More

    ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ

    ಮುಂಬೈ: ಪಿತೃ ಶೋಕದಲ್ಲಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತವರಿನಲ್ಲಿ ಮುಂಬರುವ ಇಂಗ್ಲೆಂಡ್ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯ ಆರಂಭಿಕ ಎರಡು ಪಂದ್ಯಗಳಿಗೆ 18 ಸದಸ್ಯರ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸ್ಪಿನ್ ವಿಭಾಗವನ್ನು ಮತ್ತಷ್ಟು ಬಲಗೊಳಿಸುವ ದೃಷ್ಟಿಯಿಂದ ಗುಜರಾತ್‌ನ ಅಕ್ಷರ್ ಪಟೇಲ್‌ಗೆ ಮಣೆ ಹಾಕಲಾಗಿದೆ. ಆಯ್ಕೆ ಸಮಿತಿಯ ನೂತನ ಅಧ್ಯಕ್ಷ ಚೇತನ್ ಶರ್ಮ ಸಾರಥ್ಯದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ತಂಡ ಆಯ್ಕೆ ಮಾಡಲಾಯಿತು. ಮಂಗಳವಾರ ನಡೆದ ವರ್ಚುವಲ್ ಸಭೆಯಲ್ಲಿ ನಾಯಕ ವಿರಾಟ್ ಕೊಹ್ಲಿ ಕೂಡ ಭಾಗವಹಿಸಿದ್ದರು. ಪಿತೃತ್ವ ರಜೆ ಮೇಲೆ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಮುಕ್ತಾಯದ ಬೆನ್ನಲ್ಲೇ ತವರಿಗೆ ವಾಪಸಾಗಿದ್ದರು. ಆಯ್ಕೆ ಸಮಿತಿ ಸದಸ್ಯರಾದ ಕನ್ನಡಿಗ ಸುನೀಲ್ ಜೋಶಿ, ಅಭಯ್ ಕುರುವಿಲ್ಲ, ದೇಬಾಶಿಶ್ ಮೊಹಂತಿ ಹಾಗೂ ಆಸ್ಟ್ರೇಲಿಯಾದಲ್ಲಿರುವ ಹರ್ವೀಂದರ್ ಸಿಂಗ್ ವರ್ಚುವಲ್ ಸಭೆಯಲ್ಲಿ ಹಾಜರಿದ್ದರು. ಆಸೀಸ್ ಪ್ರವಾಸದಲ್ಲಿ ಕಳಪೆ ಫಾರ್ಮ್‌ನಿಂದ ಟೀಕೆಗೆ ಗುರಿಯಾಗಿದ್ದ ಪೃಥ್ವಿ ಷಾಗೆ ನಿರೀಕ್ಷೆಯಂತೆ ಕೊಕ್ ನೀಡಲಾಗಿದೆ.

    ಇದನ್ನೂ ಓದಿ: ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿ ವಶ: ಇತಿಹಾಸ ಬರೆದ ಟೀಮ್ ಇಂಡಿಯಾ ಯುವ ಪಡೆ

    4 ಮೀಸಲು ಆಟಗಾರರು
    18 ಮಂದಿ ಆಟಗಾರರ ಜತೆಗೆ 4 ಮೀಸಲು ಆಟಗಾರರನ್ನು ಪ್ರಕಟಿಸಲಾಗಿದೆ. ಒಂದು ವೇಳೆ ಗಾಯದ ಸಮಸ್ಯೆ ಎದುರಾದರೆ ಮುನ್ನೆಚ್ಚರಿಕೆ ಕ್ರಮವಾಗಿ ಮೀಸಲು ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಮೀಸಲು ಆಟಗಾರರು ತಂಡದೊಂದಿಗೆ ಪ್ರಯಾಣಿಸುತ್ತಿಲ್ಲ. ಅಗತ್ಯವಿದ್ಧರಷ್ಟೇ ತಂಡಕ್ಕೆ ಕರೆಯಾಗುತ್ತದೆ.

    * 5 ನೆಟ್ ಬೌಲರ್‌ಗಳು
    ಕರೊನಾ ವೈರಸ್ ಭೀತಿಯಿಂದಾಗಿ ಬಯೋ ಬಬಲ್ ವಾತಾವರಣದಲ್ಲಿ ಸರಣಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕನ್ನಡಿಗ ಆಲ್ರೌಂಡರ್ ಕೆ.ಗೌತಮ್ ಸೇರಿದಂತೆ ಐವರು ನೆಟ್ ಬೌಲರ್‌ಗಳನ್ನು ಆಯ್ಕೆ ಮಾಡಲಾಗಿದೆ. ಬಯೋ ಸುರಕ್ಷತೆಯಿಂದಾಗಿ ಸ್ಥಳೀಯ ಬೌಲರ್‌ಗಳನ್ನು ನೆಟ್‌ಬೌಲರ್‌ಗಳನ್ನಾಗಿ ಬಳಸಿಕೊಳ್ಳುವಂತಿಲ್ಲ. 2 ಸ್ಪಿನ್ನರ್‌ಗಳು ಹಾಗೂ ಮೂವರು ವೇಗಿಗಳನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ಬಲಗೈ ಆ್ ಸ್ಪಿನ್ನರ್ ಆಗಿರುವ ಕೆ.ಗೌತಮ್ ಟೀಮ್ ಇಂಡಿಯಾ ಆಟಗಾರರ ಅಭ್ಯಾಸದ ವೇಳೆ ನೆಟ್ಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಇದನ್ನೂ ಓದಿ: ಜಾಹ್ನವಿ ಆಯ್ತು, ಈಗ ಆಕೆಯ ತಂಗಿಯೂ ಬಣ್ಣ ಹಚ್ಚಲು ರೆಡಿ

    ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ, ಶುಭಮಾನ್ ಗಿಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್, ವೃದ್ಧಿಮಾನ್ ಸಾಹ, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ (ಫಿಟ್ ಆದರೆ, ಮೊದಲ ಪಂದ್ಯಕ್ಕೆ ಆಯ್ಕೆ), ಜಸ್‌ಪ್ರೀತ್ ಬುಮ್ರಾ, ಇಶಾಂತ್ ಶರ್ಮ, ಮೊಹಮದ್ ಸಿರಾಜ್, ಶಾರ್ದೂಲ್ ಠಾಕೂರ್, ಆರ್.ಅಶ್ವಿನ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್.

    * ಮೀಸಲು ಆಟಗಾರರು: ಕೆಎಸ್ ಭರತ್ (ವಿಕೀ), ಅಭಿಮನ್ಯ ಈಶ್ವರನ್, ಶಾಬಾಜ್ ನದೀಂ, ರಾಹುಲ್ ಚಹರ್.
    * ನೆಟ್ ಬೌಲರ್‌ಗಳು: ಅಂಕಿತ್ ರಜಪೂತ್, ಅವೇಶ್ ಖಾನ್, ಸಂದೀಪ್ ವಾರಿಯರ್, ಕೆ.ಗೌತಮ್, ಸೌರಭ್ ಕುಮಾರ್.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts