತಂಡ ಆಸ್ಟ್ರೆಲಿಯಾ ಪ್ರವಾಸದಲ್ಲಿ  ಅಹರ್ನಿಶಿ ಟೆಸ್ಟ್​ ಪಂದ್ಯವನ್ನಾಡಲಿದೆ. ಆಸ್ಟ್ರೆಲಿಯಾ ಪ್ರವಾಸದಲ್ಲಿ ಭಾರತ 3 ಏಕದಿನ (ಸೆ.19-24) ಹಾಗೂ ಮೂರು ಟಿ20 (ಅ.7-11) ಸರಣಿಗಳನ್ನು ಆಡಲಿದ್ದು, ಈ ಎರಡು ಸರಣಿಗಳ ನಡುವೆ  ಅಹರ್ನಿಶಿ ಟೆಸ್ಟ್​ ಪಂದ್ಯ ನಡೆಯಲಿದೆ.

ಇದನ್ನೂ ಓದಿ: ಬ್ರಿಟನ್​ಗೆ ತೆರಳಲು ಮಗನಿಗೆ ವೀಸಾ ಕೇಳಿದ ಸ್ಟಾರ್​ ಟೆನಿಸ್​ ಪಟು ಸಾನಿಯಾ ಮಿರ್ಜಾ, 

ಭಾರತ ಮಹಿಳಾ ತಂಡ 2006ರಲ್ಲಿ ಕಡೇ ಬಾರಿಗೆ ಆಸ್ಟ್ರೆಲಿಯಾ ಎದುರು ಟೆಸ್ಟ್​ ಪಂದ್ಯವನ್ನಾಡಿತ್ತು. ಮಹಿಳಾ ಟೆಸ್ಟ್​ ಇತಿಹಾಸದಲ್ಲಿ ಎರಡನೇ  ಅಹರ್ನಿಶಿ ಟೆಸ್ಟ್​ ಪಂದ್ಯ ಇದಾಗಲಿದೆ. 2017ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೆಲಿಯಾ ಹಾಗೂ ಇಂಗ್ಲೆಂಡ್​ ತಂಡಗಳು ಮೊದಲ  ಅಹರ್ನಿಶಿ ಪಂದ್ಯವನ್ನಾಡಿದ್ದವು. ದೇಶೀಯ ಕ್ರಿಕೆಟ್​ನಲ್ಲಿ ಹೆಚ್ಚು ರೆಡ್​ ಬಾಲ್​ನಲ್ಲಿ ಆಡದ ಭಾರತ ಮಹಿಳಾ ತಂಡಕ್ಕೆ ಮುಂಬರುವ ಇಂಗ್ಲೆಂಡ್​ ಹಾಗೂ ಆಸ್ಟ್ರೆಲಿಯ ವಿರುದ್ಧದ ಟೆಸ್ಟ್​ ಪಂದ್ಯಗಳು ದೊಡ್ಡ ಸವಾಲಾಗಿ ಪರಿಣಮಿಸಿವೆ. ಮಹಿಳಾ ಆಶಸ್​ನಲ್ಲಿ ಎದುರಾಗುವ ಆಸೀಸ್​ ಹಾಗೂ ಇಂಗ್ಲೆಂಡ್​ ತಂಡಗಳು ಮಾತ್ರ ಸಾಮಾನ್ಯವಾಗಿ ಟೆಸ್ಟ್​ ಪಂದ್ಯಗಳನ್ನಾಡುತ್ತಾ ಬಂದಿವೆ.

ಭಾರತ ತಂಡಕ್ಕೆ ಕೋಚ್ ಆಗಲಿದ್ದಾರೆಯೇ ಕನ್ನಡಿಗ ರಾಹುಲ್?

Share This Article

ಒಂದು ತಿಂಗಳು ನಿಮ್ಮ ನಾಲಿಗೆಯನ್ನು ಸ್ವಚ್ಛಗೊಳಿಸದಿದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಶಾಕಿಂಗ್​ ಸಂಗತಿ… Tongue

Tongue : ನಾಲಿಗೆ ನಮ್ಮ ದೇಹದ ಪ್ರಮುಖ ಅಂಗ. ನಾಲಿಗೆ ಇಲ್ಲದಿದ್ದರೆ ಯಾವುದೇ ಆಹಾರ ರುಚಿಸುವುದಿಲ್ಲ.…

ಬೇಸಿಗೆಯಲ್ಲಿ ಕೋಳಿ ಅಥವಾ ಮೀನು?; ತಿನ್ನಲು ಯಾವ ಮಾಂಸ ಉತ್ತಮ? ಇಲ್ಲಿದೆ ಮಾಹಿತಿ.. | Meat

Meat : ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಧಿಕ ಜನರು ತಂಪುಪಾನಿಯಗಳನ್ನು ಸೇವಿಸುತ್ತಾರೆ. ಈ ಸಮಯದಲ್ಲಿ ಹೆಚ್ಚಿನವರು ಹಗುರವಾದ(ಮೃದುವಾದ)…

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…