More

    ಏಷ್ಯನ್ ದಾಖಲೆ ಬರೆದರೂ ಫೈನಲ್‌ಗೇರಲು ಪುರುಷರ ರಿಲೇ ತಂಡ ವಿಫಲ

    ಟೋಕಿಯೊ: ಭಾರತ ತಂಡ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ 4/400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಏಷ್ಯನ್ ದಾಖಲೆ ನಿರ್ಮಿಸಿದರೂ ಫೈನಲ್ ಪ್ರವೇಶಿಸಲು ವಿಫಲವಾಯಿತು. ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಮೊಹಮದ್ ಅನಾಸ್ ಯಹಿಯಾ, ಟಾಮ್ ನೊಹ ನಿರ್ಮಲ್, ರಾಜೀವ್ ಅರೊಕಿಯಾ ಹಾಗೂ ಅಮೋಜ್ ಜೇಕಬ್ ಒಳಗೊಂಡ ಭಾರತ ತಂಡ ಹೀಟ್ಸ್‌ನಲ್ಲಿ 3 ನಿಮಿಷ 00.25ಸೆಕೆಂಡ್‌ಗಳಲ್ಲಿ ಕ್ರಮಿಸಿತು. ಆದರೆ, ಒಟ್ಟಾರೆ 9ನೇ ಸ್ಥಾನ ಪಡೆದ ಭಾರತ ತಂಡ ಕೇವಲ 1 ಸ್ಥಾನದ ಹಿನ್ನಡೆಯಿಂದ ಫೈನಲ್ ಪ್ರವೇಶಿಸಲು ವಿಫಲವಾಯಿತು.

    ಇದನ್ನೂ ಓದಿ: ಆ.29ರಿಂದ ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜು

    ಕತಾರ್ ತಂಡದ (3ನಿ.00.56ಸೆ) ಹೆಸರಿನಲ್ಲಿದ್ದ ಏಷ್ಯನ್ ದಾಖಲೆಯನ್ನು ಭಾರತ ಮುರಿಯಿತು. ಕಡೇ ಲ್ಯಾಪ್‌ನಲ್ಲಿ ಓಡಿದ ಜಾಕಬ್, 44.68 ಸೆಕೆಂಡ್‌ಗಳಲ್ಲಿ ಕ್ರಮಿಸಿದರು. 3ನೆಯವರಾಗಿ ಓಡಿದ ರಾಜೀವ್ ಅರೊಕಿಯಾರಿಂದ (44.84ಸೆ) ಬ್ಯಾಟನ್ ಪಡೆದ ವೇಳೆ ಭಾರತ ತಂಡ 6ನೇ ಸ್ಥಾನದಲ್ಲಿತ್ತು. ಕಡೇ ಲ್ಯಾಪ್‌ನಲ್ಲಿ ಜೇಕಬ್ ಭರ್ಜರಿ ನಿರ್ವಹಣೆ ತೋರಿದರು.

    ಗುರ್‌ಪ್ರೀತ್ ಸಿಂಗ್ ವಿಫಲ: ಭಾರತದ ಗುರ್‌ಪ್ರೀತ್ ಸಿಂಗ್, ಪುರುಷರ 50 ಕಿಲೋಮೀಟರ್ ನಡಿಗೆ ಸ್ಪರ್ಧೆಯನ್ನು ಪೂರೈಸಲು ವಿಫಲರಾದರು. ಟೋಕಿಯೊದ ಬಿಸಿಲಿಗೆ ಬಳಲಿದ ಗುರ್‌ಪ್ರೀತ್ ಸಿಂಗ್ 35 ಕಿಲೋಮೀಟರ್ ಪೂರೈಸಿದ ಬಳಿಕ ಕಾಲಿನ ಸೆಳೆತಕ್ಕೆ ಒಳಗಾದರು. 37 ವರ್ಷದ ಗುರ್ ಪ್ರೀತ್ ಸಿಂಗ್, ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದ ಅಥ್ಲೀಟ್‌ಗಳ ಪೈಕಿ ಅತಿಕಡಿಮೆ ರ‌್ಯಾಂಕಿಂಗ್ ಹೊಂದಿದ್ದರು. 35 ಕಿಲೋಮೀಟರ್ ಮುಕ್ತಾಯದ ವೇಳೆಗೆ 51ನೇ ಸ್ಥಾನದಲ್ಲಿದ್ದರು. 2 ಗಂಟೆ 55.19 ನಿಮಿಷಗಳಲ್ಲಿ ಈ ದೂರ ಕ್ರಮಿಸಿದ್ದರು. ಭಾರಿ ಬಿಸಿಲಿನಿಂದ 59 ಸ್ಪರ್ಧಿಗಳ ಪೈಕಿ 12 ಮಂದಿ ಪೂರ್ಣಗೊಳಿಸಲು ವಿಫಲರಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts