More

    4ನೇ ಬಾರಿಗೆ ಏಕದಿನ ವಿಶ್ವಕಪ್ ಫೈನಲ್ ಪ್ರವೇಶಿಸಿದ ಭಾರತ ತಂಡ: ಕಿವೀಸ್ ಎದುರು ನೂತನ ದಾಖಲೆ ಬರೆದ ವಿರಾಟ್ ಕೊಹ್ಲಿ

    ಮುಂಬೈ: ಕಳೆದ 10 ವರ್ಷಗಳ ಐಸಿಸಿ ಟ್ರೋಫಿ ಕೊರತೆ ನೀಗಿಸಲು ಟೀಮ್ ಇಂಡಿಯಾಗೆ ಇನ್ನೊಂದು ಗೆಲುವು ಮಾತ್ರ ಬಾಕಿ ಇದೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (117 ರನ್, 113 ಎಸೆತ, 9 ಬೌಂಡರಿ, 2 ಸಿಕ್ಸರ್) ಏಕದಿನ ಕ್ರಿಕೆಟ್‌ನ 50ನೇ ಶತಕ ಹಾಗೂ ಶ್ರೇಯಸ್ ಅಯ್ಯರ್ (105 ರನ್, 70 ಎಸೆತ, 4 ಬೌಂಡರಿ, 8 ಸಿಕ್ಸರ್) ಸತತ 2ನೇ ಶತಕದ ಸಾಹಸ ಮತ್ತು ವೇಗಿ ಮೊಹಮದ್ ಶಮಿ (57ಕ್ಕೆ 7) ಮಾರಕ ದಾಳಿಯ ನೆರವಿನಿಂದ ಭಾರತ ತಂಡ ಏಕದಿನ ವಿಶ್ವಕಪ್‌ನ ಮೊದಲ ಸೆಮಿೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು 70 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ರೋಹಿತ್ ಶರ್ಮ ಪಡೆ ಸತತ 10ನೇ ಜಯದೊಂದಿಗೆ ಅಜೇಯವಾಗಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ. ಈ ಮೂಲಕ 3ನೇ ಮತ್ತು ತವರಿನಲ್ಲಿ 2ನೇ ಬಾರಿ ವಿಶ್ವವಿಕ್ರಮ ಸಾಧಿಸುವ ಸನಿಹದಲ್ಲಿದೆ.
    ಬುಧವಾರ ನಡೆದ ಉಪಾಂತ್ಯ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಭಾರತಕ್ಕೆ, ಐಸಿಸಿ ನಾಕೌಟ್ ಪಂದ್ಯಗಳ ವೈಲ್ಯವನ್ನು ನೀಗಿಸುವ ಮೂಲಕ ಸ್ಟಾರ್ ಬ್ಯಾಟರ್‌ಗಳು ಕೈಹಿಡಿದರು. ಶುಭಮಾನ್ ಗಿಲ್ (80* ರನ್, 66 ಎಸೆತ, 8 ಬೌಂಡರಿ, 3 ಸಿಕ್ಸರ್) ಆಕರ್ಷಕ ಬ್ಯಾಟಿಂಗ್ ಹಾಗೂ ವಿರಾಟ್ ಕೊಹ್ಲಿ-ಶ್ರೇಯಸ್ ಅಯ್ಯರ್ ಅವಳಿ ಶತಕಗಳ ಬಲದಿಂದ ಭಾರತ 4 ವಿಕೆಟ್‌ಗೆ 397 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಪ್ರತಿಯಾಗಿ ಡೆರಿಲ್ ಮಿಚೆಲ್ (134 ರನ್, 119 ಎಸೆತ, 9 ಬೌಂಡರಿ, 7 ಸಿಕ್ಸರ್) ಹೋರಾಟಯುತ ಶತಕದ ನಡುವೆ, ಶಮಿ ದಾಳಿಗೆ ನಲುಗಿದ ನ್ಯೂಜಿಲೆಂಡ್ 48.5 ಓವರ್‌ಗಳಲ್ಲಿ 327 ರನ್‌ಗಳಿಗೆ ಸರ್ವಪತನ ಕಂಡಿತು.

    8: ವಿರಾಟ್ ಕೊಹ್ಲಿ ಏಕದಿನ ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ಬಾರಿ 50 ಪ್ಲಸ್ ರನ್‌ಗಳಿಸಿದ ಸಚಿನ್ ತೆಂಡುಲ್ಕರ್ (7) ದಾಖಲೆಯನ್ನು ಹಿಂದಿಕ್ಕಿದರು.

    5: ವಿರಾಟ್ ಕೊಹ್ಲಿ ಏಕದಿನ ವಿಶ್ವಕಪ್‌ನಲ್ಲಿ 3ನೇ ಗರಿಷ್ಠ ಶತಕ ಬಾರಿಸಿದ ರಿಕಿ ಪಾಂಟಿಂಗ್, ಕುಮಾರ್ ಸಂಗಕ್ಕರ ಸಾಧನೆ ಸರಿಗಟ್ಟಿದರು. ರೋಹಿತ್ ಶರ್ಮ (7), ತೆಂಡುಲ್ಕರ್, ವಾರ್ನರ್ (6) ಮುಂಚೂಣಿಯಲ್ಲಿದ್ದಾರೆ.

    3: ಕೊಹ್ಲಿ, ಶ್ರೇಯಸ್ ಶತಕದೊಂದಿಗೆ ಏಕದಿನ ವಿಶ್ವಕಪ್ ಸೆಮೀಸ್‌ನಲ್ಲಿ ಭಾರತದ ಶತಕವೀರರ ಸಂಖ್ಯೆ 3ಕ್ಕೇರಿದೆ. ಸೌರವ್ ಗಂಗೂಲಿ (2003) ಇದುವರೆಗಿನ ಏಕೈಕ ಸಾಧಕರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts