More

    ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಖಚಿತಪಡಿಸಿದ ಭವಿನಾಬೆನ್ ಪಟೇಲ್

    ಟೋಕಿಯೊ: ಭಾರತದ ಭವಿನಾಬೆನ್ ಪಟೇಲ್, ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಮಹಿಳೆಯರ ಟೇಬಲ್ ಟೆನಿಸ್ ಕ್ಲಾಸ್-4 ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಪದಕ ಖಚಿತಪಡಿಸಿದ್ದಾರೆ. ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭವಿನಾಬೆನ್ 3-0 ನೇರ ಗೇಮ್‌ಗಳಿಂದ ಹಾಲಿ ಚಾಂಪಿಯನ್ ಸೆರ್ಬಿಯಾದ ಪೆರಿಕ್ ರ‌್ಯಾನ್ಕೊವಿಕ್ ಅವರನ್ನು ಸೋಲಿಸಿದರು. ಪ್ಯಾರಾಲಿಂಪಿಕ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದರೆ ಪದಕ ಖಚಿತವಾಗುತ್ತದೆ. ಕಂಚಿನ ಪದಕಕ್ಕಾಗಿ ಪ್ರತ್ಯೇಕ ಪಂದ್ಯ ನಡೆಯುವುದಿಲ್ಲ.

    ಇದನ್ನೂ ಓದಿ:2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಸಿದ್ಧತೆ ಆರಂಭಿಸಿದ ಮೀರಾಬಾಯಿ ಚಾನು

    ಪ್ಯಾರಾಲಿಂಪಿಕ್ಸ್ ಟೇಬಲ್ ಟೆನಿಸ್‌ನಲ್ಲಿ ಎಂಟರಘಟ್ಟಕ್ಕೇರಿದ ಭಾರತದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ 34 ವರ್ಷದ ಭವಿನಾಬೆನ್ ಇದೀಗ ಉಪಾಂತ್ಯಕ್ಕೇರುವ ಮೂಲಕ ಇತಿಹಾಸ ಬರೆದರು. ಭವಿನಾಬೆನ್ 11-5, 11-6, 11-7 ರಿಂದ ಸೆರ್ಬಿಯಾ ಆಟಗಾರ್ತಿ ಎದುರು ಕೇವಲ 18 ನಿಮಿಷಗಳಲ್ಲಿ ಜಯ ದಾಖಲಿಸಿದರು. ಇದಕ್ಕೂ ಮೊದಲು ನಡೆದ 16ರ ಘಟ್ಟದ ಪಂದ್ಯದಲ್ಲಿ ಭವಿನಾಬೆನ್ ಪಟೇಲ್ 12-10, 13-11, 11-6 ರಿಂದ ಬ್ರೆಜಿಲ್‌ನ ಜಾಯ್ಸಿ ಡಿ ಒಲಿವೇರಿಯಾ ಅವರನ್ನು ಕೇವಲ 23 ನಿಮಿಷಗಳಲ್ಲಿ ಮಣಿಸಿದರು.

    ಇದನ್ನೂ ಓದಿ: ಆರ್‌ಸಿಬಿ ತಂಡಕ್ಕೆ ಮತ್ತೊಬ್ಬ ಹೊಸ ಆಟಗಾರ

    * ಕರ್ನಾಟಕದ ಸಕಿನಾ ಖತುನ್‌ಗೆ 5ನೇ ಸ್ಥಾನ
    ಕರ್ನಾಟಕದ ಸಕಿನಾ ಖತುನ್, ಮಹಿಳೆಯರ 50 ಕೆಜಿ ವಿಭಾಗದ ಪವರ್‌ಲಿಫ್ಟಿಂಗ್ ವಿಭಾಗದಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. 2014ರ ಕಾಮನ್ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತೆ ಸಕಿನಾ, ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ವೈಯಕ್ತಿಕ ಶ್ರೇಷ್ಠ ನಿರ್ವಹಣೆ ತೋರಿ 93 ಕೆಜಿ ಭಾರ ಎತ್ತಿದರು. ಇದೇ ವಿಭಾಗದಲ್ಲಿ ಚೀನಾದ ದಡನ್ ಹು 120 ಕೆಜಿ ಭಾರ ಎತ್ತಿ ಸ್ವರ್ಣ ಗೆದ್ದರೆ, ಈಜಿಪ್ಟ್‌ನ ರೆಹಾಬ್ ಅಹಮದ್ ಕೂಡ 120 ಕೆಜಿ ಭಾರ ಹಾಗೂ ಬ್ರಿಟನ್‌ನ ಒಲಿವಿಯಾ ಬ್ರೋಮೆ 107 ಕೆಜಿ ಭಾರ ಎತ್ತುವ ಮೂಲಕ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts