More

    ಟೀಮ್ ಇಂಡಿಯಾದ ಹೊಸ ಉಪನಾಯಕ ಯಾರು ಗೊತ್ತೇ..?

    ಮೆಲ್ಬೋರ್ನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಶನಿವಾರ ಚಾಲನೆ ಸಿಗಲಿದೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆ ಮೇಲೆ ತವರಿಗೆ ವಾಪಸಾಗಿದ್ದಾರೆ. ಸರಣಿಯ ಉಳಿದ ಮೂರು ಪಂದ್ಯಗಳಿಗೆ ಉಪ ನಾಯಕ ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ. ರಹಾನೆ ಹಂಗಾಮಿ ನಾಯಕನಾಗಿರುವ ಹಿನ್ನೆಲೆಯಲ್ಲಿ ಉಪನಾಯಕ ಕುರಿತು ಚರ್ಚೆ ಶುರುವಾಗಿತ್ತು. ಶುಕ್ರವಾರ ಹನ್ನೊಂದರ ಬಳಗ ಪ್ರಕಟಿಸುವ ವೇಳೆ ಉಪನಾಯಕನನ್ನು ಹೆಸರಿಸಲಾಗಿದೆ. ಅನುಭವಿ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಅವರನ್ನು ಉಪನಾಯಕನಾಗಿ ಆಯ್ಕೆ ಮಾಡಲಾಗಿದೆ.

    ಇದನ್ನೂ ಓದಿ: ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲೂ ಕನ್ನಡಿಗ ಕೆಎಲ್ ರಾಹುಲ್‌ಗೆ ಸ್ಥಾನವಿಲ್ಲ; ಅಭಿಮಾನಿಗಳ ಆಕ್ರೋಶ

    2016-17ರಲ್ಲಿ ಅಜಿಂಕ್ಯ ರಹಾನೆ ಅವರನ್ನು ಭಾರತ ಟೆಸ್ಟ್ ತಂಡದ ಉಪನಾಯಕನಾಗಿ ಆಯ್ಕೆ ಮಾಡಲಾಯಿತು. 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಬಾರಿಗೆ ರಹಾನೆ ತಂಡವನ್ನು ಮುನ್ನಡೆಸಿದ್ದರು. ಇದಾದ ಬಳಿಕ ಅಫ್ಘಾನಿಸ್ತಾನದ ವಿರುದ್ಧದ ಟೆಸ್ಟ್ ಪಂದ್ಯಕ್ಕೂ ರಹಾನೆ ತಂಡದ ಸಾರಥ್ಯ ವಹಿಸಿದ್ದರು. ಇದುವರೆಗೂ ತಂಡ ಮುನ್ನಡೆಸಿರುವ ಎರಡೂ ಬಾರಿಯೂ ರಹಾನೆ ಯಶ ಸಾಧಿಸಿದ್ದು, ಶೇಕಡ 100 ಗೆಲುವಿನ ದಾಖಲೆ ಹೊಂದಿದ್ದಾರೆ. 2010ರಲ್ಲಿ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ ಪೂಜಾರ ಸದ್ಯ ತಂಡದಲ್ಲಿರುವ ಆಟಗಾರರ ಪೈಕಿ ಹಿರಿಯ ಆಟಗಾರ ಎನಿಸಿದ್ದಾರೆ. ಇದುವರೆಗೂ ಭಾರತ ಎ ತಂಡಗಳಿಗೆ ನಾಯಕತ್ವ ವಹಿಸಿದ ಅನುಭವ ಹೊಂದಿರುವ ಪೂಜಾರ ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಉಪನಾಯಕನಾಗಿದ್ದಾರೆ.

    ಇದನ್ನೂ ಓದಿ: ಹೂವುಗಳೆಂದರೆ ಇಷ್ಟ ಎಂದ ಅಥಿಯಾ ಶೆಟ್ಟಿ, ಗುಲಾಬಿ ಕಳುಹಿಸಿದ್ರು ಕೆಎಲ್ ರಾಹುಲ್!

    ಚೇತೇಶ್ವರ್ ಪೂಜಾರ ಇದುವರೆಗೂ ದೇಶೀಯ ಕ್ರಿಕೆಟ್‌ನಲ್ಲಿ ತವರು ಸೌರಾಷ್ಟ್ರ ತಂಡ ಮುನ್ನಡೆಸಿಲ್ಲ. 2014 ರಿಂದೆಚೆಗೆ ಪೂಜಾರ ಭಾರತ ತಂಡದ ಅಧಿಕೃತ ಮೂರನೇ ಉಪನಾಯಕನಾಗಿದ್ದಾರೆ. ಇದಕ್ಕೂ ಮೊದಲು ಇಶಾಂತ್ ಶರ್ಮ ಕೂಡ ಹಂಗಾಮಿ ಉಪನಾಯಕನಾಗಿ ಕಾರ್ಯನಿರ್ವಹಿಸಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತ ಭಾರತ ತಂಡ ಮತ್ತೊಂದು ಹೋರಾಟಕ್ಕೆ ಸಜ್ಜಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts